More

    ಡಂಗೂರ ಸಾರಿ ಕರೊನಾ ಲಸಿಕೆ ಬಗ್ಗೆ ಜಾಗೃತಿ

    ಬೆಂಗಳೂರು: ಆಧುನಿಕ ಸಂಪರ್ಕ ಮಾಧ್ಯಮಗಳು ಹೆಚ್ಚಿದಂತೆ ಸಾಂಪ್ರದಾಯಿಕ ರೀತಿಗಳು ಮರೆತೇ ಹೋಗುವಂತಾಗಿವೆ. ನಗರ ಪ್ರದೇಶಗಳ ಜನರಂತೂ ವಾಟ್ಸಾಪ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲೇ ವಿಚಾರ ವಿನಿಮಯ ಮಾಡಿಕೊಳ್ಳುವುದು ಹೆಚ್ಚಿದೆ. ಈ ಸಂದರ್ಭದಲ್ಲೂ ಹಳ್ಳಿಗಳಲ್ಲಿ ರಾಜರ ಕಾಲದಿಂದಲೂ ನಡೆದುಬಂದಿರುವ ಡಂಗೂರ ಸಾರುವ ಪದ್ಧತಿ ಇನ್ನೂ ಬದುಕಿದೆ ಎನ್ನುವುದಕ್ಕೆ ನಿದರ್ಶನ ಇಲ್ಲಿದೆ.

    ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಡಿಯೊ ತುಣುಕೊಂದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. “ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಹಳ್ಳಿಗರು ಸಾಂಪ್ರದಾಯಿಕ ವಿಧಾನವನ್ನು ಬಳಸುತ್ತಿರುವ ಈ ದೃಶ್ಯ ಪ್ರೇರಣಾದಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಕೋವಿಡ್-19 ಲಸಿಕಾ ಅಭಿಯಾನವು ಜನಾಂದೋಲನವಾಗಬೇಕು” ಎಂದು ಸಚಿವರು ಹೇಳಿದ್ದಾರೆ.

    ವಿಡಿಯೋದಲ್ಲಿ, ಜಾಗಟೆ ಹಿಡಿದಿರುವ ಹಿರಿಯರೊಬ್ಬರು, “ಈಗ ಕೋವಿಡ್ ವೈರಸ್ಸಿನ ಸಲುವಾಗಿ, ನೆರೆಗಲ್ಲಿ ಆಸ್ಪತ್ರೇಗ್ ಹೋಗಿ, ಎಲ್ಲರೂ ನಾಲ್ವತ್ತೈದು ವರ್ಷ ಮೇಲ್ಪಟ್ಟೋರು ಇಂಜೆಕ್ಷನ್ ಮಾಡಿಸ್ಕೊಂಡು ಬರಬೇಕು ರೀ… ಮತ್ತ ಹೇಳಿಲ್ಲಂದೀರೀ” ಎಂದು ಸ್ಥಳೀಯ ಧಾಟಿಯಲ್ಲಿ ಡಂಗೂರ ಸಾರುವ ದೃಶ್ಯವನ್ನು ನೋಡಬಹುದು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

    “ಆ ರಹೀ ಹೇ ಪೊಲೀಸ್… !” ಭರ್ಜರಿ ಆ್ಯಕ್ಷನ್ ಚಿತ್ರಕ್ಕೆ ತಯಾರಾಗಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts