More

    ಬಾಕ್ಸ್​ ಆಫೀಸ್​ನಲ್ಲಿ ಐತಿಹಾಸಿಕ ಮೈಲಿಗಲ್ಲು ದಾಟಿದ ‘ಅವತಾರ್ 2​’ … ಚಿತ್ರ ದುಡಿದಿದ್ದೆಷ್ಟು ಗೊತ್ತಾ?

    ಮುಂಬೈ: ಜೇಮ್ಸ್​ ಕ್ಯಾಮರನ್​ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರ ‘ಅವತಾರ್​ – ದಿ ವೇ ಆಫ್​ ವಾಟರ್ಸ್​’, ಕಳೆದ ತಿಂಗಳು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಭಾರತದಲ್ಲೂ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದು, ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    ಇದನ್ನೂ ಓದಿ: ಚಿತ್ರರಂಗ ನನ್ನ ಸ್ವತ್ತಲ್ಲ; ಇಷ್ಟ ಇದ್ದವರು ಆಡಲು ಬರ್ತಾರೆ ಎಂದ ಸುದೀಪ್​

    ಸಾವಿರಾರು ಕೋಟಿ ಬಜೆಟ್​ನ ಈ ಚಿತ್ರ, ಎಷ್ಟು ಸಂಪಾದಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ ಮತ್ತು ‘ಅವತಾರ್ 2’ ಚಿತ್ರವು ಜಗತಿಕ ಬಾಕ್ಸ್​ ಆಫೀಸ್​ನಲ್ಲಿ ಐತಿಹಾಸಿಕ ಮೈಲಿಗಲ್ಲೊಂದು ದಾಟಿ ಆರನೇ ಸ್ಥಾನದಲ್ಲಿದೆ.

    ಚಿತ್ರವು ಜಗತ್ತಿನಾದ್ಯಂತ 16 ಸಾವಿರ ಕೋಟಿ ರೂ.ಗಳನ್ನು ಸಂಪಾದಿಸಿದೆ. 16 ಸಾವಿರ ಕೋಟಿ ರೂ. ಕ್ಲಬ್​ನಲ್ಲಿ ಇದುವರೆಗೂ ಐದು ಹಾಲಿವುಡ್​ ಚಿತ್ರಗಳಿದ್ದವು. ಈಗ ‘ಅವತಾರ್ 2’ ಆರನೇ ಚಿತ್ರವಾಗಿ ಹೊರಹೊಮ್ಮಿದೆ. ಇದಕ್ಕೂ ಮೊದಲು ‘ಅವತಾರ್​’, ‘ಅವೆಂಜರ್ಸ್​ – ದಿ ಎಂಡ್​ಗೇಮ್​’, ‘ಟೈಟಾನಿಕ್​’, ‘ಸ್ಟಾರ್​ ವಾರ್ಸ್​ – ದಿ ಫೋರ್ಸ್​ ಅವೇಕನ್ಸ್​’ ಮತ್ತು ಅವೆಂಜರ್ಸ್​: ಇನ್ಫಿನಿಟಿ ವಾರ್​’ ಚಿತ್ರಗಳು ಈ ಕ್ಲಬ್​ನಲ್ಲಿತ್ತು. ಈಗ ‘ಅವತಾರ್​ 2’ ಸಹ ಸೇರಿಕೊಂಡಿದೆ.

    ಇದನ್ನೂ ಓದಿ: ಹೃದಯಾಘಾತದಿಂದ ಸ್ಯಾಂಡಲ್​ವುಡ್​ ಹಿರಿಯ ನಟ ಲಕ್ಷ್ಮಣ್​ ವಿಧಿವಶ

    ವಿಶೇಷವೆಂದರೆ, ಈ ಆರು ಚಿತ್ರಗಳ ಪೈಕಿ ನಿರ್ದೇಶಕ ಜೇಮ್ಸ್​ ಕ್ಯಾಮರಾನ್​ ಅವರ ಮೂರು ಚಿತ್ರಗಳಿವೆ. ಈ ಹಿಂದೆ, ಕ್ಯಾಮರಾನ್​ ನಿರ್ದೇಶನದ ‘ಅವತಾರ್​ ಮತ್ತು ‘ಟೈಟಾನಿಕ್​’ ಚಿತ್ರಗಳು 16 ಸಾವಿರ ಕೋಟಿ ರೂ. ಸಂಗ್ರಹಿಸಿದ್ದವು. ಈಗ ‘ಅವತಾರ್​ 2’ ಮೂಲಕ ಜೇಮ್ಸ್ ಕ್ಯಾಮರಾನ್​ ಹೊಸ ದಾಖಲೆಯನ್ನೇ ಮಾಡಿದ್ದಾರೆ.

    ಕನ್ನಡಕ್ಕೆ ನನ್ನ ಮೊದಲ ಪ್ರಾಶಸ್ತ್ಯ; ಮನದ ಮಾತು ಬಿಚ್ಚಿಟ್ಟ ಸಪ್ತಮಿ ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts