More

    ಉದ್ದೀಪನ ನಿಗ್ರಹ ನಿಯಮ ಉಲ್ಲಂಘಿಸಿದ ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್​ನಿಂದ ನಿಷೇಧದ ಭೀತಿ!

    ನವದೆಹಲಿ: ವಿಶ್ವ ಉದ್ದೀಪನ ನಿಗ್ರಹ ಘಟಕದ (ವಾಡಾ) ನಿಯಮಾವಳಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಕ್ರೀಡಾ ವಲಯ ಕಠಿಣ ಕ್ರಮ ಎದುರಿಸುವ ಭೀತಿಯಲ್ಲಿದೆ. ಅದರಲ್ಲೂ ಪ್ರಮುಖವಾಗಿ, ಪ್ರಸಕ್ತ ಭಾರತದಲ್ಲಿ ಏಕದಿನ ವಿಶ್ವಕಪ್​ನಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್​ ತಂಡ ಹೆಚ್ಚಿನ ಬಿಸಿ ಎದುರಿಸುವ ಅಪಾಯದಲ್ಲಿದೆ. ಒಂದು ವೇಳೆ ತಂಡ ವಿಶ್ವಕಪ್​ನಲ್ಲಿ ಮುಂದುವರಿದರೂ, ದಕ್ಷಿಣ ಆಫ್ರಿಕಾ ದೇಶದ ರಾಷ್ಟ್ರಧ್ವಜದ ಬಳಕೆ ನಿರ್ಬಂಧಿಸಲ್ಪಡಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರನ್​ಮಳೆ ಹರಿಸಿ ವಿಶ್ವಕಪ್​ನಲ್ಲಿ ಭರ್ಜರಿ ಆರಂಭ ಕಂಡಿರುವ ಹರಿಣಗಳಿಗೆ ಇದು ಆಘಾತಕಾರಿ ಬೆಳವಣಿಗೆಯಾಗಿದೆ.

    ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ದೀಪನ ಸಂಸ್ಥೆ (ನಾಡೋ), ವಾಡಾದ 2021ರ ನೀತಿಸಂಹಿತೆ ಉಲ್ಲಂಘಿಸಿದೆ ಎಂದು ವಾಡಾದ ಕಾರ್ಯಕಾರಿ ಸಮಿತಿ ತೀರ್ಮಾನಿಸಿದ್ದು, ಈ ಸಂಬಂಧ ತೆಗೆದುಕೊಳ್ಳುವ ಕ್ರಮದ ಬಗ್ಗೆ ಅಕ್ಟೋಬರ್​ 14ರಂದು ಅಂತಿಮ ತೀರ್ಪು ಪ್ರಕಟಿಸಲಿದೆ. ಆದರೆ ದಕ್ಷಿಣ ಆಫ್ರಿಕಾಕ್ಕೆ ತಕ್ಷಣವೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇದರಿಂದ ಅದು ನಿಷೇಧದ ಜಾರಿಯನ್ನು ಸ್ವಲ್ಪ ಸಮಯ ಮುಂದೂಡಬಹುದು ಮತ್ತು ಕ್ರಿಕೆಟ್​ ತಂಡಕ್ಕೆ ವಿಶ್ವಕಪ್​ ಅಭಿಯಾನ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬಹುದು.

    ಈಗಾಗಲೆ ರಷ್ಯಾಗೆ 2019ರಿಂದ ಒಲಿಂಪಿಕ್ಸ್​ ಸಹಿತ ಪ್ರಮುಖ ಕ್ರೀಡಾಕೂಟಗಳಿಂದ ನಿಷೇಧ ಹೇರಿರುವ ವಾಡಾ, ಇದೀಗ ದಕ್ಷಿಣ ಆಫ್ರಿಕಾದ ಜತೆಗೆ ಬಮುರ್ಡಾಗೂ ನಿಷೇಧ ಹೇರುವ ಸಿದ್ಧತೆಯಲ್ಲಿದೆ. ಈ ಹಿಂದೆ ವರ್ಣಭೇದಕ್ಕಾಗಿ ದಕ್ಷಿಣ ಆಫ್ರಿಕಾ 32 ವರ್ಷಗಳ ಕಾಲ ಒಲಿಂಪಿಕ್ಸ್​ನಿಂದ ನಿಷೇಧಕ್ಕೊಳಗಾಗಿತ್ತು. ಇದೇ ಕಾರಣಕ್ಕಾಗಿ ಐಸಿಸಿ ಕೂಡ 1970ರಿಂದ 1991ರವರೆಗೆ ಹರಿಣಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದಂತೆ ತಡೆದಿತ್ತು.

    ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಪಂದ್ಯದಲ್ಲಿ ಕೇಸರಿ ಜೆರ್ಸಿ ಧರಿಸುವುದೇ ಟೀಮ್ ಇಂಡಿಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts