More

    ಏಷ್ಯನ್​ ಗೇಮ್ಸ್​ನಲ್ಲಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ದೊರೆತ ಬಹುಮಾನವೆಷ್ಟು? ಇಲ್ಲಿದೆ ಮಾಹಿತಿ…

    ಬೆಂಗಳೂರು: ಏಷ್ಯಾಡ್​ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಆತಿಥೇಯ ಚೀನಾದಿಂದ ಲಭಿಸುವುದು ಪದಕ ಮಾತ್ರ. ಆದರೆ ಕ್ರೀಡಾಪಟುಗಳು ತವರಿಗೆ ಮರಳಿದ ಬಳಿಕ ಕೇಂದ್ರ ಸರ್ಕಾರದಿಂದ ಚಿನ್ನ, ಬೆಳ್ಳಿ, ಕಂಚಿಗೆ ಕ್ರಮವಾಗಿ 30, 20, 10 ಲಕ್ಷ ರೂ. ಬಹುಮಾನ ಲಭಿಸಿದೆ. ಈ ಪೈಕಿ ಜೋಡಿ, ತಂಡ ವಿಭಾಗದಲ್ಲಿ ಪದಕ ಗೆದ್ದಿದ್ದರೆ, ಇಬ್ಬರಿಗೆ ಒಟ್ಟು ಒಂದೂವರೆ ಪಟ್ಟು ಅಧಿಕ, 2-4 ಸದಸ್ಯರಿದ್ದರೆ ಒಟ್ಟು 2 ಪಟ್ಟು, 5-10 ಸದಸ್ಯರಿದ್ದರೆ ಒಟ್ಟು 3 ಪಟ್ಟು ಮತ್ತು 10ಕ್ಕಿಂತ ಹೆಚ್ಚು ಸದಸ್ಯರಿದ್ದರೆ 5 ಪಟ್ಟು ಬಹುಮಾನ ನೀಡಲಾಗುತ್ತದೆ. ಆದರೆ ಈ ಪೈಕಿ 15 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕ್ರೀಡಾಪಟುಗಳಿಗೆ ಕೇಂದ್ರ ಸಚಿವಾಲಯ ಈ ಬಾರಿ ತುಸು ಹೆಚ್ಚುವರಿಯಾಗಿ ತಲಾ 15 ಲಕ್ಷ ರೂ.ನಂತೆ ಬಹುಮಾನ ನೀಡುತ್ತಿದೆ.

    ಇನ್ನು ಆಯಾ ಕ್ರೀಡಾಪಟುಗಳಿಗೆ ತವರು ರಾಜ್ಯ ಸರ್ಕಾರದ ಕ್ರೀಡಾನೀತಿಯಂತೆ ಪ್ರತ್ಯೇಕವಾಗಿ ಬಹುಮಾನ ಸಿಗಲಿದೆ. ಉದಾಹರಣೆಗೆ ಕರ್ನಾಟಕ ಸರ್ಕಾರ ತನ್ನ 2018ರ ಕ್ರೀಡಾನೀತಿಯ ಅನ್ವಯ ಚಿನ್ನ, ಬೆಳ್ಳಿ, ಕಂಚು ವಿಜೇತರಿಗೆ ಕ್ರಮವಾಗಿ 25, 15, 8 ಲಕ್ಷ ರೂ. ನೀಡಲಿದ್ದರೆ, ಒಡಿಶಾ ಕೋಟಿ ಲೆಕ್ಕಾಚಾರದಲ್ಲಿ ಬಹುಮಾನ ನೀಡಲಿದೆ. ಕೆಲ ರಾಜ್ಯಗಳು ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗವನ್ನೂ ನೀಡಲಿದೆ. ಇನ್ನು ಆಯಾ ಕ್ರೀಡಾಪಟುಗಳ ಕ್ರೀಡಾ ಸಂಸ್ಥೆಗಳು ಮತ್ತು ಪ್ರಾಯೋಜಕರೂ ಪ್ರತ್ಯೇಕವಾಗಿ ಬಹುಮಾನ ನೀಡುತ್ತಿದ್ದಾರೆ.

    258 ಭಾರತೀಯರಿಗೆ ಪದಕ ಸಂಭ್ರಮ: ಈ ಬಾರಿ ಭಾರತ 661 ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಏಷ್ಯಾಡ್​ಗೆ ತೆರಳಿತ್ತು. ಈ ಪೈಕಿ 258 ಕ್ರೀಡಾಪಟುಗಳು ಪದಕದೊಂದಿಗೆ (ತಂಡಗಳ ಎಲ್ಲ ಸದಸ್ಯರು ಸೇರಿ) ಮರಳಿದ್ದಾರೆ. 32 ಕ್ರೀಡಾಪಟುಗಳು ಒಂದಕ್ಕಿಂತ ಹೆಚ್ಚು ಪದಕ ಗೆದ್ದುಕೊಂಡಿದ್ದಾರೆ. ಆರ್ಚರಿಯಲ್ಲಿ ಜ್ಯೋತಿ ಸುರೇಖಾ ಮತ್ತು ಓಜಸ್​ ದೇವತಾಲ್​ ತಲಾ 3 ಚಿನ್ನ ಗೆದ್ದುಕೊಂಡಿದ್ದರೆ, ಶೂಟಿಂಗ್​ನಲ್ಲಿ ಇಶಾ ಸಿಂಗ್​ (1 ಚಿನ್ನ, 3 ಬೆಳ್ಳಿ) ಮತ್ತು ಐಶ್ವರಿ ಪ್ರತಾಪ್​ ತೋಮರ್​ (2 ಚಿನ್ನ, 1 ಬೆಳ್ಳಿ, 1 ಕಂಚು) ತಲಾ 4 ಪದಕ ಗೆದ್ದುಕೊಂಡಿದ್ದಾರೆ. ಸ್ಕ್ವಾಷ್​ನಲ್ಲಿ ಹರಿಂದ್​ಪಾಲ್​ ಸಿಂಗ್​ 2 ಚಿನ್ನ ಗೆದ್ದಿದ್ದಾರೆ. ಕೂಟದಲ್ಲಿ ಭಾರತ ಗೆದ್ದ 28 ಚಿನ್ನದ ಪದಕಗಳನ್ನು 116 ಭಾರತೀಯರು (ತಂಡಗಳ ಸದಸ್ಯರು ಸೇರಿ) ಹಂಚಿಕೊಂಡಿದ್ದರೆ, 38 ಬೆಳ್ಳಿಯ ಗೌರವವನ್ನು 82 ಭಾರತೀಯರು ಮತ್ತು 41 ಕಂಚಿನ ಗರಿಯನ್ನು 87 ಭಾರತೀಯರು ಹಂಚಿಕೊಂಡಿದ್ದಾರೆ.

    ಉದ್ದೀಪನ ನಿಗ್ರಹ ನಿಯಮ ಉಲ್ಲಂಘಿಸಿದ ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್​ನಿಂದ ನಿಷೇಧದ ಭೀತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts