More

    ಬಾಲರಾಮ ವಿಗ್ರಹಕ್ಕೆ ನೀಲವರ್ಣ ಶಿಲೆಯೇ ಆಯ್ಕೆಯಾಗಿದ್ದೇಕೆ? ವಿವರ ಇಲ್ಲಿದೆ

    ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೆ ಕೇವಲ ಒಂದೇ ಒಂದು ದಿನ ಬಾಕಿ ಇದೆ. ಈಗಾಗಲೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮ ದೇವರ ವಿಗ್ರಹಕ್ಕೆ ಸೋಮವಾರ(ಜ.21) ಪ್ರಾಣ ಪ್ರತಿಷ್ಠೆ ನಡೆಯಲಿದೆ. ಆದರೆ ನೀಲವರ್ಣ ಶ್ರೀರಾಮನ ಮೂರ್ತಿ ಏಕೆ ಕಪ್ಪಾಗಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಕುರಿತ ವಿವರ ಇಲ್ಲಿದೆ.

    ಇದನ್ನೂ ಓದಿ: ‘ಮಸೀದಿ, ದರ್ಗಾಗಳಲ್ಲಿ ರಾಮನಾಮ ಜಪಿಸಿ ದೀಪ ಬೆಳಗಿಸಿ’: ಮೌಲ್ವಿ ವಿಡಿಯೋ ವೈರಲ್

    ಅಯೋಧ್ಯೆ ರಾಮಮಂದಿರದಲ್ಲಿ ವಾರದಿಂದ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಜ.22 ರಂದು ಮಧ್ಯಾಹ್ನ 12.20ಕ್ಕೆ ಬಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈಗಾಗಲೇ ಬಲರಾಮನ ವಿಗ್ರಹ ಹೇಗಿದೆ ಎಂಬುವುದನ್ನು ಎಲ್ಲರೂ ನೋಡಿದ್ದಾರೆ. ಒಟ್ಟು ಮೂರು ಮೂರ್ತಿಗಳನ್ನು ತಯಾರಿಸಲಾಗಿದ್ದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಯಾರಿಸಿದ ವಿಗ್ರಹ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ.

    ಈ ಮೂರು ವಿಗ್ರಹಗಳಲ್ಲಿ ಎರಡು ಕಪ್ಪು ಬಣ್ಣದ್ದಾಗಿವೆ. ಅದರಲ್ಲಿ ಒಂದು ಬಿಳಿ ಬಣ್ಣದ್ದು. ಈಗ ಶ್ರೀರಾಮನ ವಿಗ್ರಹ ಏಕೆ ಕಪ್ಪು ಎಂದು ಭಕ್ತರು ಕೇಳುತ್ತಿದ್ದಾರೆ. ಇದಕ್ಕೆ ಕಾರಣ ವಿಷ್ಣುವಿನ ಮೈಬಣ್ಣ (ನೀಲಮೇಗ ಶಾಮ, ರಾಮ), ಅಂದರೆ ನೀಲಿವರ್ಣವಾಗಿರುವುದು. ಅಲ್ಲದೆ, ವಾಲ್ಮೀಕಿ ರಾಮಾಯಣದಲ್ಲಿ ರಾಮನನ್ನು ವರ್ಣಿಸುವಾಗ, ಸುಂದರ, ಮೃದು ಮತ್ತು ಆಕರ್ಷಕ ಮೈಬಣ್ಣ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಕಾಂತಿಯುತ ಕಪ್ಪು ಶಿಲೆಯಲ್ಲಿ ಶ್ರೀರಾಮ ಅದ್ಭುತವಾಗಿ ಮೂಡಿಬಂದಿದ್ದಾನೆ.

    ಇನ್ನು ರಾಮನ ಪ್ರತಿಮೆಗೆ ಆಯ್ಕೆ ಮಾಡಿಕೊಂಡಿರುವ ಬಂಡೆಯೂ ವಿಶೇಷವಾದದ್ದು. ಈ ಬಂಡೆಯು ಬಹಳ ವಿಶಿಷ್ಟವಾಗಿದೆ. ರಾಮನ ಮೂರ್ತಿಗೆ ಪ್ರತಿದಿನ ಹಾಲು ಅಥವಾ ಇತರ ದ್ರವ್ಯಗಳಿಂದ ಅಭಿಷೇಕ ಮಾಡುವುದರಿಂದ ವಿಗ್ರಹದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಅಂದರೆ ವಿಗ್ರಹಕ್ಕೆ ಧಕ್ಕೆಯಾಗುವುದಿಲ್ಲ.

    ಇನ್ನು ರಾಮನ ಪ್ರತಿಮೆಯ ಎತ್ತರ ಕೇವಲ 51 ಇಂಚು ಇರುವುದಾದರೂ ಏಕೆ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ, ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ಬಾಲ ರಾಮ. ಅದು ಶ್ರೀರಾಮನ ಐದನೇ ವಯಸ್ಸಿನ ಪ್ರತಿಮೆ. ಹೀಗಾಗಿ ಮಕ್ಕಳ ವಯಸ್ಸಿಗೆ ತಕ್ಕಂತೆ ಮೂರ್ತಿ ಸಿದ್ಧವಾಗಿದೆ.

    ಶಿವಕುಮಾರ ಶ್ರೀಗಳ 5ನೇ ಪುಣ್ಯಸ್ಮರಣೆ; ಸಿದ್ಧಗಂಗಾ ಮಠದಲ್ಲಿ ಪೂಜಾ ಕೈಂಕರ್ಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts