More

    ಅಕ್ರಮ ಹಣ ವರ್ಗಾವಣೆ; ಸಂಸದ ಕಾರ್ತಿ ಚಿದಂಬರಂಗೆ ಸೇರಿದ ಆಸ್ತಿ ಮುಟ್ಟುಗೋಲು

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂಗೆ ಸೇರಿದ 11.04 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ED) ಮುಟ್ಟುಗೋಲು ಹಾಕಿದೆ.

    INX ಮೀಡಿಯಾಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

    ಸ್ಥಿರಾಸ್ತಿ ಮುಟ್ಟುಗೋಲು

    ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳ ಪೈಕಿ ಕರ್ನಾಟಕ ಕೊಡಗಿನಲ್ಲಿ ಇರುವ ಸ್ಥಿರಾಸ್ತಿ ಸೇರಿದಂತೆ ಒಟ್ಟು 4 ಕಡೆ ಮುಟ್ಟುಗೋಲು ಹಾಕಲಾಗಿದೆ.

    ಇದನ್ನೂ ಓದಿ: ಲಿಂಗಾಯತ ಸಮಾಜ ಒಡೆಯಲು ಹೊರಟವರಿಗೆ ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ: ಸಿಎಂ ಬೊಮ್ಮಾಯಿ ವಾಗ್ದಾಳಿ

    ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ(ED) PMLA(ಅಕ್ರಮ ಹಣ ವರ್ಗಾವಣೆ) ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.

    ಕಿಕ್​ಬ್ಯಾಕ್​ ಆರೋಪ

    ಕಾಂಗ್ರೆಸ್​ ನೇತೃತ್ವದ UPA ನೇತೃತ್ವದ ಸರ್ಕಾರದಲ್ಲಿ ನಡೆದಿದೆ ಎನ್ನಲಾದ INX ಮೀಡಿಯಾ ಹಗರಣವು ಮಾಧ್ಯಮ ಸಂಸ್ಥೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡುವಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾಗಿದೆ.

    ಈ ವೇಳೆ ಕೇಂದ್ರ ವಿತ್ತ ಸಚಿವರಾಗಿದ್ದ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂಗೆ ವ್ಯಾಪಕ ಕಿಕ್​ಬ್ಯಾಕ್​ ಪಡೆದಿದ್ಧಾರೆ ಎಂಬ ಆರೋಪ ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts