More

    ಶಾಲೆ ಏನೋ ಶುರುವಾಯಿತು, ಆದರೆ ಹಾಜರಾತಿ ಯಾಕೆ ಹೀಗಾಯಿತು!?; ಹಬ್ಬದ ಬಳಿಕದ ಆ ನಿರೀಕ್ಷೆಯೂ ಹುಸಿಯಾಯಿತು..

    ಬೆಂಗಳೂರು: ಹಬ್ಬದ ನಂತರದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಪ್ರಮಾಣ ಹೆಚ್ಚಾಗಲಿದೆ ಎಂಬ ಭರವಸೆ ಹುಸಿಯಾಗಿದೆ. ಸೋಮವಾರ 6ರಿಂದ 8ನೇ ತರಗತಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಎಂದಿನಂತೆ ಶೇ.45 ಆಸುಪಾಸಿನಲ್ಲಿದೆ. ಆದರೆ, 9ರಿಂದ 10ನೇ ತರಗತಿಯ ಹಾಜರಾತಿ ಮಾತ್ರ ಶೇ.50 ದಾಟಿದೆ.

    6ರಿಂದ 8ನೇ ತರಗತಿ ಆರಂಭವಾಗಿ ಒಂದುವಾರ ತುಂಬಿದೆ. ಹಬ್ಬ ಕೂಡ ಕಳೆದಿದೆ. ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಎಲ್ಲರಲ್ಲಿತ್ತು. ಆದರೆ, ಪಾಲಕರು ಏಕೋ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವುದು ಹಾಜರಾತಿ ಪ್ರಮಾಣದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

    ಇದನ್ನೂ ಓದಿ: ಪಲ್ಟಿ ಆಗಿ ಅಡಿಮೇಲಾದ ಬಸ್​; ಅಪಘಾತದ ಸಂದರ್ಭ ಬಸ್​ ಒಳಗಿದ್ದರು 30ಕ್ಕೂ ಹೆಚ್ಚು ಪ್ರಯಾಣಿಕರು!

    ಹಬ್ಬದ ಹಿಂದಿನ ದಿನ ವಿದ್ಯಾರ್ಥಿಗಳ ಪ್ರಮಾಣ ಶೇ.35ಕ್ಕೆ ಕುಸಿತ ಕಂಡಿತು. ಆದರೆ, ಶಾಲೆ ಆರಂಭವಾದ ಎರಡು ಮೂರು ದಿನದಲ್ಲಿ ಶೇ.45 ಹಾಜರಾತಿ ಇತ್ತು. ಆ ಪ್ರಕಾರ ನೋಡಿದರೆ, ಶಾಲೆ ಆರಂಭವಾಗಿ ಒಂದುವಾರ ಕಳೆದಿದೆ. ಕನಿಷ್ಠ ಶೇ.50 ಹಾಜರಾತಿ ನಿರೀಕ್ಷೆಯಲ್ಲಿದ್ದ ಶಾಲೆಗಳ ಮುಖ್ಯಸ್ಥರು ಮಕ್ಕಳ ಹಾಜರಾತಿ ಪ್ರಮಾಣ ಬೇಸರ ತಂದಿದೆ.

    ಇದನ್ನೂ ಓದಿ: 42 ಸಲ ಸಂಚಾರ ನಿಯಮ ಉಲ್ಲಂಘಿಸಿ ಕೊನೆಗೂ ಸಿಕ್ಕಿಬಿದ್ದ; ಜಂಟಿ ಪೊಲೀಸ್ ಆಯುಕ್ತರ ಅಭಿಮಾನಿ, ಪ್ರೆಸ್​ ಅಂತೆಲ್ಲ ಪೋಸ್ ಕೊಟ್ಟು ತಪ್ಪಿಸಿಕೊಳ್ತಿದ್ದ!

    6ನೇ ತರಗತಿ ಶೇ.43.50, 7ನೇ ತರಗತಿ ಶೇ.42.01 ಮತ್ತು 8ನೇ ತರಗತಿ ಶೇ.37.33 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ.48.35 ಶಾಲೆಗಳು ವಿದ್ಯಾರ್ಥಿಗಳ ಹಾಜರಾತಿಯ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡಿದ್ದು, ಶೇ.51.65 ಶಾಲೆಗಳು ಅಪ್‌ಲೋಡ್ ಮಾಡಿಲ್ಲ. 9ನೇ ತರಗತಿ ಶೇ.54.52 ಹಾಗೂ 10ನೇ ತರಗತಿ ಶೇ.56.24 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

    ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ; ಹೆಂಡ್ತಿಯನ್ನು ಉಸಿರುಗಟ್ಟಿಸಿ ಕೊಂದ ಗಂಡ ತಾನು ನೇಣು ಬಿಗಿದುಕೊಂಡ..

    ಇನ್ನೆಷ್ಟು ದಿನ ನೈಟ್​ ಕರ್ಫ್ಯೂ?; ಇಲ್ಲಿದೆ ನೋಡಿ ಪೊಲೀಸ್ ಕಮಿಷನರ್ ಅವರ ಹೊಸ ಆದೇಶ..

    ಗುದ್ದಿದವನಿಗೆ ಬಂದು ಮತ್ತೊಬ್ಬ ಗುದ್ದಿದ; ಹೆದ್ದಾರಿಯಲ್ಲಿ ಸರಣಿ ಅಪಘಾತ, ನಜ್ಜುಗುಜ್ಜಾದ ಕಾರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts