More

    ಅಥಣಿ ಜಿಲ್ಲೆಗಾಗಿ ಧ್ವನಿ ಎತ್ತುವಂತೆ ಮನವಿ

    ಅಥಣಿ: ಚಳಿಗಾಲ ಅಧಿವೇಶನದಲ್ಲಿ ಅಥಣಿ ಜಿಲ್ಲೆಯಾಗಿ ೋಷಿಸುವಂತೆ ಆಗ್ರಹಿಸಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಶನಿವಾರ ಅಥಣಿ ಜಿಲ್ಲಾ ಹೋರಾಟಗಾರರು ಮನವಿ ಸಲ್ಲಿಸಿದರು.

    ಲಕ್ಷ್ಮಣ ಸವದಿ ಮಾತನಾಡಿ, ಅಥಣಿ ಜಿಲ್ಲೆಯಾಗುವ ಎಲ್ಲ ಅರ್ಹತೆ ಹೊಂದಿದೆ. ಜಿಲ್ಲಾ ಕೇಂದ್ರದಿಂದ 150 ಕಿಮೀ ದೂರದಲ್ಲಿದೆ. ಬೆಳಗಾವಿಗೆ ಹೋಗಿಬರಲು ಜನರಿಗೆ ತುಂಬ ತೊಂದರೆಯಾಗುತ್ತಿದೆ. ಶೈಕ್ಷಣಿಕ, ರಾಜಕೀಯ, ಆರ್ಥಿಕ, ಕೃಷಿ ಮತ್ತು ಔದ್ಯೋಗಿಕವಾಗಿ ಪ್ರಗತಿ ಪಥದಲ್ಲಿರುವ ಅಥಣಿಯನ್ನು ಜಿಲ್ಲೆಯನ್ನಾಗಿಸಲು ಅಧಿವೇಶನಲ್ಲಿ ಧ್ವನಿ ಎತ್ತುವೆ ಎಂದರು.

    ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೊಡಕರ ಮಾತನಾಡಿ, ಅಥಣಿ ಭಾಗದ ಶಾಸಕರನ್ನು ಒಗ್ಗೂಡಿಸಿ ಗಡಿಭಾಗದಲ್ಲಿರುವ ಅಥಣಿ ಜಿಲ್ಲೆಯನ್ನಾಗಿಸುವಂತೆ ಅಧಿವೇಶನದಲ್ಲಿ ಚರ್ಚಿಸಿ ನ್ಯಾಯ ಒದಗಿಸಬೇಕು ಎಂದರು. ಮುಖಂಡರಾದ ದೀಪಕ ಬುರ್ಲಿ, ರವಿ ಬಡಕಂಬಿ, ಪ್ರಮೋದ ಬಿಳ್ಳೂರ, ಶಿವಪ್ಪ ಹಲವೇಗಾರ, ದೇವೇಂದ್ರ ಬಿಸ್ವಾಗಾರ, ಆಕಾಶ ನಂದಗಾಂವ, ಶಶಿಧರ ಬುರ್ಲಿ, ರವಿ ಬಾಸಿಂಗಿ, ರಮೇಶ ಮಾಳಿ, ಪಿಂಟು ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts