More

  2ರೂ. ಚಿಲ್ಲರೆಗೆ ಪ್ರಯಾಣಿಕನ ಕೊಲೆ ಮಾಡಿ 8 ವರ್ಷ ಜೈಲಲ್ಲಿದ್ದ ಆಟೋ ಚಾಲಕನಿಗೆ ಮತ್ತೆ 5 ವರ್ಷ ಜೈಲು!

  ಮುಂಬೈ: ಚಿಲ್ಲರೆ ವಿಷಯಕ್ಕೆ ಪ್ರಯಾಣಿಕನ ಹತ್ಯೆ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿ ಈಗಾಗಲೇ ಎಂಟು ವರ್ಷ ಜೈಲು ವಾಸ ಅನುಭವಿಸಿರುವ ಆಟೋರಿಕ್ಷಾ ಚಾಲಕನಿಗೆ ಮತ್ತೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

  ಇದನ್ನೂ ಓದಿ: ‘ನಿನ್ನ ಗಂಡನನ್ನು ಒಂದು ರಾತ್ರಿ ಕಳಿಸು’!: ಅಭಿಮಾನಿಗೆ ನಟಿ ಜೋತಿಕಾ ಕೊಟ್ಟ ಉತ್ತರ ಹೀಗಿತ್ತು ನೋಡಿ..

  ಮುಂಬೈನ ಬೋರಿವಲಿ ಪ್ರದೇಶದಲ್ಲಿ 2016ರಲ್ಲಿ ಘಟನೆ ನಡೆದಿತ್ತು. ಆಟೋ ರಿಕ್ಷಾ ಚಾಲಕ ರಾಮಪ್ರವೇಶ ಚೌಹಾಣ್ ಮತ್ತು ಪ್ರಯಾಣಿಕ ಸರ್ಜುಪ್ರಸಾದ್ ನ ನಡುವೆ ಆಟೋ ಬಾಡಿಗೆ ಕೇವಲ 2ರೂ.ಗೆ ವಾಗ್ವಾದ ನಡೆದಿದ್ದು, ಸರ್ಜುಪ್ರಸಾದ್ ಕೊಲೆಯಲ್ಲಿ ಜಗಳ ಅಂತ್ಯವಾಗಿತ್ತು.

  ಭಗವತಿ ಆಸ್ಪತ್ರೆ ಬಳಿಯ ಕಟ್ಟಡವೊಂದರಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದ ಸರ್ಜುಪ್ರಸಾದ್ ಸಹಾನಿ ರಾತ್ರಿ ಪಾಳಿಯ ನಂತರ ಬೋರಿವಲಿ ಪೂರ್ವದಲ್ಲಿರುವ ಸಂಬಂಧಿಕರೊಬ್ಬರನ್ನು ಭೇಟಿ ಮಾಡಿ, ಅಲ್ಲಿಂದ ಮಾರನೆ ದಿನ ಬೆಳಗ್ಗೆ 11 ಗಂಟೆಗೆ ರಾಮಪ್ರವೇಶ ಚೌಹಾಣ್ ಆಟೋದಲ್ಲಿ ಬೋರಿವಲಿ ಪಶ್ಚಿಮದಲ್ಲಿರುವ ಆತನ ಮನೆಗೆ ಮರಳುತ್ತಿದ್ದರು.

  ಗಣಪತ್ ಪಾಟೀಲ್ ನಂಗರ್ ಗಲ್ಲಿ ನಂ.01, ಬೋರಿವಲಿ (ಪಶ್ಚಿಮ)ದಲ್ಲಿ ಆಟೋ ಬರುತ್ತಿದ್ದಂತೆ ಸರ್ಜುಪ್ರಸಾದ್​ ಆಟೋದಿಂದ ಇಳಿದಿದ್ದಾರೆ. ಆಟೋ ರೈಡ್‌ನ ದರ 12 ರೂ.ಬಂದಿದ್ದು, ಸರ್ಜುಪ್ರಸಾದ್ ಇಪ್ಪತ್ತು ರೂಪಾಯಿ ನೀಡಿದ್ದಾರೆ. ಆಟೋರಿಕ್ಷಾ ಚಾಲಕನ ಬಳಿ 2ರೂ.ಚಿಲ್ಲರೆ ಇಲ್ಲದ ಕಾರಣ ವಿವಾದ ಉಂಟಾಗಿದೆ. ವಾಗ್ವಾದದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಲಕ ಈ ವೇಳೆ ತಳ್ಳಿದ ರಭಸಕ್ಕೆ ಸರ್ಜುಪ್ರಸಾದ್ ರಸ್ತೆಗೆ ಬಿದ್ದಿದ್ದಾರೆ. ಆಗ ಆತನ ತಲೆ ಡಿವೈಡರ್‌ಗೆ ಬಡಿದಿದೆ. ಬಳಿಕ ಆಟೋ ಸಮೇತ ಚಾಲಕ ಅಲ್ಲಿಂದ ಪರಾರಿಯಾಗಿದ್ದ.

  ಯಾರೋ ಹಲ್ಲೆ ನಡೆಸಿ ನಿಮ್ಮ ತಂದೆ ಗಾಯಗೊಂಡಿದ್ದಾರೆ ಎಂದು ಸಮೀಪದ ನಿವಾಸಿ ಮಹಿಳೆಯೊಬ್ಬರು ತಿಳಿಸಿದಾಗ ಸರ್ಜುಪ್ರಸಾದ್​ ಪುತ್ರ ರಾಜನ್ ಸಹಾನಿ ಮತ್ತು ಆತನ ತಾಯಿ ಸ್ಥಳಕ್ಕೆ ಧಾವಿಸಿದ್ದಾರೆ. ಆಗ ಸರ್ಜುಪ್ರಸಾದ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

  ಅಲ್ಲಿ ನೆರೆದಿದ್ದವರಿಂದ ರಾಜನ್‌ಗೆ, ಪ್ರಯಾಣ ದರದ ವಿವಾದಕ್ಕೆ ಆಟೋರಿಕ್ಷಾ ಚಾಲಕ ಚೌಹಾಣ್ ನಿಮ್ಮ ತಂದೆಯ ತಲೆಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದರು.

  ಕೂಡಲೇ ಪೊಲೀಸರು ಸರ್ಜುಪ್ರಸಾದ್ ಅವರನ್ನು ಕಡಿವಲಿಯ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಆ ವೇಳೆಗಾಗಲೇ ಸರ್ಜುಪ್ರಸಾದ್​ ಕೊನೆಯುಸಿರೆಳೆದಿದ್ದರು.

  ಸರ್ಜುಪ್ರಸಾದ್​ ಪುತ್ರ ರಾಜನ್ ಸಹಾನಿ ನೀಡಿದ ದೂರಿನ ಮೇರೆಗೆ ಎಂಎಚ್​ಬಿ ಠಾಣೆ ಪೊಲೀಸರು ಚೌಹಾಣ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.

  ನ್ಯಾಯಾಲಯವು, ಅಪರಾಧಿಗೆ ಕೊಲ್ಲುವ ಯಾವುದೇ ಉದ್ದೇಶವಿರಲಿಲ್ಲ. ಮೃತನು ನೆಲದ ಮೇಲೆ ಬಿದ್ದ ಕಾರಣಕ್ಕಾಗಿ ಮೃತಪಟ್ಟಿದ್ದಾನೆಂದು ಅಭಿಪ್ರಾಯಪಟ್ಟು ಐದು ವರ್ಷ ಜೈಲು ಶಿಕ್ಷೆ ವಿಧಿಸಿತು ಆದರೆ ಚೌಹಾಣ್ ಈಗಾಗಲೇ ಎಂಟು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.

  ‘ರಾಮಾಯಣ’ ಚಿತ್ರೀಕರಣಕ್ಕೆ ಸಜ್ಜು..ಮೌನಕ್ಕೆ ಜಾರಿದ ಯಶ್​, ಮತ್ತಿತರ ಪಾತ್ರದಾರಿಗಳು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts