More

    ಅರೆಸ್ಟ್​ ಮಾಡೋದೆ ಮೋದಿಜಿ ಪ್ಲ್ಯಾನ್​: 5ನೇ ಬಾರಿಯೂ ಇಡಿ ವಿಚಾರಣೆ ತಪ್ಪಿಸಿಕೊಂಡ ಕೇಜ್ರಿವಾಲ್​

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಇಂದು ಕೂಡ ಹಾಜರಾಗದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಸತತ 5ನೇ ಬಾರಿಗೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಕೇಜ್ರಿವಾಲ್​ಗೆ ಸಮನ್ಸ್​ ನೀಡಿದೆ.

    ಪದೇಪದೆ ಸಮನ್ಸ್‌ ನೀಡುತ್ತಿರುವುದು ಕೇಜ್ರಿವಾಲ್​ ಅವರನ್ನು ಬಂಧಿಸುವ ಪ್ರಯತ್ನಗಳಾಗಿವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಏಜೆನ್ಸಿ ನೀಡಿದ ನಾಲ್ಕು ಸಮನ್ಸ್‌ಗೆ ಕೇಜ್ರಿವಾಲ್​ ಯಾವುದೇ ಉತ್ತರ ನೀಡಿಲ್ಲ. ಬುಧವಾರ ಐದನೇ ಸಮನ್ಸ್ ನೀಡಲಾಗಿದ್ದು, ಇದು ಕಾನೂನುಬಾಹಿರ ಎಂದು ದೆಹಲಿ ಸಿಎಂ ಸಮರ್ಥನೆ ನೀಡಿದ್ದಾರೆ.

    ಇಡಿ ಸಮನ್ಸ್ ಕೇಜ್ರಿಬಾಲ್​ ಅವರನ್ನು ಬಂಧಿಸುವ ಮೋದಿಜಿ ಅವರ ಗುರಿಯಾಗಿದೆ. ಬಂಧಿಸುವ ಮೂಲಕ ದೆಹಲಿ ಸರ್ಕಾರವನ್ನು ಉರುಳಿಸಲು ಮೋದಿ ಬಯಸಿದ್ದಾರೆ. ಆದರೆ, ಈ ರೀತಿ ನಡೆಯುವುದಕ್ಕೆ ಎಂದಿಗೂ ಬಿಡುವುದಿಲ್ಲ ಎಂದು ಎಎಪಿ ಸವಾಲು ಹಾಕಿದೆ.

    2023ರಲ್ಲಿ ನವೆಂಬರ್​ 2 ಮತ್ತು ಡಿಸೆಂಬರ್​ 21ರಂದು ವಿಚಾರಣೆಗೆ ಗೈರು ಹಾಜರಾದ ಕೇಜ್ರಿವಾಲ್​, ಈ ವರ್ಷ ಜನವರಿ 3 ಮತ್ತು ಜನವರಿ 18ರಂದು ಇಡಿ ವಿಚಾರಣೆ ತಪ್ಪಿಸಿಕೊಂಡಿದ್ದಾರೆ.

    ಜಾರಿ ನಿರ್ದೇಶನಾಲಯದ ಪ್ರಕಾರ, 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯು ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿತು ಮತ್ತು ಲಂಚ ನೀಡಿದ ಕೆಲವು ವಿತರಕರಿಗೆ ಅನುಕೂಲವಾಯಿತು ಎಂದು ಆರೋಪಿಸಿದ್ದು, ತನಿಖೆ ಮುಂದುವರಿಸಿದೆ. (ಏಜೆನ್ಸೀಸ್​)

    ಲೋಕ ಸಮರ 2024: ಸಕ್ಕರೆ ನಾಡಲ್ಲಿ ನಿಖಿಲ್​ ಸ್ಪರ್ಧೆ ಫಿಕ್ಸಾ? ಅಖಾಡಕ್ಕೆ ರಮ್ಯಾ? ಸುಮಲತಾ ಕಥೆ ಏನು?

    ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ನಂ. 1: ಭಾರತಕ್ಕೆ ಎಷ್ಟನೇ ಸ್ಥಾನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts