More

    ಕಾಂಗ್ರೆಸ್​ಗೆ ಬಿಗ್‌ ಶಾಕ್: ಆರು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಶಾಸಕ ರಾವತ್ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ಲೋಕಸಭಾ ಚುನಾವಣೆಯ ಮಧ್ಯೆ ಕಾಂಗ್ರೆಸ್​ಗೆ ಮತ್ತೊಂದು ಶಾಕ್ ಎದುರಾಗಿದೆ. ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಇದನ್ನೂ ಓದಿ: ಚುನಾವಣೆ ವೇಳೆ ಸಿಎಂ ಅರವಿಂದ್​ ಕ್ರೇಜಿವಾಲ್ ಬಂಧನ ಯಾಕೆ? ಇಡಿಗೆ ಕೋರ್ಟ್​ ಪ್ರಶ್ನೆ!

    ವಿಜಯಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದ ರಾಮ್ನಿವಾಸ್ ರಾವತ್ ಅವರು ಕಾಂಗ್ರೆಸ್​ ತೊರೆದು ಶಿಯೋಪುರದಲ್ಲಿ ಬಿಜೆಪಿ ಸೇರ್ಪಡೆಯಾದರು ಸೇರಿದರು. ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ರಾವತ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

    ಒಬಿಸಿ ಸಮುದಾಯದ ಪ್ರಮುಖ ನಾಯಕರಾಗಿರುವ ರಾಮನಿವಾಸ್ ರಾವತ್ 2019ರ ಲೋಕಸಭೆ ಚುನಾವಣೆಯಲ್ಲಿ ಮೊರೆನಾ ಕ್ಷೇತ್ರದಿಂದ ನರೇಂದ್ರ ಸಿಂಗ್ ತೋಮರ್ ವಿರುದ್ಧ ಸ್ಪರ್ಧಿಸಿ ಭಾರಿ ಅಂತರದಿಂದ ಸೋತಿದ್ದರು.

    ರಾವತ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಥಾನವನ್ನು ಪಡೆಯಲು ಬಯಸಿದ್ದರೂ, ಕಾಂಗ್ರೆಸ್ ಪಕ್ಷವು ಮೊರೆನಾ ಸ್ಥಾನದಿಂದ ಸತ್ಯಪಾಲ್ ಸಿಂಗ್ ಸಿಕರ್ವಾರ್ ಅವರಿಗೆ ಟಿಕೆಟ್​ ನೀಡಿತು. ಇದರಿಂದ ಅಸಮಾಧಾನಗೊಂಡ ರಾವತ್​ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ರಾವತ್​ ಪಕ್ಷ ಸೇರ್ಪಡೆ ಫೋಟೋಗಳನ್ನು ಸಿಎಂ ಮೋಹನ್ ಯಾದವ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ ನಲ್ಲಿ ಪೋಸ್ಟ್​ ಮಾಡಿದ್ದಾರೆ.
    ಲೋಕಸಭೆ ಚುನಾವಣೆಯಲ್ಲಿ ನಾಲ್ಕು ಹಂತಗಳಲ್ಲಿ ಮಧ್ಯಪ್ರದೇಶ ಮತದಾನ ನಡೆಯಲಿದ್ದು, ಇಂದೋರ್‌ನಲ್ಲಿ ಮೇ 13 ರಂದು ಮತದಾನ ನಡೆಯಲಿದೆ.

    ಬಾಲಾಕೋಟ್ ದಾಳಿ ಬಗ್ಗೆ ಮೊದಲು ಹೇಳಿದ್ದು ಪಾಕಿಸ್ತಾನಕ್ಕೆ, ರಹಸ್ಯ ಬಿಚ್ಚಿಟ್ಟ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts