More

    ನೆಚ್ಚಿನ ತಂಡ ಗೆದ್ದ ಸಂಭ್ರಮಾಚರಣೆ ವೇಳೆ ಪ್ರಾಣತೆತ್ತ ಫುಟ್​ಬಾಲ್​ ಅಭಿಮಾನಿ

    ಮ್ಯಾಡ್ರಿಡ್​: ಕ್ರೀಡೆಯಲ್ಲಿ ಸಂಭ್ರಮಾಚರಣೆಗೆ ಬರವಿಲ್ಲ. ನೆಚ್ಚಿನ ತಂಡ ಗೆದ್ದರಂತೂ ಅಭಿಮಾನಿಗಳ ಸಂಭ್ರಮ ಹೇಳತೀರದು. ಎರಡು ತಂಡಗಳ ಅಭಿಮಾನಿಗಳ ನಡುವಿನ ಜಿದ್ದಾಜಿದ್ದಿಯನ್ನು ಎಷ್ಟೋ ಬಾರಿ ನೋಡಿದ್ದೇವೆ. ನೆಚ್ಚಿನ ತಂಡ ಜಯಿಸಿದ ಬೆನ್ನಲ್ಲೇ ಸಂಭ್ರಮಿಸುತ್ತಿದ್ದ 14 ವರ್ಷದ ಬಾಲಕ ಪ್ರಾಣ ಕಳೆದುಕೊಂಡ ಘಟನೆ ಸ್ಪೇನ್​ನಲ್ಲಿ ನಡೆದಿದೆ. ಅಥ್ಲೆಟಿಕೊ ಮ್ಯಾಡ್ರಿಡ್ಸ್​ ತಂಡ ಪ್ರತಿಷ್ಠಿತ ಲಾ ಲೀಗಾ ಪ್ರಶಸ್ತಿ ಗೆದ್ದ ಬೆನ್ನಲ್ಲೆ ಈ ದುರ್ಟನೆ ನಡೆದಿದೆ.

    ಇದಕ್ಕೂ ಓದಿ:ಕೊಲೆ ಪ್ರಕರಣದಲ್ಲಿ ಪೊಲೀಸ್ ಬಲೆಗೆ ಬಿದ್ದ ಎರಡು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್,

    ಅಥ್ಲೆಟಿಕೊ ಮ್ಯಾಡ್ರಿಡ್ಸ್​ ತಂಡ ಕಾರು ನಿಲ್ದಾಣದಲ್ಲಿ ಸಂಭ್ರಮಿಸುತ್ತಿದ್ದಾಗ 14 ವರ್ಷದ ಅಭಿಮಾನಿ ನಿಧನರಾದರು. ಸಂಭ್ರಮಿಸುತ್ತಿದ್ದ ಬರದಲ್ಲಿ ತಲೆ ಗೋಡೆಗೆ ಬಡಿದಾಗ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ತಕ್ಷಣವೇ ತುರ್ತುಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಲೀಗ್​ನಲ್ಲಿ 11ನೇ ಬಾರಿಗೆ ಪ್ರಶಸ್ತಿ ಜಯಿಸಿದ ಅಥ್ಲೆಟಿಕೊ ತಂಡದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಸುಮಾರು 2 ಸಾವಿರದಷ್ಟು ಪ್ರೇಕ್ಷಕರು ಸಂಭ್ರಮಿಸುತ್ತಿದ್ದರು.

    ಇದನ್ನೂ ಓದಿ: ಎಫ್ಐಎಚ್ ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಪುನರಾಯ್ಕೆ

    ಕೋವಿಡ್​-19 ಮಾರ್ಗಸೂಚಿಯಂತೆ ಸಾರ್ವಜನಿಕವಾಗಿ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿತ್ತು. ಭಾನುವಾರ ತಂಡದ ಅಭಿಮಾನಿಗಳು ಸಂಭ್ರಮದ ಅಂಗವಾಗಿ ಸಾರ್ವಜನಿಕವಾಗಿ ಪರೇಡ್​ ನಡೆಸಲು ತೀರ್ಮಾನಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts