More

    ಬಿಮ್ಸ್​ನ ಐಸಿಯುನಲ್ಲಿ ಮೃತಪಟ್ಟ ಕರೊನಾ ರೋಗಿ; ಆಂಬುಲೆನ್ಸ್​ಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ ಸಂಬಂಧಿಕರು

    ಬೆಳಗಾವಿ: ಕರೊನಾ ಸೋಂಕಿತನೋರ್ವ ಐಸಿಯುನಲ್ಲೇ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರೆಲ್ಲ ಸೇರಿ ಆಂಬುಲೆನ್ಸ್​ಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀಮ್ಸ್​ ಆಸ್ಪತ್ರೆಯ ಕೊವಿಡ್​ ವಾರ್ಡ್​ ಬಳಿ ಘಟನೆ ನಡೆದಿದೆ.

    ಕರೊನಾ ಸೋಂಕಿತನನ್ನು ಅಥಣಿಯಿಂದ ಆಂಬುಲೆನ್ಸ್​ ಮೂಲಕ ಕರೆತರಲಾಗಿತ್ತು. ನಂತರ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಅಲ್ಲೇ ಮೃತಪಟ್ಟಿದ್ದಾರೆ.

    ಸೋಂಕಿತನ ಸಾವಿನ ಸುದ್ದಿ ಕೇಳುತ್ತಲೇ ಅವರ ಸಂಬಂಧಿಕರು ಆಸ್ಪತ್ರೆ ಎದುರು ಗಲಾಟೆ ಶುರು ಮಾಡಿದ್ದಾರೆ. ಅದನ್ನು ನೋಡಿದ ಆಂಬುಲೆನ್ಸ್ ಚಾಲಕ ಮತ್ತು ನರ್ಸ್​ಗಳು ಆಸ್ಪತ್ರೆಯೊಳಗೆ ಓಡಿ ಹೋಗಿದ್ದಾರೆ. ಉದ್ರಿಕ್ತ ಗುಂಪು ಐಸಿಯುನಲ್ಲಿದ್ದ ವೈದ್ಯರ ಮೇಲೆ ಹಲ್ಲೆ ಮಾಡಲೂ ಯತ್ನಿಸಿದೆ. ಇದನ್ನೂ ಓದಿ: ಕೊವಿಡ್​-19 ಸೋಂಕಿತ ಯುವತಿಯ ಮೇಲೆ ಒಂದೇ ರಾತ್ರಿಯಲ್ಲಿ 2 ಬಾರಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    ಪೊಲೀಸ್​ ವಾಹನ, ಸ್ಥಳದಲ್ಲಿದ್ದ ಕಾರುಗಳ ಗಾಜನ್ನೂ ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ವಾರ್ಡ್​ಗಳಿಗೂ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಆಂಬುಲೆನ್ಸ್​ಗೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಪೊಲೀಸರೇ ನಂದಿಸಿದ್ದು, ಗುಂಪನ್ನು ಚದುರಿಸಿದ್ದಾರೆ. ಸ್ಥಳಕ್ಕೆ ಡಿಸಿ ಎಂ. ಜಿ.ಹಿರೇಮಠ, ಎಸ್​ಪಿ ಲಕ್ಷ್ಮಣ್​ ನಿಂಬರಗಿ, ಪೊಲೀಸ್​ ಕಮಿಷನರ್​ ತ್ಯಾಗರಾಜ್​, ಜಿಲ್ಲಾ ಪಂಚಾಯಿತಿ ಸಿಇಒ ರಾಜೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. (ಏಜೆನ್ಸೀಸ್​)

    VIDEO| ಅಮಾವಾಸ್ಯೆ ದಿನದಂದೇ ಹೂತಿದ್ದ ಶವವನ್ನು ಹೊತ್ತೊಯ್ದ ದುಷ್ಕರ್ಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts