More

    ಬಸವನಗುಡಿ ವಾರ್ಡ್ ಹೆಸರು ಬದಲಾವಣೆ ವಿರುದ್ಧ ಜನರಿಂದ ಸಹಿ ಸಂಗ್ರಹ

    ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿ ವಾರ್ಡ್ ಹೆಸರು ಬದಲಾಯಿಸದಂತೆ ರಾಜ್ಯ ಸರ್ಕಾರದ ವಿರುದ್ಧ ಸಹಿ ಚಳುವಳಿ ಆರಂಭವಾಗಿದ್ದು, ಇದುವರೆಗೂ 10 ಸಾವಿರಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ಇನ್ನಷ್ಟು ಜನರಿಂದ ಸಹಿ ಸಂಗ್ರಹಿಸಿದ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲು ವಾರ್ಡ್‌ನ ನಿವಾಸಿಗಳು ಮುಂದಾಗಿದ್ದಾರೆ.

    ಸರ್ಕಾರ ಪ್ರಕಟಿಸಿರುವ ವಾರ್ಡ್‌ಗಳ ಮರು ವಿಗಂಡನೆ ಕರಡು ಪಟ್ಟಿಯಲ್ಲಿ ರಾಜಧಾನಿಯ 12 ವಾರ್ಡ್‌ಗಳ ಹೆಸರು ಬದಲಾಯಿಸಲಾಗಿದೆ. ಇದರಿಂದಾಗಿ ಕೆಲವು ವಾರ್ಡ್‌ನ ಹೆಗ್ಗರುತುಗಳಿಗೂ ಈಗಾಗಲೇ ಕುತ್ತು ಬಂದಿದೆ. ಬಸವನಗುಡಿ ವಾರ್ಡ್‌ನ್ನು ದೊಡ್ಡಗಣಪತಿ ವಾರ್ಡ್ ಆಗಿ ಬದಲಾಯಿಸಲಾಗಿದೆ. ವಾರ್ಡ್ ಗಡಿಯಲ್ಲೂ ಮಾರ್ಪಾಡು ಮಾಡಲಾಗಿದೆ. ಇದರ ಬಗ್ಗೆ ಬಸವನಗುಡಿ ನಿವಾಸಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

    ಬಸವನಗುಡಿಗೆ 130ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಸಿಲಿಕಾನ್ ಸಿಟಿಯಲ್ಲಿ ಇದು ಪ್ರಸಿದ್ಧ ಬಡಾವಣೆ ಆಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಇತಿಹಾಸ ಪ್ರಸಿದ್ಧ ಪಾರಂಪರಿಕ ತಾಣಗಳು ಹಾಗೂ ದೇವಸ್ಥಾನಗಳು ಬರಲಿವೆ. ಲಕ್ಷಾಂತರ ನಿವಾಸಿಗಳಿಗೆ ಭಾವನಾತ್ಮಕ ನಂಟು ಹೊಂದಿದೆ. ದೇಶ- ವಿದೇಶಗಳಲ್ಲೂ ಬಡಾವಣೆಗೆ ಉನ್ನತ ಸ್ಥಾನವಿದೆ. ದೊಡ್ಡ ಬಸವನ ದೇವಸ್ಥಾನದಿಂದಲೇ ಬಸವನಗುಡಿಯಾಗಿದೆ. ಹೀಗಿದ್ದಾಗ, ರಾಜ್ಯ ಸರ್ಕಾರವು ವಾರ್ಡ್ ಹೆಸರು ಬದಲಾಯಿಸಿರುವುದು ಸರಿಯಲ್ಲ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:ನ.25ರಂದು ನೇಪಾಳದಲ್ಲಿ ಕನ್ನಡ ರಾಜ್ಯೋತ್ಸವ

    ಬಸವನಗುಡಿ ಹೆಸರು ಉಳಿಸಲು ಮನೆ ಮನೆಗೆ ತೆರಳಿ ನಿವಾಸಿಗಳಿಂದ ಸಹಿ ಸಂಗ್ರಹಿಸಲಾಗುತ್ತಿದೆ. ಇದಕ್ಕೂ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಅಂತಿಮವಾಗಿ ಸರ್ಕಾರಕ್ಕೆ ಇದನ್ನು ಸಲ್ಲಿಸಲಾಗವುದು. ಎಲ್ಲ ಸಂಘ-ಸಂಸ್ಥೆಗಳು ಸೇರಿ ನಾವೆಲ್ಲರೂ ಶಾಂತಿಯುತವಾಗಿ ಹೋರಾಟ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸಬಾರದು. ದೊಡ್ಡಗಣಪತಿ ಬದಲು ಹಿಂದಿನಂತೆ ಬಸವನಗುಡಿ ಎಂದೇ ಹೆಸರಿಡಬೇಕು ಎಂದು ಸ್ಥಳೀಯ ನಿವಾಸಿ ಸತ್ಯಲಕ್ಷ್ಮೀರಾವ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts