More

    ಡ್ರೈನೇಜ್ ವಿಚಾರಕ್ಕೆ ಮಾರಕಾಯುಧಗಳಿಂದ ಹಲ್ಲೆ

    ಮೂಡುಬಿದಿರೆ: ಡ್ರೈನೇಜ್ ವಿಚಾರಕ್ಕೆ ಸಂಬಂಧಿಸಿ ಬಾರ್ ಮಾಲೀಕನೊಬ್ಬ ವ್ಯಕ್ತಿಯೊಬ್ಬನಿಗೆ ಮಾರಕಾಯುಧಗಳಿಂದ ಗುರುವಾರ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಕಾಲೇಜು ಬಳಿ ಬಾರ್ ಹೊಂದಿರುವ ಮನೋಜ್ ಹೆಗ್ಡೆ ಎಂಬಾತ ನಾರಾಯಣ ಪೂಜಾರಿ ಎಂಬುವರ ತಲೆಗೆ ಹಲ್ಲೆ ನಡೆಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋಜ್ ನಡೆಸುತ್ತಿದ್ದ ಬಾರ್‌ನಿಂದ ನೀರು ಹೊರಬಿಡಲಾಗುತ್ತಿದ್ದ ಡ್ರೈನೇಜ್ ಪಕ್ಕದಲ್ಲೇ ಇದ್ದ ನಾರಾಯಣ ಪೂಜಾರಿಯವರ ಮನೆಯ ಬಳಿಯೇ ಹರಿದು ಹೋಗುತ್ತಿದ್ದು, ಸುತ್ತಲೂ ದುರ್ವಾಸನೆ ಬೀರುತ್ತಿತ್ತು. ಈ ಕುರಿತು ಪುರಸಭೆಗೆ ದೂರು ನೀಡಲಾಗಿದ್ದು, ಅಧಿಕಾರಿಗಳು ಡ್ರೈನೇಜ್ ಸೂಕ್ತ ನಿರ್ವಹಣೆಗೆ ಸೂಚಿಸಿದ್ದರು.

    ಅಧಿಕಾರಿಗಳ ಸೂಚನೆ ನಡುವೆಯೂ ಮತ್ತೊಮ್ಮೆ ಬಾರ್‌ನಿಂದ ಡ್ರೈನೇಜ್ ನೀರು ಅಸಮರ್ಪಕ ರೀತಿಯಲ್ಲಿ ಹರಿಯಬಿಡಲಾಗಿತ್ತು. ಈ ಬಗ್ಗೆ ನಾರಾಯಣ ಪೂಜಾರಿ, ಮನೋಜ್ ಬಳಿ ವಿಚಾರಿಸಿದಾಗ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts