More

    ತಬ್ಲಿಘಿಗಳಿಗೆ ಬಾಯಿಗೆ ಬಂದಂತೆ ಬೈದ ವೈದ್ಯೆ; ವಿವಾದ ಆಗುತ್ತಿದ್ದಂತೆ ‘ನನಗೆ ಅವರೆಂದರೆ ತುಂಬ ಪ್ರೀತಿ’ ಎಂದರು…

    ಕಾನ್ಪುರ: ಉತ್ತರ ಪ್ರದೇಶದ ಉನ್ನತ ವೈದ್ಯೆಯೋರ್ವರು ಎರಡು ತಿಂಗಳ ಹಿಂದೆ ಆಡಿದ ಮಾತುಗಳ ವಿಡಿಯೋ ಇದೀಗ ವೈರಲ್ ಆಗಿ, ವಿವಾದ ಸೃಷ್ಟಿಸಿದೆ.

    ಕಾನ್ಪುರದ ಪ್ರಮುಖ ಸರ್ಕಾರಿ ಆಸ್ಪತ್ರೆ ವೈದ್ಯೆ , ಗಣೇಶ ಶಂಕರ ವಿದ್ಯಾರ್ಥಿ ಮೆಡಿಕಲ್​ ಕಾಲೇಜಿನ ಪ್ರಿನ್ಸಿಪಲ್​ ಆಗಿರುವ ಆರತಿ ಲಾಲ್​ಚಾಂದನಿ ಅವರು ಕಳೆದ ಎರಡು ತಿಂಗಳ ಹಿಂದೆ ಮಾಧ್ಯಮವೊಂದರ ಎದುರು ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡ ಮುಸ್ಲಿಂ ಸಮುದಾಯದವರ ವಿರುದ್ಧ ಕಿಡಿಕಾರಿದ, ಬಾಯಿಗೆ ಬಂದಂತೆ ಬೈದ ವಿಡಿಯೋ ಇದಾಗಿದೆ.

    ಇದನ್ನೂ ಓದಿ: ಕರೊನಾ ಬಗ್ಗೆ ಇಟಲಿ ವೈದ್ಯ ಆಡಿದ ಮಾತಿಗೆ ಭರ್ಜರಿ ವಿರೋಧ; ಸೀನ್​ ಕ್ರಿಯೇಟ್​ ಮಾಡ್ಬೇಡಿ ಎಂದ ಡಬ್ಲ್ಯೂಎಚ್​ಒ

    ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ತಬ್ಲಿಘಿ ಜಮಾತ್​ ಸಂಘಟನೆ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಂದ ದೇಶದಲ್ಲಿ ಏನೇನಲ್ಲ ಅವಾಂತರವಾಯಿತು ಎಂಬುದು ಹಳೇ ವಿಚಾರ. ಅದೆಷ್ಟೋ ಸೋಂಕಿತರು ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್​ಗಳು, ಆರೋಗ್ಯ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದು ವರದಿಯಾಗಿದೆ.
    ಕಾನ್ಪುರದ ಈ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಬ್ಲಿಘಿಗಳೂ ಕೂಡ ಅಸಹ್ಯವಾಗಿ ವರ್ತಿಸಿದ್ದ ಬಗ್ಗೆ ಸುದ್ದಿಯಾಗಿತ್ತು. ಚಿಕಿತ್ಸೆ ನೀಡಲು ಸಹಕರಿಸದೆ, ವೈದ್ಯರು, ನರ್ಸ್​​ಗಳ ಮೇಲೆ ಉಗುಳುತ್ತಿದ್ದಾರೆ ಎನ್ನಲಾಗಿತ್ತು. ಅದೇ ಸಮಯದಲ್ಲಿ ಆರತಿಯವರು ಮಾತನಾಡಿದ ವಿಡಿಯೋ ಇದು ಎಂದು ಹೇಳಲಾಗಿದೆ.

    ತಬ್ಲಿಘಿ ಜಮಾತ್​ನ ಸದಸ್ಯರನ್ನು ಎಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಅವರೆಲ್ಲ ಉಗ್ರರು. ನಾವು ಆಸ್ಪತ್ರೆಯಲ್ಲಿ ಉಗ್ರರಿಗೆ ವಿಐಪಿ ಚಿಕಿತ್ಸೆ ನೀಡುತ್ತಿದ್ದೇವೆ. ಅವರಿಂದಾಗಿ ಅದೆಷ್ಟೋ ವೈದ್ಯರು ಕ್ವಾರಂಟೈನ್​ ಆಗುವಂತಾಯಿತು. ಇಂಥ ಜನರನ್ನ ಆಸ್ಪತ್ರೆಗಳಿಗೆ ದಾಖಲು ಮಾಡಿಸಿ, ಯೋಗಿ ಆದಿತ್ಯನಾಥ್​ ಅವರು ಒಲೈಕೆ ನೀತಿ ಅನುಸರಿಸುತ್ತಿದ್ದಾರೆ. ಆದರೆ ಈ ತಬ್ಲಿಘಿಗಳನ್ನು ಜೈಲಿಗೆ ಹಾಕಬೇಕು ಎಂದು ಆರತಿ ಅವರು ಹೇಳುವುದನ್ನು ಐದು ನಿಮಿಷಗಳ ವಿಡಿಯೋದಲ್ಲಿ ಕೇಳಬಹುದು.

    ಇದನ್ನೂ ಓದಿ: ಇಬ್ಬರು ಪಾಕ್​ ಗೂಢಾಚಾರಿಗಳನ್ನು ಹೊರದಬ್ಬಿದ ಭಾರತ: ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ

    ಹಾಗೇ, ತಬ್ಲಿಘಿ ಜಮಾತ್​ನಲ್ಲಿ ಭಾಗವಹಿಸಿ ವಾಪಸ್​ ಬಂದು ಇಡೀ ದೇಶದಲ್ಲಿ ಸೋಂಕು ಹಬ್ಬಿಸುತ್ತಿರುವ ಇವರನ್ನೆಲ್ಲ ಕಾಡಿಗೆ ಕಳಿಸಬೇಕು. ಇಲ್ಲವೇ ಕತ್ತಲ ಕೋಣೆಯಲ್ಲಿ ಕೂಡಿ ಹಾಕಬೇಕು. 30 ಕೋಟಿ ಜನ ಇರುವ ಇವರಿಂದಾಗಿ 100 ಕೋಟಿ ಜನರು ಕಷ್ಟಪಡುವಂತಾಗಿದೆ ಎಂದು ಇಡೀ ಮುಸ್ಲಿಂ ಸಮುದಾದಯದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ಡಾ. ಲಾಲ್​ಚಾಂದನಿ ಅವರು ಉಲ್ಟಾ ಹೊಡೆದಿದ್ದಾರೆ. ಮೀಡಿಯಾದವರು ನನ್ನ ವಿಡಿಯೋವನ್ನು ತಿರುಚಿದ್ದಾರೆ ಎಂದು ಹೇಳಿದ್ದಾರೆ.

    ನಾನು ಆ ಸಮಯದಲ್ಲಿ ತುಂಬ ಒತ್ತಡದಲ್ಲಿದ್ದೆ. ಆಗ ನನ್ನ ಬಳಿ ಹೇಳಿಕೆ ಪಡೆಯಲಾಗಿದೆ. ಆದರೆ ಈ ರೆಕಾರ್ಡಿಂಗ್​​ನ್ನು ತಿರುಚಿ ವೈರಲ್​ ಮಾಡಲಾಗಿದೆ. ಕೆಲವರು ಇಲ್ಲಿನ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
    ನಾನು ಯಾವುದೇ ಸಮುದಾಯದ ಹೆಸರನ್ನು ಅಂದು ಉಲ್ಲೇಖಿಸಿಲ್ಲ. ಅದರಲ್ಲೂ ಆ ಸಮುದಾಯವನ್ನು ನಾನು ವಿಶೇಷವಾಗಿ ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO: ದೈಹಿಕವಾಗಿ ಬಳಸಿಕೊಂಡು, ಮದುವೆಯಾಗಲ್ಲ ಎಂದ ಪ್ರಿಯಕರ; ಸೆಲ್ಫಿ ವಿಡಿಯೋ ಮಾಡಿ ನಟಿ ಆತ್ಮಹತ್ಯೆ

    ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಕಿಡಿ ಕಾರಿದ್ದಾರೆ. ಕಾನ್ಪುರದ ಹೋರಾಟಗಾರ್ತಿ, ಮಾಜಿ ಸಂಸದೆ ಸುಭಾಷಿಣಿ ಅಲಿ ಅವರು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಡಿಯೋ ಬಗ್ಗೆ ತನಿಖೆ ಆಗಬೇಕು. ವೈದ್ಯೆ ಹೀಗೆ ಮಾತನಾಡಿದ್ದೇ ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಒಮ್ಮೆ ತಿರುಚಲಾಗಿದ್ದರೆ ಹಾಗೆ ಮಾಡಿದವರ ವಿರುದ್ಧ ಕ್ರಮ ವಹಿಸಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts