More

    ಸರ್ವಾಧ್ಯಕ್ಷತೆಗೆ ಶರತ್ ಕಲ್ಕೋಡು ಆಯ್ಕೆ ಸಕಾಲಿಕ

    ತೀರ್ಥಹಳ್ಳಿ: ಮೌಲಿಕ ಅಂಕಣ, ಲೇಖನಗಳು ಸೇರಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಶರತ್ ಕಲ್ಕೋಡ್ ಅವರನ್ನು ತಾಲೂಕಿನ ಗುಡ್ಡೆಕೇರಿಯಲ್ಲಿ ನಡೆಯುವ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಕಾಲಿಕ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    ಗುಡ್ಡೆಕೇರಿ ಸಮೀಪದ ಕಲ್ಕೋಡಿನಲ್ಲಿರುವ ಅವರ ನಿವಾಸದಲ್ಲಿ ಕಸಾಪದಿಂದ ಆಹ್ವಾನ ನೀಡಿ, ಕನ್ನಡ ಸಾಹಿತ್ಯ ಮಾತ್ರವಲ್ಲದೆ ಪತ್ರಿಕೋದ್ಯಮಿಯಾಗಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಥೆ, ಕವನ, ಪ್ರಬಂಧ ಮತ್ತು ಅಂಕಣ, ಲೇಖನಗಳ ಮೂಲಕ ಅಕ್ಷರ ಲೋಕದಲ್ಲಿ ಚಿರಪರಿಚಿತರಾಗಿರುವ ಶರತ್ ಕಲ್ಕೋಡ್ ಇಂದಿಗೂ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ ಎಂದರು.

    ಸಾಹಿತ್ಯದ ಜತೆಯಲ್ಲಿ ಕೃಷಿಕರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ಸಾಧನೆಗೆ ಮಾಸ್ತಿ ಪ್ರಶಸ್ತಿ ಮತ್ತು ಬೆಂಗಳೂರು ಮಹಾನಗರ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗಳು ಸಂದಿವೆ. ಸಾಹಿತ್ಯ ಸುಧೆಯನ್ನು ಗ್ರಾಮೀಣ ಪ್ರದೇಶಕ್ಕೂ ಹರಿಸುವ ಮತ್ತು ಶ್ರೀಸಾಮಾನ್ಯರೂ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ತಾಲೂಕು ಸಾಹಿತ್ಯ ಪರಿಷತ್ ಈ ಬಾರಿ ಗ್ರಾಮೀಣ ಪ್ರದೇಶವಾದ ಗುಡ್ಡೆಕೇರಿಯಲ್ಲಿ ನಡೆಸಲು ತೀರ್ವನಿಸಿರುವುದು ಪ್ರಶಂಸನೀಯ ಎಂದರು.

    ಕಸಾಪ ತಾಲೂಕು ಅಧ್ಯಕ್ಷ ಆಡಿನಸರ ಸತೀಶ್​ಕುಮಾರ್, ಗಾಯಿತ್ರಿ ಶರತ್, ತಾಪಂ ಸದಸ್ಯೆ ವೀಣಾ ಗಿರೀಶ್, ಆಗುಂಬೆ ಗ್ರಾಪಂ ಸದಸ್ಯರಾದ ಶಶಾಂಕ್ ಹೆಗ್ಡೆ, ಶ್ವೇತಾ ಗಿರೀಶ್, ಜಯಪ್ರಕಾಶ್, ರಾಘವೇಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ನಂದನ್ ಹಸಿರುಮನೆ, ಎಪಿಎಂಸಿ ಸದಸ್ಯ ಹಸಿರುಮನೆ ಮಹಾಬಲೇಶ್, ಕೊರೊಡಿ ಕೃಷ್ಣಪ್ಪ, ಕರವೇ ಮುಖಂಡರಾದ ವೆಂಕಟೇಶ ಹೆಗ್ಡೆ, ಹಷೇಂದ್ರ ಪಡುವಳ್ಳಿ, ನಾಬಳ ಶಚ್ಚೀಂದ್ರ ಹೆಗ್ಡೆ, ತಾಲೂಕು ಲೇಖಕಿಯರ ಸಂಘದ ಅಧ್ಯಕ್ಷೆ ನೇತ್ರಾವತಿ, ಸುಷ್ಮಾ ಕುಮಾರಿ, ಕಸಾಪ ನಿರ್ದೇಶಕ ಡಾನ್ ರಾಮಣ್ಣ ಶೆಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts