More

    ಎಟಿಎನ್‌ಸಿಸಿಯಲ್ಲಿ ಸಾಂಪ್ರದಾಯಿಕ ಉಡುಗೆ ಸಂಭ್ರಮ

    ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಎಟಿಎನ್‌ಸಿಸಿ(ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು)ಯಲ್ಲಿ ಶನಿವಾರ ವಾರಾಂತ್ಯದ ಖುಷಿ ಜತೆಗೆ ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಸಂಭ್ರಮ ಮನೆ ಮಾಡಿತ್ತು. ಹೊಸ ಹೊಸ ಧರಿಸುಗಳೊಂದಿಗೆ ಇಡೀ ಕಾಲೇಜು ಕ್ಯಾಂಪಸ್ ಬಣ್ಣಮಯವಾಗಿತ್ತು.
    ಸದಾ ಜೀನ್ಸ್ ಪ್ಯಾಂಟ್, ಟೀ ಶರ್ಟ್‌ಗಳನ್ನೇ ಹೆಚ್ಚಾಗಿ ಧರಿಸಿ ಬರುತ್ತಿದ್ದ ವಿದ್ಯಾರ್ಥಿಗಳು ಬಿಳಿ ಪಂಚೆ, ಕಪ್ಪು ಅಂಗಿ ಧರಿಸಿದ್ದರು. ಇತ್ತ ವಿದ್ಯಾರ್ಥಿನಿಯರು ಬಣ್ಣದ ಬಣ್ಣದ ಸಾಂಪ್ರದಾಯಿಕ ಸೀರೆ ಧರಿಸಿದ್ದ ಕಂಗೊಳಿಸಿದರು. ವಿವಿಧ ವೇಷಭೂಷಣಗಳೊಂದಿಗೆ ಕಪ್ಪು ಕನ್ನಡಕ ಧರಿಸಿ ಮಿಂಚಿದರು.
    ಎತ್ನಿಕ್ ಡೇ ಹಿನ್ನಲೆಯಲ್ಲಿ ಎಟಿಎನ್‌ಸಿ ಕಾಲೇಜಿನಲ್ಲಿ ವಿವಿಧ ರಾಜ್ಯದ ಸಂಸ್ಕೃತಿ ಬಿಂಬಿಸುವ ಉಡುಗೆಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಇದರಿಂದ ಇಡೀ ಕಾಲೇಜು ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
    ಕೆಲವರು ತಮ್ಮ ಸ್ನೇಹಿತೆಯರೊಂದಿಗೆ ಫೋಟೊ ತೆಗೆಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದರು. ವಿವಿಧ ಸಂಗೀತ ಪರಿಕರಗಳೊಂದಿಗೆ ವಿವಿಧ ನೃತ್ಯಗಳನ್ನು ಮಾಡಿ ಖುಷಿಪಟ್ಟರು. ಜತೆಗೆ ಸ್ನೇಹಿತರೊಂದಿಗೆ ಒಟ್ಟಾಗಿ ಮೊಬೈಲ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts