

ಬೆಂಗಳೂರು: ಸದನದಲ್ಲಿ ಇಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ಅಸ್ವಸ್ಥಗೊಂಡು ಕುಸಿದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು.
ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಕ್ಕೆ ಇಂದು ಬಿಜೆಪಿಯ ಹತ್ತು ಸದಸ್ಯರ ಅಮಾನತು ಮಾಡಲಾಗಿದ್ದು, ಅವರನ್ನು ಮಾರ್ಷಲ್ಗಳನ್ನು ಸದನದಿಂದ ಬಲವಂತವಾಗಿ ಹೊರಹಾಕಿದರು. ಈ ಸಂದರ್ಭದಲ್ಲಿ ಉಂಟಾದ ತಳ್ಳಾಟ ವೇಳೆ ಯತ್ನಾಳ್ ತೀವ್ರ ಅಸ್ವಸ್ಥಗೊಂಡು ಅಲ್ಲೇ ಕುಸಿದರು.
ಅಸ್ವಸ್ಥಗೊಂಡ ಅವರನ್ನು ವಿಧಾನಸೌಧದ ಆರೋಗ್ಯ ಸಿಬ್ಬಂದಿ ಕೂಡಲೇ ಆರೈಕೆ ಮಾಡಿದರು. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಯಲ್ಲಿ ಯತ್ನಾಳ್ಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಪತ್ನಿ ಶೈಲಜಾ ಹಾಗೂ ಪುತ್ರ ಹರ್ಷ ಆಸ್ಪತ್ರೆಗೆ ಧಾವಿಸಿದ್ದಾರೆ.