More

    ರಾಜಧಾನಿಯಲ್ಲಿ ಆಯುಧ ಪೂಜೆ ಸಂಭ್ರಮ

    ಬೆಂಗಳೂರು: ರಾಜಧಾನಿಯಲ್ಲಿ ಆಯುಧ ಪೂಜೆ ಸಂಭ್ರಮ ಕಳೆಗಟ್ಟಿದ್ದು, ಭಾನುವಾರವೂ ಖರೀದಿ ಭರಾಟೆ ಜೋರಾಗಿತ್ತು.

    ಬಹುತೇಕ ಮಾರುಕಟ್ಟೆಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಕೆಲವರು ವಾಹನಗಳಿಗೆ, ಕಚೇರಿಗಳಿಗೆ ಮುಂಚಿತವಾಗಿ ಪೂಜೆ ಮಾಡಿದರು. ಇನ್ನೂ ಕೆಲವರು ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ವಾಹನಗಳು, ಮಳಿಗೆ, ಕಚೇರಿಗಳ ಪೂಜೆ ಸಂಭ್ರಮದಿಂದ ನಡೆಯಿತು.

    ಕಚೇರಿಗಳ ಮುಂದೆ ವಾಹನಗಳನ್ನು ಸ್ವಚ್ಛಗೊಳಿಸಿ ಸಾಲಾಗಿ ನಿಲ್ಲಿಸಿದ್ದರು. ಕೆಲವರು ದೇವಾಲಯಗಳಿಗೆ ತೆರಳಿ ಅಲ್ಲಿಯೇ ವಾಹನಗಳಿಗೆ ಪೂಜೆ ಸಲ್ಲಿಸಿದರು. ‘ವಾಹನ ಗಣಪ’ ಎಂದೇ ಖ್ಯಾತಿ ಪಡೆದಿರುವ ಕಸ್ತೂರಬಾ ರಸ್ತೆಯ ಗಣೇಶನ ದೇವಸ್ಥಾನದ ಮುಂದೆ ವಾಹನಗಳ ಸಂಖ್ಯೆ ಜಾಸ್ತಿ ಇತ್ತು.

    ಇದನ್ನೂ ಓದಿ:ಬಸವನಗುಡಿ ವಾರ್ಡ್ ಹೆಸರು ಬದಲಾವಣೆ ವಿರುದ್ಧ ಜನರಿಂದ ಸಹಿ ಸಂಗ್ರಹ

    ಕೆ.ಆರ್. ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರ, ಗಾಂಧಿ ಬಜಾರ್ ಸೇರಿ ನಗರದ ಹಲವು ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ಬೂದುಗುಂಬಳ, ನಿಂಬೆ ಹಣ್ಣುಗಳ ಮಾರಾಟ ಪ್ರಕ್ರಿಯೆ ಜೋರಾಗಿತ್ತು. ಬೂದುಗುಂಬಳ ಕೆ.ಜಿ.ಗೆ 35-40 ರೂ.ನಂತೆ ಮಾರಾಟವಾದರೆ, ಸೇವಂತಿಗೆ ಹೂವು ಒಂದು ಮಾರಿಗೆ 100 ರೂ., ಕೆ.ಜಿ. ಬಿಡಿ ಹೂವು 250-300 ರೂ., ಚೆಂಡು ಹೂವು 60-70 ರೂ. ದರವಿತ್ತು. ಮಾವಿನ ಸೊಪ್ಪು, ತೆಂಗಿನಕಾಯಿ, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಮಾರಾಟವೂ ಜೋರಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts