More

    ನಿಮ್ಮ ಪಕ್ಷದವರು ನಿಮ್ಮನ್ನು ದಾರಿ ತಪ್ಪಿಸುತ್ತಿರಬಹುದು’: ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ ಗೆಹ್ಲೋಟ್​

    ಜೈಪುರ: ರಾಜಸ್ಥಾನ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದರಲ್ಲಿ ಕೇಂದ್ರ ಸಚಿವರ ಕೈವಾಡವೂ ಇದೆ ಎಂದು ಈಗಾಗಲೇ ಆರೋಪಿಸಿರುವ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

    ರಾಜಸ್ಥಾನದಲ್ಲಿ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿರುವ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ನಿಮ್ಮದೇ ಪಕ್ಷದ ನಾಯಕರು ಕುದುರೆ ವ್ಯಾಪಾರದಂಥ ತುಚ್ಛಮಟ್ಟದ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ಹಾಗೆ ಮಾಡುವುದು ಜನಾದೇಶವನ್ನು ಅವಮಾನಿಸದಂತೆ ಅಲ್ಲವೇ? ಇದೆಲ್ಲದರ ಬಗ್ಗೆ ನಿಮಗೆ ಎಷ್ಟರ ಮಟ್ಟಿಗೆ ತಿಳಿದಿದೆ ಅಥವಾ ನಿಮ್ಮನ್ನೇ ದಾರಿ ತಪ್ಪಿಸಲಾಗುತ್ತಿದೆಯಾ ಎಂಬುದು ನನಗೆ ಗೊತ್ತಿಲ್ಲ ಎಂದು ಅಶೋಕ್​ ಗೆಹ್ಲೋಟ್​ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬಿಮ್ಸ್​ನ ಐಸಿಯುನಲ್ಲಿ ಮೃತಪಟ್ಟ ಕರೊನಾ ರೋಗಿ; ಆಂಬುಲೆನ್ಸ್​ಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ ಸಂಬಂಧಿಕರು

    ಮಧ್ಯಪ್ರದೇಶ, ಕರ್ನಾಟಕದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಅಶೋಕ್ ಗೆಹ್ಲೋಟ್​, ಇಡೀ ರಾಷ್ಟ್ರ ಕೊವಿಡ್​-19 ವಿರುದ್ಧ ಹೋರಾಡುತ್ತಿದ್ದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಿಮ್ಮ ಪಕ್ಷದ ನಾಯಕರೇಕೆ ಇಂಥ ಕೆಲಸದಲ್ಲಿ ತೊಡಗಿದ್ದಾರೆ? ಗಜೇಂದ್ರ ಸಿಂಗ್​ ಶೇಖಾವತ್​ ಸೇರಿ ಮತ್ತು ಕೆಲವು ನಾಯಕರು ಸೇರಿಕೊಂಡು ರಾಜ್ಯದ ಕಾಂಗ್ರೆಸ್​ ಸರ್ಕಾರವನ್ನೇಕೆ ಅಸ್ಥಿರಗೊಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಸದ್ಯ ನಮ್ಮೆಲ್ಲರ ಆದ್ಯತೆ ಕರೊನಾ ನಿರ್ಮೂಲನೆಯಾಗಬೇಕೇ ಹೊರತು ಇಂಥ ಪಿತೂರಿಗಳಲ್ಲ ಎಂದೂ ಅವರು ಬರೆದಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದು ನಿಶ್ಚಿತ: ಟ್ರಸ್ಟ್​​ನಿಂದ​ ಅಧಿಕೃತ ಮಾಹಿತಿ

    ಇದೆಲ್ಲದರ ಬಗ್ಗೆ ನಿಮಗೆ ತಿಳಿದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇಂಥ ಕೃತ್ಯ ನಡೆಸುವವರನ್ನು ಎಂದಿಗೂ ಇತಿಹಾಸ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಅಮೆರಿಕ V/S ಮಹಾರಾಷ್ಟ್ರ: ‘ ನಾನು ಡೊನಾಲ್ಡ್​ ಟ್ರಂಪ್​ ಅಲ್ಲ…’ ಎಂದ ಸಿಎಂ ಉದ್ಧವ್​ ಠಾಕ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts