More

    ಉತ್ತರ ಪ್ರದೇಶ ಸರ್ಕಾರದಿಂದ 15 ಕೋಟಿ ರೂಪಾಯಿ ಮೊತ್ತದ ಮೊದಲ ಕಂತು ಬಿಡುಗಡೆ

    ಲಕ್ನೋ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಮಸ್ಯೆಯಲ್ಲಿ ಸಿಲುಕಿರುವ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ 15 ಕೋಟಿ ರೂ. ಆರಂಭಿಕ ಕಂತನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್​ಗೆ ಪಾವತಿಸಿದರು.

    ಲಾಕ್​ಡೌನ್​ ನಂತರ ಸಣ್ಣ ಕೈಗಾರಿಕೆಗಳು ಆರಂಭವಾಗಲು ಆರ್ಥಿಕ ತೊಂದರೆ ಎದುರಾಗಿದೆ. ತೊಂದರೆ ನಿವಾರಣೆಗೆ ಈ ಹಣ ಬಳಸಿಕೊಂಡು ಸಣ್ಣ ಕೈಗಾರಿಕೆಗಳನ್ನು ಆರಂಭಿಸಬಹುದು ಎಂದು ಅವರು ಹೇಳಿದರು.

    ಇದನ್ನೂ ಓದಿ  ಭಾರತ, ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಿದ ಅಂಫಾನ್ ಚಂಡಮಾರುತ: ಭಾರಿ ಮಳೆ, ಗಾಳಿ

    ಉದ್ಯೋಗ ಸೃಷ್ಟಿಗಾಗಿ ರಾಜ್ಯ ಸರ್ಕಾರ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್​ ಜತೆ ಒಪ್ಪಂದ ಮಾಡಿಕೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್​ಗೆ ಮೊದಲ ಕಂತಿನ ಹಣ ಪಾವತಿ ಮಾಡಲಾಗಿದೆ ಎಂದರು.

    ಲಾಕ್​ಡೌನ್​ ನಂತರ ಅಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ಆಗಮಿಸಿದ್ದಾರೆ. ವಲಸೆ ಕಾರ್ಮಿಕರ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ಕಲ್ಪಿಸಲು ಸರ್ಕಾರ ಚಿಂತಿಸುತ್ತಿದೆ.

    ಇದನ್ನೂ ಓದಿ   Fact Check| ಆರು ವರ್ಷದ ಹಳೆಯ ಫೋಟೋ ಲಾಕ್​ಡೌನ್​ ಸಮಯದಲ್ಲಿ ಸಂಚಲನ ಸೃಷ್ಟಿಸಿತು!

    ಸಣ್ಣ ಕೈಗಾರಿಕೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್​ ಜತೆ ರಾಜ್ಯ ಸರ್ಕಾರ ಕೂಡ ಪ್ಯಾಕೇಜ್​ ನೀಡುತ್ತಿದೆ. ಎರಡು ಪ್ಯಾಕೇಜ್​ಗಳನ್ನು ಸಣ್ಣ ಕೈಗಾರಿಕೋದ್ಯಮಿಗಳಿಗೆ ತಲುಪಿಸಲು ಸಾಲ ಮೇಳ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್​ ಜತೆ ಮಾಡಿಕೊಂಡಿರುವ ಒಪ್ಪಂದದಿಂದ ಸ್ಟಾರ್ಟ್​ಅಪ್​ಗಳ ವೇಗ ಅಧಿಕಗೊಳ್ಳುತ್ತದೆ ಎಂದು ಇದೇ ವೇಳೆ ಉಪ ಮುಖ್ಯಮಂತ್ರಿ ದಿನೇಶ್​ಶರ್ಮಾ ಹೇಳಿದರು.
    ಈ ಒಪ್ಪಂದ ಹೆಚ್ಚು ಮಂದಿ ಯುವಕರಿಗೆ ಉದ್ಯೋಗ ಒದಗಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಅಪ್ಪನ ಕಾರಿಗೇ ಸಿಕ್ಕಿ ಪ್ರಾಣ ಬಿಟ್ಟ ಒಂದು ವರ್ಷದ ಮಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts