More

  ಬೆಂಗಳೂರಿನಲ್ಲಿ ಮತ್ತೆ ಪುಡಿರೌಡಿಯ ಪುಂಡಾಟ; ಕಾಂಡಿಮೆಂಟ್ಸ್ ಸ್ಟೋರ್​ ನಡೆಸುತ್ತಿದ್ದಾತನ ಮೇಲೆ ಹಲ್ಲೆ

  ಬೆಂಗಳೂರು: ಗೃಹಸಚಿವರ ಕಠಿಣ ಕ್ರಮದ ಎಚ್ಚರಿಕೆಯ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಪುಡಿರೌಡಿಯ ಪುಂಡಾಟ ಮುಂದುವರಿದಿದ್ದು, ಸಣ್ಣಪುಟ್ಟ ಬೇಕರಿ-ಕಾಂಡಿಮೆಂಟ್ಸ್​-ಹೋಟೆಲ್​ಗಳನ್ನು ನಡೆಸುವವರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

  ಕೆಲವು ದಿನಗಳ ಹಿಂದಷ್ಟೇ ಬೇಕರಿಯೊಂದರ ಮಾಲೀಕರ ಮೇಲೆ ಹಲ್ಲೆ ನಡೆದಿದ್ದು, ಇದೀಗ ಕಾಂಡಿಮೆಂಟ್ಸ್​ ಸ್ಟೋರ್ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆದಿದೆ. ಯಲಹಂಕ ನ್ಯೂಟೌನ್​ನ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್​​ನಲ್ಲಿ ಈ ಘಟನೆ ನಡೆದಿದೆ. ಯಲಹಂಕ ನ್ಯೂಟೌನ್​ ನಿವಾಸಿ ಗಣೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ.

  ಇದನ್ನೂ ಓದಿ:ಮತ್ತೆ ಮತ್ತೆ ಪತ್ತೆಯಾಗುತ್ತಿವೆ ಅಪರಿಚಿತ ಮಹಿಳೆಯರ ಶವ!; ಕಾಂಗ್ರೆಸ್​ ಕಾರ್ಯಕರ್ತೆಯರಿಂದ ಡಿಜಿಗೆ ದೂರು 

  ದಿನೇಶ್ ಎಂಬುವವರು ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್​ ಸ್ಟೋರ್ ನಡೆಸುತ್ತಿದ್ದು, ಸಿಗರೇಟ್ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಮಾ. 14ರಂದು ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಗಣೇಶ್​ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

  ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts