VIDEO| ಅಜ್ಜಿ ಮನೆಯಲ್ಲಿ ರಾಬರ್ಟ್ ಬೆಡಗಿಯ ಅಡಿಕೆ ಸುಲಿಯುವಿಕೆ ಹೇಗಿದೆ ನೋಡಿ…

blank

ಬೆಂಗಳೂರು: ಭದ್ರಾವತಿ ಬೆಡಗಿ ಆಶಾ ಭಟ್​ ಮಾಡಿದ್ದು ’ರಾಬರ್ಟ್‘ ಸಿನಿಮಾ ಒಂದೇ ಆದರೂ, ಆ ಸಿನಿಮಾ ಇನ್ನೇನು ಮುಂದಿನ ವರ್ಷ ಬಿಡುಗಡೆ ಆಗಬೇಕಿದೆ. ಜನವರಿಯ ಆರಂಭದಿಂದ ಪ್ರಚಾರ ಕೆಲಸವೂ ಶುರುವಾಗಲಿದೆ. ಈ ನಡುವೆ ಚಿತ್ರದ ನಾಯಕಿ ಆಶಾ ಭಟ್ ಶಿರಸಿಯ ಅಜ್ಜಿ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ. ಅಡಿಕೆ ಸುಲಿಯುತ್ತ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಹೊಸ ಚಿತ್ರದ ಸಿದ್ಧತೆಯಲ್ಲಿ ಕೆ. ಮಂಜು ಮಗ ಶ್ರೇಯಸ್​

ಹಾಗೇ ಅಡಿಕೆ ಸುಲಿಯುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆಶಾ, ಅಜ್ಜಿ ಮನೆಯಲ್ಲಿ ಅಡಿಕೆ ಸುಲಿಯುವ ಮಜಾನೇ ಬೇರೆ ಎಂಬ ಕ್ಯಾಪ್ಶನ್ ನೀಡಿದ್ದಾರೆ. ವಿಡಿಯೋಕ್ಕೆ ಅಭಿಮಾನಿ ವಲಯದಿಂದ ಮೆಚ್ಚುಗೆಯ ಕಮೆಂಟ್​ಗಳು

ಇದನ್ನೂ ಓದಿ: ‘ಅಣ್ಣಾತ್ತೆ’ ಚಿತ್ರತಂಡ ನಾಲ್ವರಿಗೆ ಪಾಸಿಟಿವ್​; ಚಿತ್ರೀಕರಣಕ್ಕೆ ಸ್ಥಗಿತ

ಮಾಡೆಲಿಂಗ್​ನಲ್ಲಿ ಗುರುತಿಸಿಕೊಂಡು ಅದರ ದೆಸೆಯಿಂದ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿರುವ ಆಶಾ ಭಟ್, ರಾಬರ್ಟ್ ಸಿನಿಮಾ ಸಲುವಾಗಿ ಕಾಯುತ್ತಿದ್ದಾರೆ. ಆ ಸಿನಿಮಾಕ್ಕೆ ಸಿಗುವ ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ ಸಿನಿಮಾ ಆಯ್ದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಈಗಾಗಲೇ ಹಿಂದಿಯಲ್ಲಿ ಒಂದು ಸಿನಿಮಾ ಮಾಡಿದ್ದರಾದರೂ, ಕನ್ನಡದ ಸಿನಿಮಾ ಮೇಲೆಯೇ ಅವರ ಪೂರ್ತಿ ದೃಷ್ಟಿನೆಟ್ಟಿದೆ.

ಬಾಲಿವುಡ್​ನಲ್ಲಿ ಶುರುವಾಯ್ತು ‘ದಿಯಾ’ ರಿಮೇಕ್ ಕೆಲಸ; ಜನವರಿಯಿಂದ ಶೂಟಿಂಗ್​ ಶುರು

Share This Article

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…