More

    ಶಾರುಖ್ ಪುತ್ರನ ಜಾಮೀನು ಅರ್ಜಿ ವಜಾ; ನ್ಯಾಯಾಲಯದಲ್ಲಿ ನಡೆದದ್ದೇನು?

    ಮುಂಬೈ: ಕ್ರೂಸ್​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್ ಅವರ ಮಗ ಆರ್ಯನ್​ ಖಾನ್​ಗೆ ಇಂದು ಜಾಮೀನು ಲಭ್ಯವಾಗಿಲ್ಲ. ಆರ್ಯನ್​ ಖಾನ್​ ಮತ್ತು ಇತರ ಇಬ್ಬರು ಆರೋಪಿಗಳಾದ ಅರ್ಬಾಜ್​ ಮರ್ಚೆಂಟ್ ಮತ್ತು ಮುನ್​ಮುನ್​ ಧಮೇಚ ಅವರ ಜಾಮೀನು ಅರ್ಜಿಗಳನ್ನು ಮುಂಬೈನ ಮ್ಯಾಜಿಸ್ಟ್ರೇಟರ ಕೋರ್ಟು ತಿರಸ್ಕರಿಸಿದೆ.

    ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ(ಎನ್​ಸಿಬಿ) ಪರ ವಾದಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಆರೋಪಿಗಳು ಪ್ರಭಾವೀ ವ್ಯಕ್ತಿಗಳಾಗಿರುವುದರಿಂದ ಸಾಕ್ಷ್ಯಗಳನ್ನು ಮಾರ್ಪಡಿಸುವ ಸಾಧ್ಯತೆ ಇರುತ್ತದೆ ಹಾಗೂ ಪ್ರಕರಣದಲ್ಲಿ ಮಾದಕವಸ್ತುಗಳು ಜಪ್ತಿಪಡಿಸಿಕೊಳ್ಳಲಾಗಿರುವುದರಿಂದ ಜಾಮೀನು ಅರ್ಜಿಗಳನ್ನು ಸೆಷನ್ಸ್​ ಕೋರ್ಟ್​ ಮಾತ್ರ ಇತ್ಯರ್ಥಗೊಳಿಸಬಲ್ಲದು ಎಂದು ವಾದಿಸಿದರು.

    ಇದನ್ನೂ ಓದಿ: ತರಕಾರಿ, ಹಣ್ಣು, ಸೊಪ್ಪು, ಕಾಳಿನಿಂದಲೇ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಮಾನವನ ದೇಹ!

    ಶಾರುಖ್​ ಪುತ್ರನ ವಕೀಲರಾದ ಸತೀಶ್ ಮಾನೆಶಿಂಧೆ, ಆರ್ಯನ್​ನ ಬಳಿಯಿಂದ ಅಥವಾ ಆತನ ಬ್ಯಾಗಿನಲ್ಲಿ ಯಾವುದೇ ಡ್ರಗ್ಸ್​ ಲಭಿಸಿಲ್ಲವಾದ್ದರಿಂದ ಬಂಧಿಸಿಡಲು ಅವಕಾಶವಿಲ್ಲ. ಆತ ಗೌರವಾನ್ವಿತ ಕುಟುಂಬಕ್ಕೆ ಸೇರಿರುವುದರಿಂದ ತಲೆಮರೆಸಿಕೊಳ್ಳುವ ಆತಂಕವೂ ಇಲ್ಲ. ಆದ್ದರಿಂದ ಜಾಮೀನು ನೀಡಬೇಕೆಂದು ವಾದಿಸಿದರು.

    ವಿಚಾರಣೆ ನಂತರ ತೀರ್ಪು ಪ್ರಕಟಿಸಿದ ಮ್ಯಾಜಿಸ್ಟ್ರೇಟರು, ಜಾಮೀನು ಅರ್ಜಿಗಳು ತಮ್ಮ ಕೋರ್ಟಿನಲ್ಲಿ ನಿಲ್ಲುವಂಥವಲ್ಲ. ಆರೋಪಿಗಳು ಸೂಕ್ತ ನ್ಯಾಯಾಲಯದ ಮೊರೆ ಹೋಗಬೇಕೆಂದು ನಿರ್ದೇಶಿಸಿದ್ದಾರೆ. ಮ್ಯಾಜಿಸ್ಟ್ರೇಟರ ತೀರ್ಪಿನ ಪ್ರತಿ ಲಭಿಸಿದ ನಂತರ ಆರ್ಯನ್​ ಖಾನ್ ಮತ್ತು ಇತರ ಇಬ್ಬರು ಆರೋಪಿಗಳು ಸೆಷನ್ಸ್​ ಕೋರ್ಟ್​ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್)

    ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?

    VIDEO| ಭಾರತದ ಪ್ರಧಾನಿ ಇಚ್ಛಿಸಿದಲ್ಲಿ ಪಾಕ್​ ಕ್ರಿಕೆಟ್ ಮಂಡಳಿ ಕುಸಿಯಬಹುದು ಎಂದ ರಮೀಜ್ ರಾಜ

    ಮೇಡ್​ ಇನ್​ ಚೈನಾ ಕಾರನ್ನು ಭಾರತದಲ್ಲಿ ಮಾರಬೇಡಿ ಅಂತ ಟೆಸ್ಲಾಗೆ ಹೇಳಿದೀನಿ – ಸಾರಿಗೆ ಸಚಿವ ನಿತಿನ್ ಗಡ್ಕರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts