More

    ವಿವಿಧೆಡೆ ಭೂಕುಸಿತ; 20 ಮಂದಿ ದಾರುಣ ಸಾವು, ಜೀವಂತ ಸಮಾಧಿಯಾದ ಪುಟ್ಟ ಮಕ್ಕಳು

    ಡಿಸ್ಪುರ್​: ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದಲೂ ಸಿಕ್ಕಾಪಟೆ ಮಳೆಯಾಗುತ್ತಿದ್ದು, ವಿವಿಧೆಡೆ ಭೂಕುಸಿತ ಉಂಟಾಗಿ ಇಂದು ಸುಮಾರು 20 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

    ದಕ್ಷಿಣ ಅಸ್ಸಾಂನ ಬರಾಕ್​ ಕಣಿವೆ ಪ್ರದೇಶದ ವಿವಿಧ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಈ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದಲೂ ವಿಪರೀತ ಮಳೆ ಸುರಿಯುತ್ತಿತ್ತು ಎಂದು ವರದಿಯಾಗಿದೆ.
    ಕ್ಯಾಚರ್ ಮತ್ತು ಹೈಲಕಂಡಿಯಲ್ಲಿ ತಲಾ ಏಳು ಮಂದಿ ಮತ್ತು ಕರೀಂಗಂಜ್​ನಲ್ಲಿ ಆರು ಮಂದಿ ಮೃತಪಟ್ಟಿದ್ದು, ಉಳಿದವರು ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ತಬ್ಲಿಘಿಗಳಿಗೆ ಬಾಯಿಗೆ ಬಂದಂತೆ ಬೈದ ವೈದ್ಯೆ; ವಿವಾದ ಆಗುತ್ತಿದ್ದಂತೆ ‘ನನಗೆ ಅವರೆಂದರೆ ತುಂಬ ಪ್ರೀತಿ’ ಎಂದರು…

    ಕ್ಯಾಚರ್​ ಜಿಲ್ಲೆಯ ಜಯ್​ಪುರದಲ್ಲಿ ತಜಿಂ ಉದ್ದಿನ್​ ಲಸ್ಕರ್​ ಹಾಗೂ ಆತನ ಮೂರು ಹೆಣ್ಣುಮಕ್ಕಳು, ಮೂವರು ಗಂಡು ಮಕ್ಕಳು ಮಣ್ಣಿನೊಳಗೆ ಜೀವಂತ ಸಮಾಧಿಯಾಗಿದ್ದಾರೆ. ಅವರ ಮನೆ ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಸ್ಕರ್​ ಅವರ ಪತ್ನಿ ಹಾಗೂ ಇನ್ನೊಂದು ಪುತ್ರನನ್ನು ಪೊಲೀಸರು ರಕ್ಷಣೆ ಮಾಡಿ, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೈಲ್​ಕಂಡಿಯಲ್ಲಿ ನಾಲ್ವರು ಮಹಿಳೆಯರು, ಒಂದು ಮಗು ಸೇರಿ ಒಟ್ಟು ಏಳು ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದು, ಕರೀಂಗಂಜ್​​ನಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.
    ಅಸ್ಸಾಂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ಮೃತದೇಹಗಳನ್ನು ಮಣ್ಣಿನಿಂದ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಾಗೇ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಜಿಲ್ಲೆಯಲ್ಲಿ ಕರೊನಾ ಹೆಚ್ಚುವ ಆತಂಕ; ಹೊರರಾಜ್ಯ, ಜಿಲ್ಲೆಗಳಿಂದ ಸೋಂಕು ಹರಡುವ ಭೀತಿ

    ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಮೃತಪಟ್ಟವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬದವರಿಗೆ ಅಗತ್ಯ ಹಣಕಾಸಿನ ನೆರವು ನೀಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts