More

    ಎಲ್ಲ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಮೋದಿ; ಲಾಕ್​ಡೌನ್​ ಮುಂದುವರಿಸುವುದು ಬಹುತೇಕ ಖಚಿತ…

    ನವದೆಹಲಿ: ಲಾಕ್​ಡೌನ್​ ಎರಡನೇ ಅವಧಿ ಮೇ 3ಕ್ಕೆ ಮುಕ್ತಾಯ ಆಗಲಿದೆ. ಆದರೆ ದೇಶದಲ್ಲಿ ಇನ್ನೂ ಅನೇಕ ರಾಜ್ಯಗಳಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹೀಗಿರುವಾಗ ಲಾಕ್​ಡೌನ್​ ಮುಂದುವರಿಸಬೇಕಾ? ಇನ್ನೆಷ್ಟು ಸಡಿಲಿಕೆ ಮಾಡಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಇಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದರು.

    ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಇನ್ನುಳಿದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಗೃಹ ಸಚಿವ ಅಮಿತ್​ ಷಾ ಕೂಡ ಉಪಸ್ಥಿತರಿದ್ದರು.

    ಈ ವೇಳೆ ನರೇಂದ್ರ ಮೋದಿಯವರು ಕರೊನಾ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್​ನಿಂದ ತುಂಬ ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರದೊಂದಿಗೆ ಎಲ್ಲ ರಾಜ್ಯಗಳೂ ಒಗ್ಗಟ್ಟಾಗಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಗೇ ಆಯಾ ರಾಜ್ಯಗಳಲ್ಲಿ ಸಾರ್ವಜನಿಕರ ಆರೋಗ್ಯ, ಲಾಕ್​ಡೌನ್​ ಪರಿಸ್ಥಿತಿ ನಿಭಾಯಿಸುತ್ತಿರುವ ಎಲ್ಲ ಮುಖ್ಯಮಂತ್ರಿಗಳನ್ನೂ ಹೊಗಳಿದ್ದಾರೆ.

    ಇನ್ನು ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್​ಡೌನ್​ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ. ಮೇ 16ರವರೆಗೆ ಲಾಕ್​ಡೌನ್​ ಇರಲಿ, ಆದರೆ ಮೇ 3ರ ಬಳಿಕ ಗ್ರೀನ್​ ಜೋನ್​ಗಳಲ್ಲಿ ಶೇ.50ರಷ್ಟು ಸಡಿಲಿಕೆ ಆದರೆ ಒಳಿತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮೇ 3ರ ನಂತರವೂ ಮುಂದುವರಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

    ವಿದೇಶದಲ್ಲಿರುವ 6,300 ಭಾರತೀಯರಿಗೆ ವೈರಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts