More

    ಕೋಲಾರದಲ್ಲಿ ಬಸ್​ ಆಕ್ಸಿಜನ್​ ಬ್ಯಾಂಕ್​ಗೆ ಚಾಲನೆ; ಕರೊನಾ ಮುಕ್ತ ಹಾಗೂ ಸಂಪೂರ್ಣ ವ್ಯಾಕ್ಸಿನೇಷನ್​ ಮಾಡುವ ಗ್ರಾಮ್ಕಕ್ಕೆ ಪ್ರೋತ್ಸಾಹ ಧನ

    ಕೋಲಾರ: ಆಕ್ಸಿಜನ್​ ಕೊರತೆ ನೀಗಿಸುವ ಸಲುವಾಗಿ ಕೋಲಾರದಲ್ಲಿ ಬಸ್​ ಆಕ್ಸಿಜನ್​ ಬ್ಯಾಂಕ್​ ಸೇವೆಗೆ ಮಂಗಳವಾರದಂದು ಚಾಲನೆ ನೀಡಲಾಯಿತು. ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಬಸ್​ಗಳಿಗೆ ಚಾಲನೆ ನೀಡಿದ್ದಾರೆ.

    ಚಾಲನೆ ನೀಡಿ ಮಾತನಾಡಿದ ಸಚಿವರು, “ಜಿಲ್ಲಾಸ್ಪತ್ರೆ ‌ಹಾಗೂ ಇತರೆಡೆ ಅವಶ್ಯಕತೆ ಇದ್ದಲ್ಲಿ ಇದನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಕೋಲಾರ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಕರೊನಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು. ಈಗಾಗಲೇ ಜಿಲ್ಲೆಯ 826 ಗ್ರಾಮಗಳು ಕರೊನಾ ಮುಕ್ತ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಯಾವ ಗ್ರಾಮವು ಕರೊನಾವನ್ನು ಸಂಪೂರ್ಣವಾಗಿ ತಡೆಯುವಲ್ಲಿ ಯಶಸ್ವಿಯಾಗುತ್ತದೆಯೋ ಅದಕ್ಕೆ ಪ್ರೋತ್ಸಾಹ ಧನ ನೀಡಲಾಗುವುದು” ಎಂದು ತಿಳಿಸಿದರು.

    ಕರೊನಾ ನಿಯಂತ್ರಣದ ಜತೆಗೆ ಲಸಿಕೆ ಪಡೆಯುವುದೂ ಅಷ್ಟೇ ಅವಶ್ಯಕ. ಯಾವ ಗ್ರಾಮವು ತನ್ನೆಲ್ಲ ನಿವಾಸಿಗಳಿಗೆ ಲಸಿಕೆ ನೀಡುವಲ್ಲಿ ಸಫಲವಾಗುತ್ತದೆಯೋ ಆ ಗ್ರಾಮಕ್ಕೂ ಕೂಡ ಪ್ರೋತ್ಸಾಹ ಧನ ಹಾಗೂ ಪ್ರಶಂಸಾ ಪತ್ರ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕುವೈತ್​ನಿಂದ ಬಂದಿರುವ ಆಕ್ಸಿಜನ್​ನಲ್ಲಿ 20 ಟನ್ ಆಕ್ಸಿಜನ್ ಕೋಲಾರಕ್ಕೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

    ಕೋಲಾರ ಜಿಲ್ಲೆಯಲ್ಲಿ ಮತ್ತೆ ನಾಲ್ಕು ದಿನ ಲಾಕ್ ಡೌನ್ ಮಾಡಲಾಗುವುದು. ಗುರುವಾರದಿಂದ ಸೋಮವಾರದ ವರೆಗೆ ಲಾಕ್​ಡೌನ್​ ಇರಲಿದೆ ಎಂದು ಅವರು ಹೇಳಿದ್ದಾರೆ.

    ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

    ಅರೆಬೆತ್ತಲೆಯಾಗಿ ಆನ್​ಲೈನ್​ ಕ್ಲಾಸ್​ ಮಾಡಿದ್ದ ಶಿಕ್ಷಕ ಅರೆಸ್ಟ್​! ಸಿನಿಮಾಗೆ ಬಾ ಎಂದವನನ್ನು ಜೈಲಿಗೆ ಕಳುಹಿಸಿದ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts