More

    ಅಟಲ್​ ಜೀ ಕನಸು ಇಂದು ನನಸಾಗಿದೆ: ಪ್ರಧಾನಿ ಮೋದಿ

    ಮನಾಲಿ: ದಿವಂಗತ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಕನಸು ಇಂದು ನನಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದವಾದ ಮತ್ತು ಕುದುರೆ ಲಾಳದ ಆಕಾರದ ಅಟಲ್​ ಸುರಂಗ ಮಾರ್ಗವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.

    ಸುರಂಗ ನಿರ್ಮಾಣದ ಹಿಂದಿರುವ ಶ್ರಮಿಕ ಜೀವಿಗಳಿಗೆ ಮೊದಲಿಗೆ ಧನ್ಯವಾದ ತಿಳಿಸಿದ ಮೋದಿ, ಇಂದು ಅಟಲ್​ ಜೀ ಕನಸು ಮಾತ್ರ ನನಸಾಗಿಲ್ಲ. ದಶಕಗಳವರೆಗೆ ಕಾದಿದ್ದ ಹಿಮಾಚಲ ಪ್ರದೇಶದ ಜನರ ಕಾಯುವಿಕೆ ದೂರವಾಗಿದೆ ಎಂದರು.

    ಅಟಲ್ ಸುರಂಗವು ಹಿಮಾಚಲ ಪ್ರದೇಶದ ಜೀವನಾಡಿಯಾಗಲಿದೆ. ಅಲ್ಲದೆ, ಲಡಾಖ್‌ಗೂ ಸಹಕಾರಿಯಾಗಲಿದ್ದು, ಗಡಿ ಭದ್ರತೆಯನ್ನು ಹೆಚ್ಚಿಸುತ್ತದೆ. ಬೆಟ್ಟಗಳ ಮೇಲಿನ ಮಾರ್ಗದಲ್ಲಿ 3 ರಿಂದ 4 ಗಂಟೆಯ ದೂರ ಕಡಿಮೆಯಾಗಿರುವುದರ ಅರ್ಥ ಏನೆಂಬುದು ಬಹುಶಃ ಹಿಮಾಚಲ ಪ್ರದೇಶದ ನನ್ನ ಸಹೋದರ-ಸಹೋದರಿಯರು ತಿಳಿದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಇದನ್ನೂ ಓದಿ: ಹಾಥರಸ್​ ಪ್ರಕರಣ: ಯುಪಿ ಪೊಲೀಸರ ದೌರ್ಜನ್ಯ ಬಿಚ್ಚಿಟ್ಟ ಸಂತ್ರಸ್ತೆ ಕುಟುಂಬದ ಸದಸ್ಯರು

    ಅಟಲ್​ ಜೀ ಸರ್ಕಾರದ ನಂತರ ಈ ಕೆಲಸವನ್ನು ಮರೆತು ಬಿಡಲಾಯಿತು. 2013-14 ಕೇವಲ 1300 ಮೀಟರ್ ಸುರಂಗದ ಕೆಲಸ ಮಾತ್ರ ಪೂರ್ಣಗೊಂಡಿತ್ತು. ಆದರೆ, ಇಂದು ಅವರ ಅಟಲ್​ ಜೀ ಕೆಲಸ ಪೂರ್ಣಗೊಂಡಿದೆ ಎಂದರು.

    ಅಟಲ್​ ಸುರಂಗವು ಭಾರತದ ಗಡಿ ಮೂಲಸೌಕರ್ಯಕ್ಕೆ ಹೊಸ ಬಲವನ್ನು ತುಂಬಲಿದೆ. ಇದು ವಿಶ್ವದರ್ಜೆಯ ಗಡಿ ಸಂಪರ್ಕದ ಉದಾಹರಣೆಯಾಗಿದೆ. ಸುರಂಗ ಸಂಪರ್ಕವು ಅಭಿವೃದ್ಧಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಗಡಿ ಪ್ರದೇಶಗಳಲ್ಲಿನ ಸಂಪರ್ಕವು ಸುರಕ್ಷತಾ ವಿಷಯಗಳಿಗೆ ನೇರವಾಗಿ ಸಂಬಂಧಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ನಮಗೆ ದೇಶವನ್ನು ರಕ್ಷಿಸುವುದಕ್ಕಿಂತ ಮುಖ್ಯವಾದದ್ದು ಬೇರೇನಿಲ್ಲ. ಆದರೆ, ದೇಶದ ರಕ್ಷಣಾ ಹಿತಾಸಕ್ತಿಗಳಿಗೆ ಧಕ್ಕೆಯುಂಟಾದ ಅವಧಿಯನ್ನು ಸಹ ಈ ದೇಶ ನೋಡಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಪಕ್ಷವನ್ನು ಮೋದಿ ಕುಟುಕಿದರು. (ಏಜೆನ್ಸೀಸ್​)

    VIDEO| ವಿಶ್ವದಲ್ಲೇ ಅತಿ ಉದ್ದದ ಅಟಲ್​ ಸುರಂಗ ಮಾರ್ಗದ ವಿಶೇಷತೆಗಳು ಹೀಗಿವೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts