More

    ಬೆಂಗಳೂರಿನ ಸಾದಿಕ್​ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ- ಎಚ್ಚರಿಕೆ ನೀಡಿದ್ರು ಸಚಿವ ಶ್ರೀರಾಮುಲು

    ಬೆಂಗಳೂರು: ದೇಶದ ಗಮನ ರಾಷ್ಟ್ರ ರಾಜಧಾನಿ ನವದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿನ ತಬ್ಲಿಘಿ ಜಮಾತ್​ ಮೇಲೆ ಕೇಂದ್ರೀಕೃತವಾಗಿದ್ದರೆ, ಅದರ ಸೈಡ್​ ಎಫೆಕ್ಟೋ ಎಂಬಂತೆ ರಾಜ್ಯ ರಾಜಧಾನಿ ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಇದರ ಬೆನ್ನಿಗೇ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಶಾ ಕಾರ್ಯಕರ್ತೆ ಕೃಷ್ಣವೇಣಿಯ ವಿಡಿಯೋ ಟ್ವಿಟರ್​ಗೆ ಅಪ್ಲೋಡ್ ಮಾಡಿ ಹಲ್ಲೆಕೋರರಿಗೆ ಕಡಕ್ ಎಚ್ಚರಿಕೆ ರವಾನಿಸಿದ್ದಾರೆ.

    ಇಲ್ಲಿ ಜಾತಿ, ಮತ, ಧರ್ಮ ಮುಖ್ಯವಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಕೋಟ್ಯಂತರ ಕನ್ನಡಿಗರ, ಭಾರತೀಯರ ಆರೋಗ್ಯ ಮುಖ್ಯ. ‌ಬೆಂಗಳೂರಿನ ಸಾಧಿಕ್ ಪಾಳ್ಯದಲ್ಲಿ ಕೆಲವು ಕಿಡಿಗೇಡಿಗಳು ಸೇರಿ ನರ್ಸ್ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಯಾರೇ ಆಗಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶ್ರೀರಾಮುಲು ಎಚ್ಚರಿಸಿದ್ದಾರೆ.

    ಮನೆ ಬಾಗಿಲಿಗೆ ಬಂದು #Covid19 ಬಗ್ಗೆ ಜಾಗೃತಿ ಮೂಡಿಸುವ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತರು ಹಾಗೂ ಈ ಸಂಕಷ್ಟದ ಸಮಯದಲ್ಲಿ ಹಗಲಿರುಳು ದುಡಿಯುತ್ತಿರುವವರು ದೇವರ ಸಮಾನ. ಅವರನ್ನು ಗೌರವದಿಂದ ನೋಡಿ. ಅವರ ಮೇಲೆ ಹಲ್ಲೆ ನಡೆದರೆ ನೋಡಿಕೊಂಡು ಸುಮ್ಮನೆ ಕೂರಲಾಗುವುದಿಲ್ಲ. ಎಚ್ಚರವಿರಲಿ!! ಎಂದು ಹಲ್ಲೆಕೋರರನ್ನು ಎಚ್ಚರಿಸಿದ್ದಾರೆ.

    ‘ಮಸೀದಿಯಿಂದ ಕೇಳಿಬಂತು ಒಂದು ಅನೌನ್ಸ್​ಮೆಂಟ್​, ಕ್ಷಣದಲ್ಲೇ ನೂರು ಜನ ಬಂದು ನಮ್ಮನ್ನು ಮುತ್ತಿಕೊಂಡ್ರು’; ಭಯಭೀತಗೊಳಿಸುವ ಘಟನೆ ತೆರೆದಿಟ್ರು ಆಶಾಕಾರ್ಯಕರ್ತೆ

    ತಬ್ಲಿಘಿ ಜಮಾತ್ ಮತ್ತು COVID19 ವಿವಾದದ ವಿಚಾರಗಳು ಏನೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts