More

    ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಈಗ ಭಾರತಕ್ಕೆ ಆಸೀಸ್ ವ್ಯಾಪಾರ ಪ್ರತಿನಿಧಿ

    ಮೆಲ್ಬೋರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಿರ್ವಹಣೆಯ ಮೂಲಕ ಗಮನಸೆಳೆದಿದ್ದ ಮಾಜಿ ಎಡಗೈ ಆರಂಭಿಕ ಮ್ಯಾಥ್ಯೂ ಹೇಡನ್ ಅವರು ಈಗ ಆಸ್ಟ್ರೇಲಿಯಾ ಸರ್ಕಾರದಿಂದ ಹೊಸ ಜವಾಬ್ದಾರಿಯೊಂದನ್ನು ಪಡೆದುಕೊಂಡಿದ್ದಾರೆ. 48 ವರ್ಷದ ಮ್ಯಾಥ್ಯೂ ಹೇಡನ್ ಅವರನ್ನು ಭಾರತದ ಜತೆಗಿನ ವಾಣಿಜ್ಯ ಸಂಬಂಧ ಸುಧಾರಣೆಗಾಗಿ ಆಸ್ಟ್ರೇಲಿಯಾದ ವ್ಯಾಪಾರ ಪ್ರತಿನಿಧಿಯಾಗಿ ನೇಮಿಸಲಾಗಿದೆ.

    ಆಸ್ಟ್ರೇಲಿಯಾ-ಭಾರತ ಕೌನ್ಸಿಲ್ ಮಂಡಳಿಗೆ ಸೋಮವಾರ ಮೂವರು ಹೊಸ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಅದರಲ್ಲಿ ಹೇಡನ್ ಕೂಡ ಸೇರಿದ್ದಾರೆ. ಭಾರತ ಮೂಲದ ಆಸೀಸ್ ರಾಜಕಾರಣಿ ಲಿಸಾ ಸಿಂಗ್ ಕೂಡ ಹೊಸ ವ್ಯಾಪಾರ ಪ್ರತಿನಿಧಿಯಾಗಿದ್ದಾರೆ. ಮಂಡಳಿಗೆ ಅಶೋಕ್ ಜೇಕಬ್ ಅವರನ್ನು ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಆರಿಸಲಾಗಿದೆ ಎಂದು ಆಸೀಸ್ ವಿದೇಶಾಂತ ಸಚಿವ ಮರಿಸ್ಸೆ ಪೇಯ್ನ ತಿಳಿಸಿದ್ದಾರೆ.

    ಟಾಸ್ಮೇನಿಯಾದ ಮಾಜಿ ಸೆನೆಟರ್ ಲಿಸಾ ಸಿಂಗ್ ಮಂಡಳಿ ಉಪಾಧ್ಯಕ್ಷರಾಗಿರುತ್ತಾರೆ. ಆಸೀಸ್ ಪರ 103 ಟೆಸ್ಟ್ ಮತ್ತು 161 ಟೆಸ್ಟ್ ಪಂದ್ಯಗಳನ್ನು ಆಡಿ ಒಟ್ಟಾರೆ 40 ಶತಕಗಳನ್ನು ಸಿಡಿಸಿರುವ ಹೇಡನ್, 2010ರಲ್ಲಿ ಆರ್ಡರ್ ಆ್ ಆಸ್ಟ್ರೇಲಿಯಾ ಗೌರವವನ್ನೂ ಪಡೆದಿದ್ದರು.

    ಇದನ್ನೂ ಓದಿ: ಐಪಿಎಲ್ ವೇಳೆ ಕರೊನಾ ಟೆಸ್ಟ್‌ಗೆ ಬಿಸಿಸಿಐ ಎಷ್ಟು ಕೋಟಿ ರೂ. ಖರ್ಚು ಮಾಡಲಿದೆ ಗೊತ್ತೇ?

    ಆಸ್ಟ್ರೇಲಿಯಾ-ಭಾರತ ಕೌನ್ಸಿಲ್ ಭಾರತದಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಮತ್ತು ಆರ್ಥಿಕ ಪಾಲಿಸಿಯ ಹಿತಾಸಕ್ತಿ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಹೇಡನ್ 2018ರಿಂದ ಆಸ್ಟ್ರೇಲಿಯಾ-ಭಾರತ ಒಡಂಬಡಿಕೆಯ ಇನ್‌ಸ್ಟಿಟ್ಯೂಟ್ ಸದಸ್ಯರೂ ಆಗಿದ್ದಾರೆ.

    ಮಂಕಡಿಂಗ್​ ವಿಚಾರದಲ್ಲಿ ಜಾವಗಲ್ ಶ್ರೀನಾಥ್ ಬೌಲರ್‌ಗಳ ಪರ ನಿಂತಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts