More

    ಭಾರತದ ಕೋವಿಶೀಲ್ಡ್​ಗೆ ಆಸ್ಟ್ರೇಲಿಯಾ ಮಾನ್ಯತೆ; ಲಸಿಕೆ ಪಡೆದ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ

    ನವದೆಹಲಿ: ಭಾರತದಿಂದ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲು ಇಚ್ಛಿಸುವ ಜನರಿಗೆ, ಉನ್ನತ ಅಧ್ಯಯನ ನಡೆಸಲು ಉತ್ಸುಕರಾದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಬಂದಿದೆ. ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಶೀಘ್ರವೇ ಮತ್ತೆ ಪ್ರವೇಶಾವಕಾಶ ನೀಡಲಿದೆ. ಇದೇ ನಿಟ್ಟಿನಲ್ಲಿ ಭಾರತದ ಕೋವಿಶೀಲ್ಡ್​ ಲಸಿಕೆಗೆ ಅಲ್ಲಿನ ಉನ್ನತ ಔಷಧ ನಿಯಂತ್ರಕ ಪ್ರಾಧಿಕಾರ ಮಾನ್ಯತೆ ನೀಡಿದೆ.

    ಭಾರತದಲ್ಲಿ ಸೀರಮ್​ ಇನ್ಸ್​ಸ್ಟಿಟ್ಯೂಟ್ ತಯಾರಿಸುತ್ತಿರುವ ಆಸ್ಟ್ರಾಜೆನೆಕಾ ಕರೊನಾ ಲಸಿಕೆಯಾದ ಕೋವಿಶೀಲ್ಡ್​ ಮತ್ತು ಚೀನಾದ ಸಿನೋವಾಕ್​ನ ಲಸಿಕೆಗಳನ್ನು ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್​ ಅಡ್ಮಿನಿಸ್ಟ್ರೇಷನ್ ಮಾನ್ಯತೆ ಪಡೆದ ಕರೊನಾ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಈ ಲಸಿಕೆಗಳನ್ನು ಪಡೆದ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳಿಗೆ ದೇಶವನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಸ್ಕಾಟ್ ಮಾರ್ರಿಸನ್ ಶುಕ್ರವಾರ ಘೋಷಿಸಿದ್ದಾರೆ.

    ಇದನ್ನೂ ಓದಿ: ಚಪಾತಿ ಮಾಡು, 3 ಗಂಟೆಯಲ್ಲಿ ಬರ್ತೇನೆ ಎಂದೋಳು ಆತ್ಮಹತ್ಯೆ ಏಕೆ ಮಾಡ್ಕೋತಾಳೆ? ನಟಿಯ ಅಮ್ಮನ ಕಣ್ಣೀರು

    ಆಸ್ಟ್ರೇಲಿಯಾದಲ್ಲಿ ಶೇ.80 ರಷ್ಟು ಜನಸಂಖ್ಯೆಗೆ ಲಸಿಕೀಕರಣ ಪೂರ್ಣವಾಗಿದ್ದು, ಕರೊನಾಪ್ರೇರಿತ ಗಡಿನಿರ್ಬಂಧಗಳನ್ನು ಸಡಿಲಗೊಳಿಸುವ ಪ್ರಯತ್ನದಲ್ಲಿದೆ. “ಅತಿ ಶೀಘ್ರವಾಗಿ, ನಾವು ಅಂತರರಾಷ್ಟ್ರೀಯ ಗಡಿಗಳನ್ನು ಮತ್ತೆ ತೆರೆಯಲು ಸಾಧ್ಯವಾಗಲಿದೆ. ಮುಂದಿನ ತಿಂಗಳಿಂದ ಈ ಪ್ರಕ್ರಿಯೆ ಆರಂಭವಾಗಲಿದೆ” ಎಂದು ಪ್ರಧಾನಿ ಮಾರಿಸನ್ ಹೇಳಿದ್ದಾರೆ.

    ನ್ಯೂ ಸೌತ್​ ವೇಲ್ಸ್​ ಸರ್ಕಾರದ ಪ್ರಕಾರ ಸುಮಾರು 57,000 ವಿದ್ಯಾರ್ಥಿಗಳು ಅನ್ಯರಾಷ್ಟ್ರಗಳಿಂದ ಆಸ್ಟ್ರೇಲಿಯಾಗೆ ತೆರಳುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಶಿಕ್ಷಣವು ದೇಶದ ಅತಿಮುಖ್ಯ ಆದಾಯ ಮೂಲವಾಗಿದ್ದು, ಅತಿಹೆಚ್ಚಿನ ವಿದ್ಯಾರ್ಥಿಗಳು ಚೀನಾ, ಭಾರತ, ನೇಪಾಳ್ ಮತ್ತು ವಿಯೆಟ್​ನಾಮ್​ ಮೂಲದವರಾಗಿರುತ್ತಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಹೊಸ ಮೈಲಿಗಲ್ಲು: ಅರ್ಹ ಜನಸಂಖ್ಯೆಯ ಕಾಲು ಭಾಗಕ್ಕೆ ಎರಡೂ ಡೋಸ್ ಲಸಿಕೆ

    ಅನಗತ್ಯ ಪ್ರಯಾಣ ಬೇಡ, ಆನ್​ಲೈನ್​ ಆಚರಿಸಿ: ಹಬ್ಬದ ಸಮಯಕ್ಕೆ ಜನರಿಗೆ ಸರ್ಕಾರದ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts