More

    ಬಾಬರಿ ಕಟ್ಟಡ ಧ್ವಂಸ ಕೇಸ್​: ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಇನ್ನುಳಿದ ವಿಚಾರಣೆ…

    ಲಖನೌ: ದೇಶದ ಗಮನಸೆಳೆದ ಬಾಬರಿ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆಯ ಉಳಿದ ಭಾಗವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂದುವರಿಸಲುಯ ವಿಶೇಷ ಸಿಬಿಐ ಕೋರ್ಟ್ ನಿರ್ಧರಿಸಿದೆ. ಬಾಬರಿ ಕಟ್ಟಡ ಧ್ವಂಸ ಪ್ರಕರಣ 1992ರಲ್ಲಿ ನಡೆದಿದ್ದು, ಅದರ ವಿಚಾರಣೆ ಇನ್ನೂ ಮುಂದುವರಿದಿದೆ.

    ಇದನ್ನೂ ಓದಿ: ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಬೇಗ ಮುಗಿಸಿ: ಸುಪ್ರೀಂ ಕೋರ್ಟ್ ಆದೇಶ

    ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್​ 31ರ ಒಳಗೆ ಮುಗಿಸುವಂತೆ ಸ್ಪೆಷಲ್ ಕೋರ್ಟ್​ಗೆ ಸುಪ್ರೀಂ ಕೋರ್ಟ್ ಮೇ 8ರಂದು ನಿರ್ದೇಶಿಸಿತ್ತು. ಇದಕ್ಕೂ ಮುನ್ನ, ಏಪ್ರಿಲ್ 20ರೊಳಗೆ ವಿಚಾರಣೆ ಮುಗಿಯಬೇಕು ಎಂಬ ಗಡುವನ್ನು ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್ 19 ವೈರಸ್ ಸೋಂಕು ವ್ಯಾಪಿಸಿ ಲಾಕ್​ಡೌನ್ ಘೋಷಣೆಯಾದ ಕಾರಣ ಈ ಗಡುವಿನೊಳಗೆ ವಿಚಾರಣೆ ಪೂರ್ಣಗೊಂಡಿಲ್ಲ.

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಬಿಜೆಪಿ ನಾಯಕರಾದ ಎಲ್​.ಕೆ.ಆಡ್ವಾಣಿ, ಮುರಳಿಮನೋಹರ ಜೋಷಿ, ಸಾಧ್ವಿ ಉಮಾಭಾರತಿ, ವಿಶ್ವಹಿಂದು ಪರಿಷದ್ ನಾಯಕ ಚಂಪತ್ ರಾಯ್ ಬನ್ಸಾಲ್​ ಮತ್ತು ಇತರರು ಈ ಪ್ರಕರಣದ ಪ್ರಮುಖ ಆರೋಪಿಗಳು. ಸಿಬಿಐ ದಾಖಲಿಸಿದ ವಿಚಾರಣಾ ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿಕೊಂಡಿದೆ. ಇನ್ನು, ಆರೋಪಿಗಳ ವಿರುದ್ಧ ಇರುವಂತಹ ಸಾಕ್ಷ್ಯಗಳು ಏನೇನು, ಆರೋಪಗಳೇನು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯುತ್ತಿದೆ.

    ಇದನ್ನೂ ಓದಿ:  ಸೆಕೆಂಡ್​ ಪಿಯು ವಿದ್ಯಾರ್ಥಿಗಳ ಗಮನಕ್ಕೆ- ಇಂಗ್ಲಿಷ್ ಪರೀಕ್ಷೆ ನೀವಿರುವ ಜಿಲ್ಲೆಯಿಂದಲೇ ಬರೀತೀರಾ? – ಈ ಸುದ್ದಿ ಓದಿ..

    ಇದೇ ವೇಳೆ, ಪ್ರತಿವಾದಿಗಳ ಕಡೆಯಿಂದ ಕೋರ್ಟ್​ಗೆ ಶುಕ್ರವಾರ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಮೂವರು ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸುವಂತೆ ಕೋರಲಾಗಿದೆ. ಈ ಸಾಕ್ಷಿಗಳು 2016-17ರಲ್ಲಿ ಸಾಕ್ಷ್ಯ ನುಡಿದಿದ್ದರು. ಅಂದು ಅವರನ್ನು ಪಾಟೀ ಸವಾಲಿಗೆ ಒಳಪಡಿಸಲಾಗಿರಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ವಿಶೇಷ ನ್ಯಾಯಾಧೀಶ ಎಸ್​.ಕೆ.ಯಾದವ್​, ಈ ವಿಚಾರಣಾ ಸಾಕ್ಷಿಗಳನ್ನು ಪಾಟೀಸವಾಲಿಗೆ ಒಳಪಡಿಸಲು ಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಒದಗಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 18ರಂದು ನಡೆಯಲಿದೆ. (ಏಜೆನ್ಸೀಸ್)

    ಹೆಂಡ್ತಿ ಡೈವೋರ್ಸ್ ಕೇಳಿದ್ಳು.. ಗಂಡ ಆಕೆಯ ಮೂಗನ್ನೇ ಕತ್ತರಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts