More

    ವಾಹನ ಸವಾರರೇ ಗಮನಿಸಿ: ಈ ರಸ್ತೆಗಳಲ್ಲಿ ಇನ್ನು ಒನ್​​ವೇ ಇಲ್ಲ! ಮಾರ್ಪಾಡುಗಳ ವಿವರ ಇಲ್ಲಿದೆ

    ಬೆಂಗಳೂರು: ಸುಗಮ ಸಂಚಾರದ ದೃಷ್ಟಿಯಿಂದ ಮಡಿವಾಳ ಮುಖ್ಯರಸ್ತೆ ಮತ್ತು ಮಾರುಕಟ್ಟೆ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾರ್ಪಡಿಸಿ ಗುರುವಾರ(ನ.4)ದಿಂದ ದ್ವಿಮುಖಸಂಚಾರ(ಟು ವೇ ಟ್ರಾಫಿಕ್​) ವ್ಯವಸ್ಥೆ ಕಲ್ಪಿಸಲಾಗಿದೆ. ಮಡಿವಾಳ ಮುಖ್ಯರಸ್ತೆಯಲ್ಲಿ ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಠಾಣೆವರೆಗೆ, ಸರ್ಜಾಪುರ ರಸ್ತೆಯಲ್ಲಿ ಕೃಪಾನಿಧಿ ಜಂಕ್ಷನ್‌ನಿಂದ ಸರ್ಜಾಪುರ ರಸ್ತೆ ಜಂಕ್ಷನ್​​​ವರೆಗೆ ಮತ್ತು ಮಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ಕೃಪಾನಿಧಿ ಜಂಕ್ಷನ್‌ನಿಂದ ಮಡಿವಾಳ ಠಾಣೆವರೆಗೆ ಇದ್ದಂತಹ ಏಕಮುಖ ಸಂಚಾರ ವ್ಯವಸ್ಥೆಯನ್ನು ಮಾರ್ಪಡಿಸಲಾಗಿದೆ.

    ಚೆಕ್‌ಪೋಸ್ಟ್ ಕಡೆಯಿಂದ ಮಡಿವಾಳ ಕಡೆಗೆ ಸಂಚರಿಸುವ ಲಘು ವಾಹನಗಳು ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ನೇರವಾಗಿ ಅಯ್ಯಪ್ಪ ಅಂಡರ್ ಪಾಸ್ ಮುಖಾಂತರ ಸಿಲ್ಕ್ ಬೋರ್ಡ್ ಕಡೆಗೆ ಮತ್ತು ಮಡಿವಾಳ ಮಾರುಕಟ್ಟೆ ರಸ್ತೆ ಕಡೆಗೆ ಸಂಚರಿಸಬಹುದು.

    ವಾಹನ ಸವಾರರೇ ಗಮನಿಸಿ: ಈ ರಸ್ತೆಗಳಲ್ಲಿ ಇನ್ನು ಒನ್​​ವೇ ಇಲ್ಲ! ಮಾರ್ಪಾಡುಗಳ ವಿವರ ಇಲ್ಲಿದೆ

    ಚೆಕ್ ಪೋಸ್ಟ್ ಕಡೆಯಿಂದ ಮಡಿವಾಳ ಠಾಣೆಯ ಕಡೆಗೆ ಸಂಚರಿಸುವ ಸರಕು ಸಾಗಾಣಿಕೆ ವಾಹನಗಳು ಹಾಗೂ ಬಸ್ಸುಗಳು ಎಂದಿನಂತೆ ವಾಟರ್ ಟ್ಯಾಂಕ್ ಮತ್ತು ಕೃಪಾನಿಧಿ ಜಂಕ್ಷನ್ ಮುಖಾಂತರ ಮಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

    ಇದನ್ನೂ ಓದಿ: ಕುಳಿತಲ್ಲಿಂದಲೇ ದೆಹಲಿಯ ಮಾರುಕಟ್ಟೆಯಲ್ಲಿ ಶಾಪಿಂಗ್! ಕೇಜ್ರಿವಾಲ್​ರ ಹೊಸ ಯೋಜನೆ

    ಕೃಪಾನಿಧಿ ಜಂಕ್ಷನ್ ಕಡೆಯಿಂದ ಸರ್ಜಾಪುರ ರಸ್ತೆ ಜಂಕ್ಷನ್ ಕಡೆಗೆ ಬರುವ ವಾಹನಗಳು ಕೃಪಾ ನಿಧಿ ಜಂಕ್ಷನ್‌ನಿಂದ ಸರ್ಜಾಪುರ ರಸ್ತೆಯಲ್ಲಿ ನೇರವಾಗಿ ವಾಟರ್ ಟ್ಯಾಂಕ್ ಮುಖಾಂತರ ಸಂಚರಿಸಬಹುದು.

    ಸಿಲ್ಕ್ ಬೋರ್ಡ್ ಕಡೆಯಿಂದ ಬರುವ ದ್ವಿಚಕ್ರ ವಾಹನಗಳು ಮತ್ತು ಲಘುವಾಹನಗಳಿಗೆ ಮಡಿವಾಳ ಠಾಣಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮಾರುಕಟ್ಟೆ ರಸ್ತೆ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಸಿಲ್ಕ್ ಬೋರ್ಡ್ ಕಡೆಯಿಂದ ಬರುವ ಭಾರೀ ಸರಕು ಸಾಗಣೆ ವಾಹನಗಳು ಹಾಗೂ ಬಸ್ಸುಗಳು ಎಂದಿನಂತೆ ನೇರವಾಗಿ ಮಡಿವಾಳ ಮುಖ್ಯರಸ್ತೆ ಅಯ್ಯಪ್ಪ ಜಂಕ್ಷನ್ ಮುಖಾಂತರ ವಾಟರ್ ಟ್ಯಾಂಕ್ ಕಡೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

    ಹೃದಯ-ಶ್ವಾಸಕೋಶಗಳ ಆರೋಗ್ಯ ವರ್ಧನೆಗೆ ಹೇಳಿಮಾಡಿಸಿದ ಆಸನವಿದು; ಚೇಳಿನಂತೆ ಕಾಣುವ ಭಂಗಿ!

    ದೊಡ್ಡ ಆಟಗಾರರು ಇಷ್ಟು ಕೆಟ್ಟ ಕ್ರಿಕೆಟ್​ ಆಡಿದರೆ..? ಹೀಗೆ ಮಾಡಿ ಎಂದು ಬಿಸಿಸಿಐಗೆ ಸಲಹೆ ಕೊಟ್ಟ ಕಪಿಲ್​ದೇವ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts