More

    ಅಮೆರಿಕ V/S ಮಹಾರಾಷ್ಟ್ರ: ‘ ನಾನು ಡೊನಾಲ್ಡ್​ ಟ್ರಂಪ್​ ಅಲ್ಲ…’ ಎಂದ ಸಿಎಂ ಉದ್ಧವ್​ ಠಾಕ್ರೆ

    ಮುಂಬೈ: ಅಮೆರಿಕದಲ್ಲಿ ಕರೊನಾ ಪ್ರಕರಣಗಳು ಮಿತಿಮೀರುತ್ತಿದೆ. ಅಲ್ಲಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ದೇಶದ ಕೊವಿಡ್​-19 ಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೇಳಿದ್ದಾರೆ.

    ಶಿವಸೇನೆಯ ಮುಖವಾಣಿ ಸಾಮ್ನಾಕ್ಕೆ ನೀಡಿದ ಸಂದರ್ಶನದ ಟೀಸರ್​ವೊಂದನ್ನು ಸಂಸದ ಹಾಗೂ ಸಾಮ್ನಾದ ಎಕ್ಸಿಕ್ಯೂಟಿವ್ ಎಡಿಟರ್​ ಸಂಜಯ್​ ರಾವತ್​ ಅವರು ಶೇರ್​ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಕರೊನಾ ಸೋಂಕು ದಿನೇದಿನೆ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಉದ್ಧವ್​ ಠಾಕ್ರೆ, ನಾನು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತದ್ದೇನೆ. ಟ್ರಂಪ್​ಗಿಂತ ವಿಭಿನ್ನವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ನಾನು ಟ್ರಂಪ್​ ಅಲ್ಲ. ನನ್ನ ರಾಜ್ಯದ ಜನರು ಕೊವಿಡ್​ನಿಂದ ನರಳುವುದನ್ನು ನೋಡಲು ನನಗೆ ಸಾಧ್ಯವಿಲ್ಲ. ಲಾಕ್​ಡೌನ್​ ಇನ್ನೂ ಜಾರಿಯಲ್ಲಿದೆ ಎಂದು ಠಾಕ್ರೆ ಮರಾಠಿಯಲ್ಲಿ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು. ಅವರ ಸಂದರ್ಶನ ವೀಕ್​ಎಂಡ್​ನಲ್ಲಿ ಎರಡು ದಿನ ಟೆಲಿಕಾಸ್ಟ್​ ಆಗಲಿದೆ. ಇದನ್ನೂ ಓದಿ: VIDEO: ‘ಬುಟ್ಟ ಬೊಮ್ಮಾ..ಬುಟ್ಟ ಬೊಮ್ಮಾ…’: ಏರ್​​ಪೋರ್ಟ್​ನಲ್ಲಿ ಇಂಡಿಗೋ ಸಿಬ್ಬಂದಿಯ ಭರ್ಜರಿ ಸ್ಟೆಪ್​

    ಜನರು ಕರೊನಾ, ಲಾಕ್​ಡೌನ್​ಗಳಿಂದ ಬೇಸತ್ತಿದ್ದಾರೆ. ಮುಂಬೈನ ಮಂದಿ ಇನ್ಯಾವಾಗ ವಡಾ ಪಾವ್​​ ತಿನ್ನಲು ಸಾಧ್ಯ ಎಂದು ಸಂಜಯ್​ ರಾವತ್​ ಪ್ರಶ್ನೆಯನ್ನೂ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಉದ್ಧವ್​ ಠಾಕ್ರೆಯವರು, ನಾವು ಒಂದಾದ ಮೇಲೆ ಮತ್ತೊಂದರಂತೆ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ದೇಶದಲ್ಲಿ ಮಹಾರಾಷ್ಟ್ರ ಬಹುದೊಡ್ಡ ಕರೊನಾ ಹಾಟ್​ಸ್ಫಾಟ್​ ಆಗಿದೆ. ಇಲ್ಲಿ 3, 27, 031 ಸೋಂಕಿತರು ಇದ್ದಾರೆ. 12,276 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಅಮೆರಿಕದಲ್ಲಿ 40,28,733 ಕರೊನಾ ಸೋಂಕಿತರಿದ್ದು, 1.5 ಲಕ್ಷ ಮಂದಿ ವೈರಸ್​ನಿಂದ ಪ್ರಾಣಬಿಟ್ಟಿದ್ದಾರೆ. (ಏಜೆನ್ಸೀಸ್)

    ಬಿಮ್ಸ್​ನ ಐಸಿಯುನಲ್ಲಿ ಮೃತಪಟ್ಟ ಕರೊನಾ ರೋಗಿ; ಆಂಬುಲೆನ್ಸ್​ಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ ಸಂಬಂಧಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts