More

    ವಿಷಾನಿಲ ಸೋರಿಕೆಯಿಂದ 80 ಮಹಿಳೆಯರು ಅಸ್ವಸ್ಥ

    ವಿಶಾಖಪಟ್ಟಣ: ಔಷಧ ತಯಾರಿಸುವ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದಾಗಿ 80 ಮಹಿಳೆಯರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

    ವಿಶಾಖಪಟ್ಟಣದ ಅಕ್ಚುತಂಪುರಂನಲ್ಲಿರುವ ಹಬ್ಸ್​​ ಪೊರಸ್​ ಲ್ಯಾರೋಟರಿಯಲ್ಲಿ ಅನಿಲ ಸೋರಿಕೆಯಾದ ಬೆನ್ನಲ್ಲೇ ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರು ಅಸ್ವಸ್ಥರಾಗಿ ಕುಸಿದಿದ್ದಾರೆ.ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತರ ನೌಕರರ ಆರೋಗ್ಯವೂ ಸ್ಥಿರವಾಗಿದೆ ಎಂದು ಪೊಲೀಸ್​ ಅಧಿಕಾರಿ ಗೌತಮಿ ತಿಳಿಸಿದ್ದಾರೆ.

    ಸದ್ಯ ಅನಿಲ ಸೋರಿಕೆ ಹೇಗಾಯಿತು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಶುಕ್ರವಾರ ಬೆಳಗ್ಗೆ 12.30ರ ಸಮಯದಲ್ಲಿ ಎಲ್ಲಾ ನೌಕರರು ಕಾರ್ಖಾನೆ ಒಳಗೆ ಬಂದು ಆಗಷ್ಟೇ ಕೆಲಸ ಪ್ರಾರಂಭಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ವಿವರಿಸಿದ್ದಾರೆ.

    ಇದು ವಿಷಾನಿಲವಾಗಿದ್ದು, ಮನುಷ್ಯನ ದೇಹ ಸೇರುತ್ತಿದ್ದಂತೆ ತೀವ್ರ ತಲೆಸುತ್ತು, ವಾಂತಿ ಲಕ್ಷಣಗಳು ಕಂಡುಬರುತ್ತವೆ. ಇಲ್ಲೂ ಕೂಡ ಮಹಿಳೆಯರಲ್ಲಿ ಈ ಲಕ್ಷಣಗಳು ಕಂಡುಬಂದಿದ್ದು, ತಕ್ಷಣವೇ ಚಿಕಿತ್ಸೆ ನೀಡಲಾಗಿದ್ದರಿಂದ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇತ್ತ ಅಸ್ವಸ್ಥ ಮಹಿಳೆಯರಿಗೆ ಉತ್ತಮ ಚಿಕಿತ್ಸೆ ನೀಡಬೇಕು, ಸರ್ಕಾರವೇ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ ಎಂದು ಮುಖ್ಯಮಂತ್ರಿ ಜಗನ್​​ಮೋಹನ್​ ರೆಡ್ಡಿ ಆದೇಶಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts