More

    ಹಿಂದೆ ನಡೆದಿದ್ದ BRICS ಅಧಿಸೂಚನೆಯಲ್ಲೂ ‘ಭಾರತ’ ಹೆಸರಿನ ಬಳಕೆ! ASEAN ಶೃಂಗಸಭೆ ನೋಟಿಫಿಕೇಶನ್‍ನಲ್ಲೂ ಹೊಸ ಹೆಸರು!

    ನವದೆಹಲಿ: ಜಿ20 ಔತಣಕೂಟದ ಆಹ್ವಾನದಲ್ಲಿ ‘ಪ್ರೆಸಿಡೆಂಟ್ ಆಫ್ ಭಾರತ’ ಎಂದು ಉಲ್ಲೇಖಿಸಿದ ವಿಚಾರ, ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾರತವನ್ನು ‘ಭಾರತ್’ ಎಂದು ಮರುನಾಮಕರಣ ಮಾಡಲಾಗುವುದು ಎಂಬ ಊಹಾಪೋಹಗಳಿಗೆ ಕಾರಣವಾಗಿದ್ದು. ವಿವಾದಕ್ಕೆ ಕಾರಣವಾಗಿದೆ..

    ಆದರೆ, ‘ಭಾರತ’ ಪದವನ್ನು ದಾಖಲೆಯಲ್ಲಿ ಬಳಸುತ್ತಿರುವುದು ಮೊದಲಲ್ಲ. ಆಗಸ್ಟ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾದಲ್ಲಿ ನಡೆದ 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ನಂತರ ಗ್ರೀಸ್ಗೆ ಭೇಟಿ ನೀಡಿದ್ದರು. ಆಗಸ್ಟ್ 22-25ರಿಂದ ಉಭಯ ದೇಶಗಳಿಗೆ ಭೇಟಿ ನೀಡುವ ಸರ್ಕಾರದ ಅಧಿಸೂಚನೆಯಲ್ಲಿ ಅವರನ್ನು ‘ಭಾರತದ ಪ್ರಧಾನಿ’ ಎಂದು ಉಲ್ಲೇಖಿಸಲಾಗಿದೆ ಎನ್ನುವುದನ್ನು ಗಮನಿಸಬೇಕಾದ ವಿಚಾರ. ಇದಲ್ಲದೆ, ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಗೆ ಮುಂಚಿತವಾಗಿ, ಭಾರತೀಯ ಅಧಿಕಾರಿಗಳ ಗುರುತಿನ ಚೀಟಿಗಳಲ್ಲಿ ಈಗ ಭಾರತೀಯ ಅಧಿಕಾರಿಗಳ ಬದಲು ‘ಭಾರತದ ಅಧಿಕಾರಿ’ ಎಂದು ಬರೆಯಲಾಗುವುದು.

    ಹಿಂದೆ ನಡೆದಿದ್ದ BRICS ಅಧಿಸೂಚನೆಯಲ್ಲೂ ‘ಭಾರತ’ ಹೆಸರಿನ ಬಳಕೆ! ASEAN ಶೃಂಗಸಭೆ ನೋಟಿಫಿಕೇಶನ್‍ನಲ್ಲೂ ಹೊಸ ಹೆಸರು!

    ಆಸಿಯಾನ್ ಶೃಂಗಸಭೆಗೆ ಮೋದಿ ಭೇಟಿ

    ಈ ವಿವಾದಗಳ ನಡುವೆ, ಇದೀಗ ಪ್ರಧಾನಿ ಮೋದಿ, 20ನೇ ಆಸಿಯಾನ್ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆ (ಇಎಎಸ್)ಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು (ಸೆಪ್ಟೆಂಬರ್ 6) ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಗೆ ಒಂದು ದಿನ ಮುಂಚಿತವಾಗಿ, ಅವರ ಭೇಟಿಯ ಸಮಾರಂಭದ ನೋಟಿಫಿಕೇಶನ್‍ಗಳನ್ನು ಹೊರಡಿಸಲಾಗಿದೆ. ಅದರಲ್ಲೂ ಅವರನ್ನು ‘ಭಾರತದ ಪ್ರಧಾನ ಮಂತ್ರಿ’ ಎಂದು ಉಲ್ಲೇಖಿಸಲಾಗಿದೆ. ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜಕಾರ್ತಾಗೆ ಭೇಟಿ ನೀಡಲಿದ್ದಾರೆ.

    ಹಿಂದೆ ನಡೆದಿದ್ದ BRICS ಅಧಿಸೂಚನೆಯಲ್ಲೂ ‘ಭಾರತ’ ಹೆಸರಿನ ಬಳಕೆ! ASEAN ಶೃಂಗಸಭೆ ನೋಟಿಫಿಕೇಶನ್‍ನಲ್ಲೂ ಹೊಸ ಹೆಸರು!

    ವಿವಾದಕ್ಕೆ ಕಾರಣವೇನು?

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಿ20 ಔತಣಕೂಟದ ಆಹ್ವಾನ ಪತ್ರ ವಿವಾದಕ್ಕೆ ಕಾರಣವಾದ ನಂತರ, ಮೋದಿ ಸರ್ಕಾರವು ಇಂಡಿಯಾ ಹೆಸರನ್ನು ಕೈಬಿಟ್ಟು ಕೇವಲ ‘ಭಾರತ’ವನ್ನು ದೇಶದ ಹೆಸರಾಗಿ ಉಳಿಸಲು ಯೋಜಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

    ಸಂವಿಧಾನದಲ್ಲಿ ಏನಿದೆ?

    ಆದರೆ, ಭಾರತೀಯ ಸಂವಿಧಾನದ ಅನುಚ್ಛೇದ 1ರಲ್ಲಿ “India, that is Bharath shall be a Union of Staes” ಎಂದು ಉಲ್ಲೇಖಿಸಲಾಗಿದೆ. ಭಾರತದ ಸಂವಿಧಾನವು ಪ್ರಸ್ತುತ ದೇಶವನ್ನು “ಇಂಡಿಯಾ, ಅಂದರೆ ಭಾರತ” ಎಂದು ಉಲ್ಲೇಖಿಸುತ್ತದೆ. ಇದೀಗ ವಿವಾದ ಮುನ್ನೆಲೆಗೆ ಬಂದಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಜನರು ದೇಶದ ಹೆಸರನ್ನು ಸರಳವಾಗಿ “ಭಾರತ” ಎಂದು ತಿದ್ದುಪಡಿ ಒತ್ತಾಯಿಸುತ್ತಿದ್ದಾರೆ.

    ಸದ್ಯಕ್ಕೆ ಸೆಪ್ಟೆಂಬರ್ 18ರಿಂದ ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗಲಿದ್ದು, ಈ ಬದಲಾವಣೆಯನ್ನು ಜಾರಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿಯನ್ನು ಪರಿಚಯಿಸಬಹುದು ಎಂಬ ಊಹಾಪೋಹಗಳಿವೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts