More

    ಪ್ರಜ್ವಲ್ ರೇವಣ್ಣ ರನ್ನು ಕೂಡಲೇ ಬಂಧಿಸಿ

    ಮೂಡಿಗೆರೆ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ,ಅತ್ಯಾಚಾರ ಹಾಗೂ ಮಹಿಳೆಯ ಅಪಹರಣ ಕೃತ್ಯದಲ್ಲಿ ಭಾಗಿಯಾಗಿರುವ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
    ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಂಗಡಿ ಚಂದ್ರು ಮಾತನಾಡಿ, ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರಜ್ವಲ್ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದು 20ದಿನವಾದರೂ ಆರೋಪಿಯನ್ನು ಬಂಧಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜನರ ಕಣ್ಣಿಗೆ ಮಣ್ಣೆರಚಲು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆರೋಪಿಯನ್ನು ಕೂಡಲೇ ಬಂಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಬೇಕು ಎಂದು ಮನವಿ ಮಾಡದರು.
    ಪ್ರಕರಣದಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಭಾಗಿಯಾಗಿರುವ ಶಂಕೆಯಿದೆ. ಎಸ್‌ಐಟಿ ರಚನೆಯಿಂದ ಕೆಲ ರಾಜಕೀಯ ಪಕ್ಷದ ಮುಖಂಡರು ಸಿಕ್ಕಿ ಬೀಳುವ ಭಯದಲ್ಲಿದ್ದಾರೆ. ಸಿಬಿಐ ತನಿಖೆ ನಡೆದರೆ ಕೇಂದ್ರ ಸರ್ಕಾರದ ಪ್ರಭಾವ ಬಳಸಿ ಪ್ರಕರಣದಿಂದ ನುಣುಚಿಕೊಳ್ಳಬಹುದು ಎಂದು ಬಿಜೆಪಿ ಮುಖಂಡರು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸಿಬಿಐ ತನಿಖೆ ಅಗತ್ಯವಿಲ್ಲ. ಸರ್ಕಾರ ಅವರ ಕೈಕಟ್ಟಿ ಹಾಕಬಾರದು. ಆರೋಪಿಗಳನ್ನು ಹೆಡೆಮುರಿ ಕಟ್ಟಲು ಸರ್ಕಾರ ಎಸ್‌ಐಟಿಗೆ ಸಂಪೂರ್ಣ ಅಧಿಕಾರ ನೀಡಬೇಕು. ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿ ಆರೋಪಿ ಪ್ರಜ್ವಲ್ ರೇವಣ್ಣನನ್ನು ಭಾರತಕ್ಕೆ ಕರೆತರಬೇಕು ಎಂದು ಒತ್ತಾಯಿದರು.
    ಈ ಪ್ರಕರಣದಿಂದ ದೇಶ ತಲೆತಗ್ಗಿಸುವ ಸ್ಥಿತಿಗೆ ತಲುಪಿದೆ. ಸಂತ್ರಸ್ತೆಯರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಕೂಡಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
    ತಹಸೀಲ್ದಾರ್ ಶೈಲೇಶ್ ಪರಮಾನಂದ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್‌ಡಿಪಿಐ ಮುಖಂಡರಾದ ಎಂ.ಯು.ಶರೀಫ್, ಕೆ.ಪಿ.ಖಾಲಿದ್, ನಾಗೇಶ್ ಸಾಲ್ಮರ, ಜಾವೀದ್, ರಫೀಕ್, ಸಂತೋಷ್, ಮನ್ಸೂರ್, ನಜರತ್ ಭಾನು, ನಯಿಮ್ ಅಬ್ತರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts