More

    ಅಂಫಾನ್ ಚಂಡಮಾರುತಕ್ಕೆ 12 ಬಲಿ: ಕರೊನಾಗಿಂತ ಭೀಕರ ಎಂದ ಸಿಎಂ ಮಮತಾ ಬ್ಯಾನರ್ಜಿ

    ಕೊಲ್ಕತಾ: ಬಂಗಾಳ ಕೊಲ್ಲಿಯಲ್ಲಿ ರೌದ್ರಾವಾತಾರ ತಾಳಿರುವ ವರ್ಷದ ಅತ್ಯಂತ ಕೆಟ್ಟ ಚಂಡಮಾರುತ ಅಂಫಾನ್​​ಗೆ ಈಗಾಗಲೇ ಪಶ್ಚಿಮ ಬಂಗಾಳದ 12 ಮಂದಿ ಬಲಿಯಾಗಿದ್ದಾರೆಂದು ಬುಧವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?

    ಪ್ರಬಲವಾದ ಸೈಕ್ಲೋನ್​ ಸಾವಿರಾರು ಮನೆಗಳನ್ನು ನೆಲಸಮ ಮಾಡಿದ್ದು, ಕರೊನಾ ವೈರಸ್​ ಬಿಕ್ಕಟ್ಟಿನ ನಡುವೆ ಪಶ್ಚಿಮ ಬಂಗಾಳ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡುವಂತಾಗಿದೆ. ಗಂಟೆಗೆ 185 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಅಂಫಾನ್​ನ ಪ್ರಭಾವ ಕರೊನಾ ವೈರಸ್​ಗಿಂತಲೂ ತುಂಬಾ ಕೆಟ್ಟದ್ದಾಗಿದ್ದು, 1 ಲಕ್ಷ ಕೋಟಿ ರೂ. ಹಾನಿ ಮಾಡಿದೆ ಎಂದು ಮಮತಾ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಾಗೂ ಒಡಿಶಾದಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಜನರು ಆಶ್ರಯ ತಾಣದಲ್ಲಿದ್ದಾರೆ. ಪಶ್ಚಿಮ ಬಂಗಾಳ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ತೀವ್ರ ಹೊಡೆತಕ್ಕೆ ಸಿಲುಕಿವೆ. ಹಲವು ವರ್ಷಗಳ ಬಳಿಕ ಎದುರಾದ ಅತ್ಯಂತ ಕೆಟ್ಟ ಚಂಡಮಾರುತ ಇದಾಗಿದೆ.

    ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಲಾಕ್​ಡೌನ್​: ಕರೊನಾ ಕುರಿತು ಮತ್ತೊಂದು ಶಾಕಿಂಗ್​ ವರದಿ ನೀಡಿದ ಚೀನಾ ವೈದ್ಯರು!

    ಚಂಡಮಾರುತದ ರಭಸಕ್ಕೆ ಪಶ್ಚಿಮ ಬಂಗಾಳದಲ್ಲಿ ಕಾರುಗಳು ತರಗೆಲೆಗಳಂತೆ ಉರುಳಿ ಬೀಳುತ್ತಿವೆ. ವಿದ್ಯುತ್​ ಕಂಬಗಳು ಧರೆಗುರುಳುತ್ತಿವೆ. ಅನೇಕ ಏರಿಯಾಗಳಲ್ಲಿ ವಿದ್ಯುತ್​ ಇಲ್ಲದೇ ಕತ್ತಲೆ ಕವಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಮರಗಳು ಬೇರು ಸಮೇತ ಧರೆಗೆ ಉರುಳುತ್ತಿವೆ. ನಿನ್ನೆ ರಾತ್ರಿ ಕೊಲ್ಕತಾ ಸೇರಿದಂತೆ ಅನೇಕ ಜಿಲ್ಲೆಗಳು ವಿದ್ಯುತ್​ ಸಮಸ್ಯೆಯನ್ನು ಎದುರಿಸಿದವು.

    ಕರೊನಾ ಸಮಯದಲ್ಲಿ ಚಂಡಮಾರುತ ಎಬ್ಬಿರುವುದು ನಮಗೆ ಎರಡು ಸವಾಲುಗಳಾಗಿವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮುಖ್ಯಸ್ಥ ಎಸ್​.ಎನ್​. ಪ್ರಧಾನ್​ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ಗೌನ್ ತೊಟ್ಟ ನರ್ಸ್​…!

    ಕೊಲ್ಕತಾದಲ್ಲಿ ಅಂಫಾನ್​ ಚಂಡಮಾರುತ ರಭಸಕ್ಕೆ ನೆಲಕಚ್ಚಿದ ಶೆಡ್

    ಕೊಲ್ಕತಾದಲ್ಲಿ ಅಂಫಾನ್​ ಚಂಡಮಾರುತ ರಭಸಕ್ಕೆ ನೆಲಕಚ್ಚಿದ ಶೆಡ್​.#Cyclone #Amphan #AmphanCyclone #BayofBengal #WestBengal

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮೇ 20, 2020

    ಅನಾಹುತ ತಗ್ಗಿಸಿದ ಮುಂಜಾಗ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts