ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿವೆ ಕಾಪಾಡಿ.. ಕೆಲವೇ ಕ್ಷಣದಲ್ಲಿ ಸೊಳ್ಳೆ ಬತ್ತಿ ಕೊಟ್ಟ ಪೊಲೀಸ್!

Wife bitten by mosquitoes in hospital man seeks help from UP Police Heres what they did

ಉತ್ತರಪ್ರದೇಶ: ಆರಕ್ಷಕರು ಜನಸಾಮಾನ್ಯರ ರಕ್ಷಣೆಯಲ್ಲಿ ಸದಾ ನಿರತರಾಗಿರುತ್ತಾರೆ. ಯಾವುದೇ ಸಂದರ್ಭದಲ್ಲೂ ರಕ್ಷಣೆಗೆ ನಿಲ್ಲುತ್ತಾರೆ ಎನ್ನುವುದಕ್ಕೆ ಉತ್ತರ ಪ್ರದೇಶ ಪೊಲೀಸರು ಸಾಕ್ಷಿಯಾಗಿದ್ದಾರೆ.

ರಾಜ್​ ಮೊಹಲ್ಲಾ ನಿವಾಸಿಯಾದ ಅಸಾದ್​ ಖಾನ್​ ಎಂಬಾತನ ಪತ್ನಿ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಚಂದೌಸಿಯಲ್ಲಿರುವ ಹರಿಪ್ರಕಾಶ್​ ನರ್ಸಿಂಗ್​ ಹೋಮ್​​ಗೆ ದಾಖಲಾಗಿದ್ದರು. ಆಕೆಗೆ ಅಲ್ಲಿ ಹೆಣ್ಣು ಮಗು ಜನನವಾಯಿತು. ಆದರೆ ಅಲ್ಲಿ ಸಿಕ್ಕಾಪಟೆ ಸೊಳ್ಳೆಯಿದ್ದ ಕಾರಣ ಮಹಿಳೆ ತೊಂದರೆಪಡುತ್ತಿದ್ದರು. ಪತ್ನಿಯ ಕಷ್ಟವನ್ನು ನೋಡಿದ ಪತಿ ಒಂದು ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ. ಪತಿಯ ಈ ಉಪಾಯವನ್ನು ನೋಡಿ ನೆಟ್ಟಿಗರು ಆಶ್ಚರ್ಯವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ:  ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9 ಲಕ್ಷ ರೂ….16 ಲಕ್ಷ ರೂ.ಬೆಲೆ ಬಾಳುವ ಸೀರೆಗಳು ವಶಕ್ಕೆ!

ಟ್ವೀಟ್​​ನಲ್ಲಿ ಏನಿದೆ?: ನನ್ನ ಪತ್ನಿ ತುಂಬು ಗರ್ಭಿಣಿ. ಆಕೆಗೆ ಹೆರಿಗೆ ನೋವು ಶುರುವಾಗಿರುವುದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಪ್ರಕಾಶ್​ ನರ್ಸಿಂಗ್​ ಹೋಂನಲ್ಲಿ ನನ್ನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಇಲ್ಲಿ ಸಿಕ್ಕಾಪಟೆ ಸೊಳ್ಳೆಗಳು ಕಚ್ಚುತ್ತಿವೆ. ದಯವಿಟ್ಟು ನನಗೆ ಸೊಳ್ಳೆಬತ್ತಿ ಕೊಟ್ಟು ಉಪಕಾರ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ಗೆ ಉತ್ತರ ಪ್ರದೇಶದ ಪೊಲೀಸ್​ ಮತ್ತು ಸಂಭಾಲ್​ ನಗರದ ಪೊಲೀಸರನ್ನು ಟ್ಯಾಗ್​ ಮಾಡಿದ್ದರು.

ಅದಾಗಿ ಕೆಲವೇ ನಿಮಿಷಗಳಲ್ಲಿ ಉತ್ತರ ಪ್ರದೇಶ ಪೊಲೀಸರು ಸೊಳ್ಳೆ ಬತ್ತಿ ಹಿಡಿದುಕೊಂಡು ಆಸ್ಪತ್ರೆಗೆ ಬಂದು ಅದನ್ನು ಅಸಾದ್ ಖಾನ್​ಗೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಯುಪಿ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ:  ಬೆನ್ನು ನೋವಿನ ಭಯ; ಇನ್ಮುಂದೆ ಸಾಮಿ..ಸಾಮಿ ಎಂದು ಕುಣಿಯಲ್ಲ ಎಂದ ರಶ್ಮಿಕಾ!

ಹೆರಿಗೆಗಾಗಿ ನರ್ಸಿಂಗ್​ಹೋಮ್​​ಗೆ ದಾಖಲಾಗಿದ್ದ ತನ್ನ ಪತ್ನಿಗೆ ಸೊಳ್ಳೆಗಳು ಕಚ್ಚುತ್ತಿವೆ ಎಂದು ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದರಿಂದ ಅವರಿಗೆ ಸಹಾಯ ಮಾಡುವ ಸಲುವಾಗಿ, ತ್ವರಿತವಾಗಿ ಸೊಳ್ಳೆ ಬತ್ತಿ ನೀಡಲಾಯಿತು. ಮಾಫಿಯಾವನ್ನು ಬಗ್ಗುಬಡಿಯುವುದರಿಂದ ಹಿಡಿದು, ಸೊಳ್ಳೆಗಳಿಂದ ಪರಿಹಾರ ನೀಡುವುದರವರೆಗೆ ಎಲ್ಲದಕ್ಕೂ ಸಿದ್ಧ’ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಹಾಗೇ, ಅಸಾದ್ ಖಾನ್​ ಕೂಡ ಉತ್ತರ ಪ್ರದೇಶ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.

https://twitter.com/Uppolice/status/1637841415249051651/retweets

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…