More

    ಅನಾಹುತ ತಗ್ಗಿಸಿದ ಮುಂಜಾಗ್ರತೆ

    ಕೋಲ್ಕತ: ಕರೊನಾ ವೈರಸ್ ಆರ್ಭಟದ ನಡುವೆಯೇ ಬುಧವಾರ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿದ ಅಂಫಾನ್ ಚಂಡಮಾರುತದಿಂದ ಉಂಟಾಗಬಹುದಿದ್ದ ಅಪಾರ ಜೀವಹಾನಿ ತಡೆಯುವಲ್ಲಿ ಭಾರತ ಯಶಸ್ವಿಯಾಯಿತಾದರೂ ಎರಡೂ ರಾಜ್ಯಗಳಲ್ಲಿ ಭಾರಿ ಪ್ರಮಾಣದ ನಷ್ಟವಾಗಿದೆ.

    ಗಂಟೆಗೆ 160-170 ಕಿ.ಮೀ ವೇಗದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಭೂಭಾಗಕ್ಕೆ ಬಂದ ಮಾರುತ ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ನಡುವೆ ಸುಂದರ್​ಬನ್ಸ್ ಮೂಲಕ ಹಾದುಹೋಗಿದೆ. ಮೊದಲಿಗೆ ಬಾಂಗ್ಲಾದಲ್ಲಿ ಅಬ್ಬರಿಸಿದ ಅಂಫಾನ್ ಕರಾವಳಿ ಪ್ರದೇಶದಲ್ಲಿದ್ದ ಜನರನ್ನು ಸ್ಥಳಾಂತರ ಮಾಡುತ್ತಿದ್ದ ರೆಡ್ ಕ್ರೆಸೆಂಟ್​ನ ಸ್ವಯಂಸೇವಕನನ್ನು ಬಲಿ ತೆಗೆದುಕೊಂಡಿತು.

    ಇತ್ತ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಸಂಬಂಧಿ ಅವಘಡಗಳಿಗೆ ಕನಿಷ್ಠ ಹತ್ತು ಜನ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮರದ ಕೊಂಬೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇದನ್ನೂ ಓದಿ   ಉತ್ತರ ಪ್ರದೇಶ ಸರ್ಕಾರದಿಂದ 15 ಕೋಟಿ ರೂಪಾಯಿ ಮೊತ್ತದ ಮೊದಲ ಕಂತು ಬಿಡುಗಡೆ

    ಸೂಪರ್ ಸೈಕ್ಲೋನ್

    ಅಂಫಾನ್ ಚಂಡಮಾರುತ ಬಂಗಾಳ ಕೊಲ್ಲಿಯ 20 ವರ್ಷಗಳ ಇತಿಹಾಸದಲ್ಲಿ ಕಂಡು ಬಂದ ಅತ್ಯಂತ ತೀವ್ರ ಸೂಪರ್ ಸೈಕ್ಲೋನ್ ಆಗಿದೆ. ಈ ಚಂಡಮಾರುತವು ಮೂರನೇ ವರ್ಗದಲ್ಲಿದೆ (ಚಂಡಮಾರುತದ ಗಾಳಿಯ ಪ್ರಮಾಣವನ್ನಾಧರಿಸಿ ನಾಸಾ ತಯಾರಿಸಿರುವ ಸಫಿರ್ ಸಿಂಪ್ಸನ್ ಪ್ರಮಾಣದಲ್ಲಿ ಮೂರನೇ ಸ್ಥಾನ). ಚಂಡಮಾರುತದಿಂದಾಗಿ ಅಲೆಗಳ ಎತ್ತರ 5 ಮೀಟರ್​ನಷ್ಟು ಹೆಚ್ಚಿತ್ತು. ಕರಾವಳಿ ಪ್ರದೇಶದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಆರಂಭದಲ್ಲಿ 200ಕಿ.ಮೀ.ಗಿಂತ ವೇಗದಲ್ಲಿ ಚಲಿಸುತ್ತಿದ್ದ ಮಾರುತ ವೇಗ ಭೂ ಭಾಗದಲ್ಲಿ ಕಡಿಮೆಯಾಗಿದೆ.

    ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts