More

    ಶುಕ್ರವಾರ ತುಪ್ಪದಲ್ಲಿ ಮಿಂದೆದ್ದ ಅಯೋಧ್ಯೆ ಬಾಲರಾಮ ದೇವರು: ಸಪ್ತಧಾತು ನಿಕ್ಷೇಪ ವಿಶೇಷ ಪೂಜೆ!

    ಅಯೋಧ್ಯೆ: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಜ.22ರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಕಡೆಗೆ ಇಡೀ ವಿಶ್ವದ ಗಮನ ಕೇಂದ್ರೀಕೃತವಾಗಿದೆ. ಈ ನಡುವೆ ಗರ್ಭಗುಡಿಯಲ್ಲಿ ಕೂರ್ಮಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಮುದ್ದು ಬಾಲರಾಮ ದೇವರ ವಿಗ್ರಹಕ್ಕೆ ಶುಕ್ರವಾರ ಘೃತಾಧಿವಾಸ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿ-ವಿಧಾನದಂತೆ ನಡೆದವು.

    ಇದನ್ನೂ ಓದಿ: ನಗುಮೊಗದ ರಾಮಲಲ್ಲಾ; ಉದ್ಘಾಟನೆಗೂ ಮುನ್ನ ಅನಾವರಣಗೊಂಡ ಶ್ರೀರಾಮ ವಿಗ್ರಹದ ಮುಖ

    ಬಾಲರಾಮನ ಮೂರ್ತಿಯನ್ನು ಬುಧವಾರ ರಾಮಮಂದಿರಕ್ಕೆ ತರಲಾಯಿತು. ಗುರುವಾರ ಬಾಲರಾಮನ ಮೂರ್ತಿಗೆ ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರ ಮೇಲುಸ್ತುವಾರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
    ಬಾಲರಾಮ ದೇವರ ವಿಗ್ರಹದ ಮುಖವನ್ನು ಬಟ್ಟೆ ಮುಸುಕುಹಾಕಿ ಮರೆಮಾಡಲಾಗಿದೆ. ಜ.22ರಂದು ದರ್ಪಣ ಶಾಸ್ತ್ರ ನಡೆಸಿದ ಬಳಿಕ ಈ ಮುಸಕನ್ನು ತೆಗೆಯಲಾಗುತ್ತದೆ.

    ಗುರುವಾರ ಬೆಳಗ್ಗೆ ದೇವರ ವಿಗ್ರಹವನ್ನು ಕೂರಿಸುವ ಕೂರ್ಮಪೀಠ ಪ್ರತಿಷ್ಠೆ, ನವಧಾನ್ಯಗಳ ನಿಕ್ಷೇಪ, ನವರತ್ನಗಳ ನಿಕ್ಷೇಪ, ಗಜಶಾಲೆ, ಗೋಶಾಲೆ, ಅಶ್ವಶಾಲೆಯ ಮೃತ್ತಿಕೆ ಸೇರಿ ಹಲವು ಪವಿತ್ರ ಮೃತ್ತಿಕೆಗಳ ನಿಕ್ಷೇಪ, ಸಪ್ತಧಾತುಗಳ ನಿಕ್ಷೇಪಗಳನ್ನು ಇಟ್ಟು ಪೂಜಾಕಾರ್ಯಗಳನ್ನು ನೆರವೇರಿಸಲಾಯಿತು. ಅದಾಗಿ, ರಾಮನಾಮ ಯಂತ್ರದ ಸ್ಥಾಪನೆಯಾಗಿ ಅರ್ಚನೆ ಕಾರ್ಯ ನೆರವೇರಿಸಲಾಯಿತು. ಇವಿಷ್ಟು ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಬಾಲರಾಮ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

    ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮನ ಮೂರ್ತಿ ಸ್ಥಾಪನೆ ಪೂರ್ಣಗೊಂಡಿರುವುದರಿಂದ ಪ್ರಾಣಪ್ರತಿಷ್ಠೆಯ ವಿವಿಧ ಧಾರ್ಮಿಕ ವಿಧಾನಗಳನ್ನು ನೆರವೇರಿಸಲಾಗುತ್ತದೆ. ವೈದಿಕರಿಗೆ ಧಾರ್ಮಿಕ ಕಾರ್ಯಗಳ ಹೊಣೆಗಾರಿಕೆ ನೀಡುವ ಪ್ರಕ್ರಿಯೆ, ನಾಂದಿ ದೇವತೆಗಳ ಪೂಜೆಗಳು ಕೂಡ ನಡೆದಿವೆ.
    ಶುಕ್ರವಾರ ನಡೆದಿದ್ದೇನು?: ಅಯೋಧ್ಯೆಯ ರಾಮಮಂದಿರದಲ್ಲಿ ಜ.19 ಬೆಳಗ್ಗೆ ಬಾಲರಾಮನ ಮೂರ್ತಿಯ ಶುದ್ಧಗೊಳಿಸುವ ಪ್ರಕ್ರಿಯೆ ನಡೆಯಿತು. ಬಳಿಕ ಕೇಸರಿಯಿಂದ ಮೂರ್ತಿಯನ್ನು ಮುಳುಗಿಸಿ ಶುದ್ಧೀಕರಣ ಮಾಡಲಾಯಿತು. ಈ ಎರಡೂ ಪ್ರಕ್ರಿಯೆಯ ಬಳಿಕ ಘೃತಾಧಿವಾಸ ಅಂದರೆ ತುಪ್ಪದಲ್ಲಿ ಮೂರ್ತಿಯನ್ನು ಮುಳುಗಿಸುವ ಪ್ರಕ್ರಿಯೆ ನಡೆಯಿತು. ಇಷ್ಟೆಲ್ಲ ಆದ ಬಳಿಕ ಬಾಲರಾಮನನ್ನು ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯಗಳಲ್ಲಿ ಮುಳುಗಿಸಿ ಶುದ್ಧೀಕರಣ ನಡೆಸಲಾಯಿತು.

    ಮತ್ತೆ ಸದ್ದು ಮಾಡಿದ ಕಿಮ್​: ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಡ್ರೋನ್ ಪರೀಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts