More

    ಪಾಕ್ ನಾಯಕನಿಗೆ ಇಂಗ್ಲಿಷ್ ಕಲಿಯುವಂತೆ ಸಲಹೆ

    ಲಾಹೋರ್: ಪಾಕಿಸ್ತಾನ ಕ್ರಿಕೆಟಿಗರಿಗೂ ಇಂಗ್ಲಿಷ್‌ಗೂ ಅಷ್ಟಕಷ್ಟೇ. ಅದರಲ್ಲೂ ಇತ್ತೀಚಿನ ಕ್ರಿಕೆಟಿಗರಿಗೆ ಇಂಗ್ಲಿಷ್ ಅಂದ್ರೆ ಅಲರ್ಜಿಯಂತಾಗಿದೆ. ಎಷ್ಟೇ ಪ್ರತಿಭಾನ್ವಿತ ಆಟಗಾರನಾಗಿದ್ದರೂ ಬಹುಮಾನ ವಿತರಣೆ, ಸುದ್ದಿಗೋಷ್ಠಿಗಳಲ್ಲಿ ಅನುವಾದಕರನ್ನು ಕರೆದುಕೊಂಡು ಬರುವುದು ಸರ್ವೆ ಸಾಮಾನ್ಯ. ಪಾಕ್ ಕ್ರಿಕೆಟಿಗರ ಇಂಗ್ಲಿಷ್ ದೌರ್ಬಲ್ಯ ಹಲವೆಡೆ ವೈರಲ್ ಆಗಿದ್ದೂ ಇದೆ. ಪಾಕಿಸ್ತಾನದ ನಿಗದಿತ ಓವರ್‌ಗಳ ತಂಡದ ನಾಯಕನಾಗಿ ಆಯ್ಕೆಯಾಗಿರುವ ಬಾಬರ್ ಅಜಮ್‌ಗೆ ಇಂಗ್ಲಿಷ್ ಕಲಿಯುವಂತೆ ಮಾಜಿ ಆಟಗಾರರು ಸಲಹೆ ನೀಡಿದ್ದಾರೆ. ಕೇವಲ ಇಂಗ್ಲಿಷ್ ಅಷ್ಟೇ ಅಲ್ಲ.. ವೈಯಕ್ತಿಕವಾಗಿಯೂ ತಿದ್ದಿಕೊಳ್ಳುವಂತೆ ಹೇಳಿದ್ದಾರೆ.

    ಇದನ್ನೂ ಓದಿ:ಲಾಕ್‌ಡೌನ್‌ನಿಂದಾಗಿ ಸಾನಿಯಾ-ಮಲಿಕ್ ದೂರ!

    ವಿರಾಟ್ ಕೊಹ್ಲಿಗೆ ಹೋಲಿಕೆ…
    ಬಾಬರ್ ಅಜಮ್‌ರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಾಬರ್ ಉತ್ತಮ ಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್. ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿಕೊಂಡಿರುವ ಬಾಬರ್‌ಗೆ ಇಂಗ್ಲಿಷ್ ಕಲಿಯುವಂತೆ ಸಲಹೆ ಮಾಡಿರುವವರು ಮಾಜಿ ಕ್ರಿಕೆಟಿಗ ತನ್ವಿರ್ ಅಹಮದ್. ನಾಯಕನಾದ ಮೇಲೆ ಸಂಪರ್ಕದ ಮೇಲೆ ಹಿಡಿತ ಸಾಧಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಡುವಾಗ ಎದುರಾಳಿ ತಂಡದ ಆಟಗಾರರ ಎದುರು ಮಾತನಾಡುವಾಗ, ಐಸಿಸಿ ಅಧಿಕಾರಿಗಳ ಜತೆಗೆ, ಸುದ್ದಿಗೋಷ್ಠಿಯಲ್ಲಿ ಇಂಗ್ಲಿಷ್ ಬಳಕೆ ಅನಿವಾರ್ಯವಾಗುತ್ತಿದೆ. ಇದರಿಂದ ಇಂಗ್ಲಿಷ್‌ನಲ್ಲಿ ಪಕ್ವತೆ ಸಾಧಿಸಿದಷ್ಟು ಉತ್ತಮ ಎಂದು ಬುದ್ದಿಮಾತು ಹೇಳಿದ್ದಾರೆ.

    ಪಾಕ್ ನಾಯಕನಿಗೆ ಇಂಗ್ಲಿಷ್ ಕಲಿಯುವಂತೆ ಸಲಹೆ

    ಇದನ್ನೂ ಓದಿ: ಲಾಕ್‌ಡೌನ್ ವೇಳೆ ಪತ್ನಿಯೇ ಸ್ಟಾರ್ ಎಂದ ಹಿಟ್‌ಮ್ಯಾನ್

    ರಾಷ್ಟ್ರೀಯ ತಂಡದಲ್ಲಿ ಮಿಂಚಬೇಕಾದರೆ ಪ್ರತಿಭೆಯೊಂದಿಗೆ ಇಂಗ್ಲಿಷ್ ಅಷ್ಟೇ ಮುಖ್ಯ. ಅದರಲ್ಲೂ ಕ್ರಿಕೆಟ್‌ನಂಥ ಜಂಟಲ್‌ಮ್ಯಾನ್ ಕ್ರೀಡೆ ಸಂಪೂರ್ಣ ಇಂಗ್ಲಿಷ್ ಮಯವಾಗಿದೆ. ವಿಶ್ವಮಟ್ಟದಲ್ಲಿ ನಾಯಕತ್ವ ಗುಣದ ಮೌಲ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ. ಪಾಕ್ ತಂಡದಲ್ಲಿ ಅದೆಷ್ಟೋ ಪ್ರತಿಭಾನ್ವಿತರಿದ್ದರೂ, ಮೈದಾನದಲ್ಲಿ ಅಬ್ಬರಿಸಿದರೂ ಸಂವಹನ ದೃಷ್ಟಿಯಿಂದಾಗಿ ನಾಯಕತ್ವದಿಂದ ಹಿಂದೆ ಸರಿದ ಅದೆಷ್ಟೋ ಉದಾಹಣೆಗಳೂ ನಮ್ಮ ಮುಂದಿವೆ. ಹೀಗಾಗಿ ಮಾಜಿ ಆಟಗಾರರು 25 ವರ್ಷದ ಪಾಕ್ ನಾಯಕನಿಗೆ ಬುದ್ದಿವಾದ ಹೇಳಿದಂತಿದೆ. ಜತೆಗೆ ಅನುಚಿತ ವರ್ತನೆ ಮೂಲಕ ಟೀಕೆಗೆ ಗುರಿಯಾಗುತ್ತಿರುವ ಪಾಕ್ ಆಟಗಾರರು ಕಲಿಯುವುದು ಸಾಕಷ್ಟಿದೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಾಬರ್, 26 ಟೆಸ್ಟ್, 74 ಏಕದಿನ ಹಾಗೂ 38 ಟಿ20 ಪಂದ್ಯಗಳನ್ನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts