More

    ಅಪರಿಚಿತರಿಗೆ ಎಟಿಎಂ ಕಾರ್ಡ್​​ ಕೊಡುವ ಮುನ್ನ ಎಚ್ಚರ: ಮೈಸೂರಿನಲ್ಲಿ ಎಟಿಎಂ ಚೋರನ ಬಂಧನ

    ಮೈಸೂರು: ಎಟಿಎಂ ಕಾರ್ಡುಗಳನ್ನು ಅಪರಿಚಿತರಿಗೆ ಕೊಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಿಮ್ಮ ಖಾತೆಯಲ್ಲಿರುವ ಹಣ ಕೆಲವೇ ಕ್ಷಣಗಳಲ್ಲಿ ಖಾಲಿಯಾಗಿಬಿಡುತ್ತದೆ.

    ಇಂತಹದ್ದೊಂದು ಪ್ರಕರಣ ಮೈಸೂರಿನಲ್ಲಿ ನಡೆದಿದ್ದು, ಅಮಾಯಕರನ್ನೇ ಟಾರ್ಗೆಟ್​ ಮಾಡಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ಖತರ್ನಾಕ್​ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

    ಎಚ್​.ಡಿ. ಕೋಟೆ ಮೂಲದ ಗಾರೆ ಕೆಲಸ ಮಾಡುತ್ತಿದ್ದ ಈತನ ಬಳಿ ಹತ್ತಾರು ಎಟಿಎಂ ಕಾರ್ಡ್​ಗಳು ಪತ್ತೆಯಾಗಿವೆ. ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಬರುತ್ತಿದ್ದ ಅಮಾಯಕರನ್ನೇ ಗುರಿಯಾಗಿರಿಸಿ, ಹಣ ತೆಗೆದುಕೊಡುವ ನಾಟಕವಾಡಿ, ಕಾರ್ಡ್​ ಎಗರಿಸುತ್ತಿದ್ದ.

    ನಿಮ್ಮ ಕಾರ್ಡ್​​ ಸರಿ ಇಲ್ಲ ಎಂದು ಹೇಳಿ ಪಿನ್​​ ನಂಬರ್ ಪಡೆದುಕೊಳ್ಳುತ್ತಿದ್ದ, ಆನಂತರ ಎರಡು ದಿನ ಬಿಟ್ಟು ಮತ್ತೊಂದು ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೊರಟವರಿಗೆ ಶಾಕ್​ ಕಾದಿತ್ತು. ಖಾತೆಯಲ್ಲಿದ್ದ ಹಣವೆಲ್ಲವೂ ಮಾಯವಾಗಿದೆ. ಹೀಗೆ ಪಿನ್​​ ನಂಬರ್​ ಪಡೆದು ಯಾಮಾರಿಸುತ್ತಿದ್ದ ಕಳ್ಳ ಕೊನೆಗೂ ಕೆ.ಆರ್​. ನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ವೆಳೆ ಸಿಸಿಟಿವಿ ಪರಿಶೀಲಿದಾಗ ಕಳ್ಳನ ಕೈ ಚಳಕ ಬೆಳಕಿಗೆ ಬಂದಿದೆ. ಎಟಿಎಂನಿಂದ ಕದ್ದ ಹಣದಿಂದ ಈತನ ಹೆಂಡತಿಗೆ ಚಿನ್ನ ಕೊಡಿಸುತ್ತಿದ್ದ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ವಿಚಾರಣೆ ವೇಳೆ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)

    ಚೀನಾದಲ್ಲಿ ಇನ್ನು ಮುಂದೆ “ಲಾಕ್​ಡೌನ್”​​ ಪದ ಬಳಸುವಂತಿಲ್ಲ!

    ರೈತರ ಖಾತೆಗೆ ಬಂತು ಹಣ: ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts