More

    ಸಾಧಿಸುವ ಮನಸ್ಸಿಲ್ಲದಿದ್ದರೆ ಕೊರತೆಗಳೇ ನೆಪವಾಗುತ್ತವೆ: ಸಚಿವ ಅಶ್ವತ್ಥನಾರಾಯಣ ಅಭಿಮತ

     

    ಚನ್ನಪಟ್ಟಣ :  ಶಿಕ್ಷಣ ಎಂಬುದು ಬಹುದೊಡ್ಡ ಶಕ್ತಿ. ಕುಗ್ರಾಮವೊಂದರಲ್ಲಿ ಹುಟ್ಟಿ ಉನ್ನತ ಶಿಕ್ಷಣದೊಂದಿಗೆ ಇಂಜಿನಿಯರ್ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ವಾಡಿರುವ ಸಾಧಕ ಎಂ.ಎಲ್. ವಾದಯ್ಯ ಅವರ ಜೀವನ ಇದಕ್ಕೆ ಉದಾಹರಣೆ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

    ನಗರದ ಶತವಾನೋತ್ಸವ ಭವನದಲ್ಲಿ ಡಾ.ಎಂ.ಚನ್ನಕೇಶವ ಮತ್ತು ಸಹೋದರ ಕುಟುಂಬದ ವತಿಯಿಂದ ಶನಿವಾರ ಆಯೋಜಿಸಿದ್ದ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ಎಲ್.ವಾದಯ್ಯ ಅವರ ‘ಹಳ್ಳಿ ಹೈದನ ತಾಂತ್ರಿಕಗಾಥೆ ಜೀವನ ಸೌಧ’ ಕೃತಿ ಲೋಕಾರ್ಪಣೆಗೊಳಿಸಿ ವಾತನಾಡಿದರು.

    ಸಾಧಿಸುವ ಮನಸ್ಸು ಇಲ್ಲದವರಿಗೆ ಕೇವಲ ಕೊರತೆಗಳೇ ನೆಪವಾಗುತ್ತವೆ. ಛಲವಿದ್ದರೆ ಗುರಿ ಕಣ್ಣೆದುರೇ ಇರುತ್ತದೆ. ಶಿಕ್ಷಣ ಪಡೆಯುವುದಕ್ಕೆ ಸವಲತ್ತು ಪ್ರಮುಖವಲ್ಲ, ಆಸಕ್ತಿ ಬಹುಮುಖ್ಯ. ಜ್ಞಾನದಿಂದಲೇ ಸಾಧನೆ ವಾಡಲು ಸಾಧ್ಯ ಎಂದು ಕೊಂಡಾಡಿದರು.

    ಸಾಧನೆಗೆ ಭೇದವಿಲ್ಲ. ಉತ್ಸಾಹವಿರುವವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ತಾನು ಪಡೆದ ಶಿಕ್ಷಣದಿಂದ ಸಾವಾನ್ಯ ಹಳ್ಳಿ ಹುಡುಗನೊಬ್ಬ ಸಾಧನೆಯ ಶಿಖರವೇರಿ, ಆತ್ಮಕಥೆ ರಚಿಸಿರುವುದು ಸಂತಸದ ವಿಚಾರ ಎಂದರು.
    ಇತರರಿಗೆ ಸ್ಫೂರ್ತಿಯಾಗಲಿ: ಕೃತಿಯ ಕರ್ತ್ಯ ಎಂ.ಎಲ್. ವಾದಯ್ಯ ವಾತನಾಡಿ, ಸಾವಾನ್ಯ ರೈತ ಕುಟುಂಬದಿಂದ ಬಂದಿರುವ ನಾನು ವೃತ್ತಿ ಜೀವನದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ವಾಡಿದ್ದು, ಹಲವು ನೋವು, ನಲಿವುಗಳನ್ನು ಕಂಡಿದ್ದೇನೆ. ನನ್ನ ಈ ಕೃತಿ ಒಂದಷ್ಟು ಮಂದಿಗೆ ಸ್ಫೂರ್ತಿಯಾಗಲಿ ಎಂಬ ಉದ್ದೇಶದಿಂದ ರಚಿಸಿದ್ದೇನೆ. ಕರೊನಾ ಲಾಕ್‌ಡೌನ್ ಸಹ ಈ ಕೃತಿ ರಚನೆಗೆ ಕಾರಣವಾಯಿತು ಎಂದು ತಿಳಿಸಿದರು.

    ಅರ್ಚರಹಳ್ಳಿ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ವಾಜಿ ಸಚಿವ ನಾಗೇಶ್, ಕುವೆಂಪು ವಿವಿ ನಿವೃತ್ತ ಕುಲಪತಿ ಡಾ.ಚಿದಾನಂದಗೌಡ, ಶಿಕ್ಷಣ ತಜ್ಞ ನಾಡೋಜ ವೂಡೇ ಪಿ.ಕೃಷ,್ಣ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ. ಪುತ್ತೂರಾಯ, ನಿವೃತ್ತ ಪ್ರಾಂಶುಪಾಲ ಡಾ.ಕೂಡ್ಲೂರು ವೆಂಕಟಪ್ಪ, ವಾಗಡಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರ ಎಚ್.ಡಿ.ರಮೇಶ್, ಡಾ.ಎಂ.ಚನ್ನಕೇಶವ ಮತ್ತು ಸಹೋದರರು ಉಪಸ್ಥಿತರಿದ್ದರು.

     

    ಚರಿತ್ರೆ ಓದದವರು, ಚರಿತ್ರೆ ಸೃಷ್ಟಿಸಲು ಸಾಧ್ಯವಿಲ್ಲ : ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಾತನಾಡಿ, ಚರಿತ್ರೆ ಓದದವರು ಚರಿತ್ರೆ ಸೃಷ್ಟಿಸಲು ಸಾಧ್ಯವಿಲ್ಲ. ಸಾಧಕರ ಚರಿತ್ರೆಗಳು ಸಾಧಿಸುವ ಹಂಬಲವಿರುವವರಿಗೆ ಪ್ರೇರಣೆಯಾಗಲಿವೆ. ಹಲವು ಸಾಧಕರು ಅವರ ಆತ್ಮಚರಿತ್ರೆ ಬರೆದುಕೊಳ್ಳದೆ ಅಥವಾ ಬರೆಸಿಕೊಳ್ಳದೆ ಚರಿತ್ರೆಯಿಂದ ಮರೆಯಾಗಿದ್ದಾರೆ. ಈ ಕೆಲಸವಾಗಬಾರದು. ಮುಂದಿನ ಪೀಳಿಗೆಗೆ ಸಾಧಕರ ಪರಿಚಯ ಹಾಗೂ ಸ್ಫೂರ್ತಿ ಇರಬೇಕು ಎನ್ನುವುದಾದರೆ ಸಾಧಕರ ಆತ್ಮಚರಿತ್ರೆಗಳು ಹೆಚ್ಚಾಗಿ ಪ್ರಕಟಗೊಳ್ಳಬೇಕು ಎಂದರು.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts