ತರಕಾರಿ, ಹಣ್ಣು, ಸೊಪ್ಪು, ಕಾಳಿನಿಂದಲೇ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಮಾನವನ ದೇಹ!

poshana abhiyana
Published on

ತುಮಕೂರು: ತರಕಾರಿ, ಹಣ್ಣು, ಕಾಳು, ಸೊಪ್ಪುಗಳಿಂದಲೇ ಮಾನವ ದೇಹದ ಚಿತ್ರ ರಚಿಸಿ ಪ್ರೌಢಶಾಲೆ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. ಇದು ಅಂತಿಂಥ ಚಿತ್ರವಲ್ಲ, ಯಾವುದನ್ನು ತಿಂದರೆ ಅದು ದೇಹದ ಯಾವ ಭಾಗಕ್ಕೆ ಉಪಯಕ್ತ, ಪೋಷಕಾಂಶ ಆಹಾರ ಯಾವುದು? ಎಂಬುದನ್ನ ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ಮೂಡಿಸಿದ್ದಾರೆ.

ಅಂದಹಾಗೆ ಈ ದೃಶ್ಯ ಕಂಡು ಬಂದದ್ದು ತುಮಕೂರು ತಾಲೂಕಿನ ಸಿರಿವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ. ಶುಕ್ರವಾರ ಪೋಷಣಾ ಅಭಿಯಾನ ಆಚರಿಸಲಾಯಿತು.

ಅಭಿಯಾನದ ಅಂಗವಾಗಿ 10ನೇ ತರಗತಿ ವಿದ್ಯಾರ್ಥಿಗಳು ಬಾದಾಮಿ, ಒಂದೆಲಗ, ಸೊಪ್ಪು, ಮೆಣಸು, ಟೊಮ್ಯಾಟೊ, ಬೀಟ್​ರೂಟ್​. ಬೀನ್ಸ್... ಪೋಷಕಾಂಶಯುಕ್ತ ತರಕಾರಿ ಹಣ್ಣುಗಳನ್ನ ಬಳಸಿ ಮಾನವನ ದೇಹ ಚಿತ್ರ ರಚಿಸಿದ್ದರು. ಉಪ ಪ್ರಾಂಶುಪಾಲರಾದ ಚೇತನಾ ಜಿ.ಟಿ., ಶಿಕ್ಷಕರಾದ ಉಮೇಶ್ ಸಿ.ಕೆ., ತುಕಾರಾಮ್ ಕೆ.ವಿ., ಕಾವ್ಯಾ ಕೆ., ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net