More

    ಅಯೋಧ್ಯೆ ಶ್ರೀರಾಮಮಂದಿರ ಸ್ಯಾಟಲೈಟ್​ ಚಿತ್ರ ಬಿಡುಗಡೆ

    ಹೈದರಾಬಾದ್​: ಸೋಮವಾರ (ನಾಳೆ) ಅಯೋಧ್ಯಾ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇಡೀ ವಿಶ್ವವೇ ಎದುರು ನೋಡುತ್ತಿದೆ. ದೇಶದ ಮೂಲೆ-ಮೂಲೆಗಳಲ್ಲಿ ರಾಮಜಪ ಜೋರಾಗುತ್ತಿದೆ. ಕೋಟ್ಯಾಂತರ ಭಕ್ತ ಸಮೂಹ ಭಕ್ತಿ ಭಾವೈಕ್ಯತೆಯಲ್ಲಿ ಮುಳುಗುತ್ತಿದೆ.

    ಇದನ್ನೂ ಓದಿ:‘ಮೇಡ್ ಇನ್ ಇಂಡಿಯಾ’ ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಿವು!

    ಇದೀಗ ಬಾಹ್ಯಾಕಾಶದಲ್ಲಿ ಉಪಗ್ರಹದಿಂದ ಸೆರೆ ಹಿಡಿಯಲಾದ ಅಯೋಧ್ಯೆ ರಾಮ ಮಂದಿರದ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆಗೊಳಿಸಿದೆ.

    ಅಯೋಧ್ಯೆ ಶ್ರೀರಾಮಮಂದಿರ ಸ್ಯಾಟಲೈಟ್​ ಚಿತ್ರ ಬಿಡುಗಡೆ

    ಎನ್‌ಆರ್‌ಎಸ್‌ಸಿ ಹಂಚಿಕೊಂಡ ಫೋಟೋಗಳಲ್ಲಿ, ನಿರ್ಮಾಣ ಹಂತದಲ್ಲಿರುವ ರಾಮಮಂದಿರವನ್ನು ವಿಸ್ತೃತ ನೋಟದಿಂದ ನೋಡಬಹುದು.
    ಈ ಚಿತ್ರವನ್ನು ಹೈದರಾಬಾದ್‍ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಕೇಂದ್ರವು ಹಂಚಿಕೊಂಡಿದೆ. ಕಳೆದ ವರ್ಷ ಡಿಸೆಂಬರ್ 16ರಂದು ಅಯೋಧ್ಯೆ ರಾಮ ಮಂದಿರದ ಸ್ಯಾಟಲೈಟ್ ಚಿತ್ರವನ್ನು ತೆಗೆಯಲಾಗಿದೆ.

    ದಶರಥ ಮಹಲ್, ಅಯೋಧ್ಯೆ ರೈಲ್ವೆ ನಿಲ್ದಾಣ ಹಾಗೂ ಸರಯೂ ನದಿಯನ್ನು ಚಿತ್ರದಲ್ಲಿ ಕಾಣಬಹುದಾಗಿದೆ. ದೇವಾಲಯದ ಮೊದಲ ಹಂತವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಜನವರಿ 22 ರಂದು ರಾಮ್ ಲಲ್ಲಾ ವಿಗ್ರಹದ “ಪ್ರಾಣ ಪ್ರತಿಷ್ಠೆ” ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

    ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರ ಮತ್ತು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.

    ಕಲಾವಿದನ ಕೈಚಳಕದಲ್ಲಿ ಅರಳಿದ ಅಯೋಧ್ಯಾ ಶ್ರೀರಾಮಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts