More

    ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಬೇಗ ಮುಗಿಸಿ: ಸುಪ್ರೀಂ ಕೋರ್ಟ್ ಆದೇಶ

    ನವದೆಹಲಿ: ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸುವಂತೆ ಲಖನೌನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ.

    ವಿಚಾರಣೆ ತ್ವರಿತಗೊಳಿಸಲು ವಿಡಿಯೋ ಕಾನ್ಫರೆನ್ಸ್ ತಂತ್ರಜ್ಞಾನ ಬಳಕೆ ಮಾಡುವಂತೆ ನ್ಯಾಯಮೂರ್ತಿ ಆರ್.ಎ್. ನಾರಿಮನ್ ನೇತೃತ್ವದ ಪೀಠ ಸಲಹೆ ನೀಡಿದೆ.

    ಅಯೋಧ್ಯೆಯಲ್ಲಿ ಜಮಾಯಿಸಿದ್ದ ಕರಸೇವಕರು 1992ರ ಡಿಸೆಂಬರ್ 6ರಂದು ವಿವಾದಿತ ಕಟ್ಟಡವನ್ನು ನೆಲಸಮ ಮಾಡಿದರು. ಇದಕ್ಕೆ ಪ್ರಚೋದನೆ ನೀಡಿದ ಆಪಾದನೆ ಮೇಲೆ ಬಿಜೆಪಿಯ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ ಸಿಂಗ್, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ ರಿಯಾಜ್ ನಾಯ್ಕೂ ಹತ್ಯೆ ಬಳಿಕ ಹಿಜ್ಬುಲ್ ಮುಜಾಹಿದೀನ್‌ಗೆ ಬಂದ ಹೊಸ ಕಮಾಂಡರ್!

    ಆರೋಪಿಗಳಾದ ಗಿರಿರಾಜ್ ಕಿಶೋರ್, ವಿಶ್ವಹಿಂದೂ ಪರಿಷದ್‌ನ ಮುಖಂಡ ಅಶೋಕ್ ಸಿಂಘಾಲ್, ವಿಷ್ಣು ಹರಿ ದಾಲ್ಮಿಯಾ ವಿಧಿವಶರಾಗಿದ್ದಾರೆ. ಕಲ್ಯಾಣಸಿಂಗ್ ರಾಜಸ್ಥಾನದ ರಾಜ್ಯಪಾಲರಾಗಿದ್ದ (ಸಾಂವಿಧಾನಿಕ ಹುದ್ದೆ) ಕಾರಣ ಅವರಿಗೆ ವಿಚಾರಣೆಯಿಂದ ವಿನಾಯಿತಿ ಇತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ನಿವೃತ್ತರಾದ ನಂತರವಷ್ಟೆ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

    ಈ ಪ್ರಕರಣದ ವಿಚಾರಣೆ ಮುಗಿಸಲು ಈ ಹಿಂದೆಯೂ ಗಡುವು ನಿಗದಿಯಾಗಿತ್ತು. ಮೊದಲು 2019ರ ಜುಲೈ ಅಂತ್ಯಕ್ಕೆ ವಿಚಾರಣೆ ಮುಗಿಸಲು ಸುಪ್ರೀಂಕೋರ್ಟ್ 2017ರ ಏಪ್ರಿಲ್‌ನಲ್ಲಿ ಸೂಚನೆ ನೀಡಿತ್ತು. ನಂತರ ಹಲವು ಬಾರಿ ವಿವಿಧ ಕಾರಣಕ್ಕೆ ಇದು ವಿಸ್ತರಣೆಯಾಗಿತ್ತು. ಇತ್ತೀಚೆಗೆ ಕರೊನಾ ಕಾರಣ ಲಾಕ್‌ಡೌನ್ ಜಾರಿಯಾಗಿದ್ದರಿಂದ ವಿಚಾರಣೆ ವಿಳಂಬವಾಯಿತು. ಗಡುವು ವಿಸ್ತರಿಸುವಂತೆ ಜಡ್ಜ್ ಎಸ್.ಕೆ.ಯಾದವ್ ಸುಪ್ರೀಂಕೋರ್ಟ್‌ಗೆ ಮೇ 6ರಂದು ಪತ್ರ ಬರೆದಿದ್ದರು.

    ಇದನ್ನೂ ಓದಿ ಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!

    2017ರ ಏ. 19ರಂದು ಆಪಾದಿತರ ವಿರುದ್ಧ ಕ್ರಿಮಿನಲ್ ಒಳಸಂಚಿನ ಆರೋಪವನ್ನೂ ಸೇರಿಸಲಾಯಿತು. ಜತೆಗೆ ಬಾಬ್ರಿ ಕಟ್ಟಡ ಧ್ವಂಸ ಕುರಿತಂತೆ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಲಖನೌ ಕೋರ್ಟ್‌ನಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ಎರಡು ಕ್ರಿಮಿನಲ್ ಪ್ರಕರಣವನ್ನು ಒಂದುಗೂಡಿಸಿ ಲಖನೌ ಕೋರ್ಟ್‌ನಲ್ಲೇ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನಿದೇರ್ಶನ ನೀಡಿತು.

    ಪ್ರಚೋದನಕಾರಿ ಭಾಷಣದ ಮೂಲಕ ಕೋಮುದ್ವೇಷ ಉಂಟುಮಾಡುವುದು ಮತ್ತು ದೇಶದ ಏಕತೆಗೆ ಭಂಗ ತರುವುದು ರಾಯ್ ಬರೇಲಿ ಕೋರ್ಟ್‌ನಲ್ಲಿದ್ದ ಪ್ರಕರಣ. ಬಾಬ್ರಿ ಕಟ್ಟಡ ಧ್ವಂಸ ಮಾಡಿದ ಅಪರಿಚಿತ ಕರಸೇವಕರ ವಿರುದ್ಧ ದಾಖಲಾದ ಪ್ರಕರಣ ಲಖನೌ ನ್ಯಾಯಾಲಯದಲ್ಲಿತ್ತು.

    ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ವಿವಾದ ಕುರಿತಂತೆ ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಸಾಂವಿಧಾನಿಕ ಪೀಠ ಕಳೆದ ನ. 9ರಂದು ಐತಿಹಾಸಿ ತೀರ್ಪು ಪ್ರಕಟಿಸಿತು. ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ನೀಡಿತು ಮತ್ತೂ ಸುನ್ನಿ ವಕ್ಫ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.

    ಲಾಕ್‌ಡೌನ್ ನಡುವೆಯೂ ಬಾಲ್ಯವಿವಾಹ: ಪೊಲೀಸರು ಎಚ್ಚರಿಸಿದರೂ ಡೋಂಟ್ ಕೇರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts