More

    ಕರೊನಾ ಯೋಧರಿಗೆ ಸೇನೆಯಿಂದ ಹೂಮಳೆಯ ಗೌರವ

    ನವದೆಹಲಿ:ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತೊಡಗಿರುವ ದೇಶದ ಆರೋಗ್ಯ ಕಾರ್ಯಕರ್ತರ ಕಾರ್ಯ ಶ್ಲಾಘಿಸಿ ಕೃತಜ್ಞತೆ ಸಲ್ಲಿಸುವಲ್ಲಿ ಸಶಸ್ತ್ರ ಪಡೆಗಳು ಭಾನುವಾರ ತಮ್ಮದೇ ಆದ ಸಾಂಪ್ರದಾಯಿಕ ಶೈಲಿಯಲ್ಲಿ ಹಲವು ವಿಶೇಷ ಚಟುವಟಿಕೆಗಳನ್ನು ನಡೆಸಿದವು.

    ಕಳೆದೆರಡು ತಿಂಗಳಿಂದ ಹಗಲಿರುಳೆನ್ನದೆ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಸೇರಿದಂತೆ ಅಸಂಖ್ಯಾತ ಸ್ವಯಂ ಸೇವಕರೂ ಕುಟುಂಬ, ಸಂಸಾರದಿಂದ ದೂರ ಉಳಿದು ಕರೊನಾ ವಿರುದ್ಧದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ತ್ಯಾಗ ಹಾಗೂ ಕಠಿಣ ಶ್ರಮದಿಂದ ಸೇವೆ ಸಲ್ಲಿಸುತ್ತಿರುವ ಇವರೆಲ್ಲರೂ ಅತ್ಯುನ್ನತ ಗೌರವಕ್ಕೆ ಅರ್ಹರಾಗಿರುತ್ತಾರೆ. ಗಡಿ ಕಾಯುವ ಸೈನಿಕರಂತೆಯೇ ಇವರೂ ರಾಷ್ಟ್ರ ರಕ್ಷಣೆಯಲ್ಲಿ ಅತ್ಯುನ್ನತ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಸೇನಾ ಪಡೆ ಕರೊನಾ ವಿರುದ್ಧ ಹೋರಾಡುತ್ತಿರುವ ಈ ಅಪ್ರತಿಮ ಯೋಧರಿಗೆ ವಿಶೇಷ ಕೃತಜ್ಞತೆ ಹಾಗೂ ಗೌರವ ಸಲ್ಲಿಸುತ್ತಿದೆ.

    ಇದನ್ನೂ ಓದಿ: ದೆಹಲಿಯಲ್ಲಿ ನಾಳೆಯಿಂದ ಮನೆಗೆಲಸದವರು ಕೆಲಸಕ್ಕೆ ಹೋಗಬಹುದು…

    ಮಿಲಿಟರಿ ಬ್ಯಾಂಡ್ ಪ್ರದರ್ಶನಗಳು, ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮೇಲೆ ಹೂವಿನ ದಳಗಳನ್ನು ಸುರಿಸುವಂತಹ ಚಟುವಟಿಕೆಗಳನ್ನು ನಡೆಸಿದವು. ಸಂಜೆ ನೌಕಾಪಡೆ ಯುದ್ಧ ನೌಕೆಗಳನ್ನು ಬೆಳಗಿಸಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತದೆ.

    ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮಾತನಾಡಿ, ವಾಯುಪಡೆಯು ಶ್ರೀನಗರದಿಂದ ತ್ರಿವೇಂದ್ರಂಗೆ ಫ್ಲೈಪಾಸ್ಟ್ ನಡೆಸುತ್ತದೆ ಮತ್ತು ಇನ್ನೊಂದು ಅಸ್ಸಾಂನ ದೀಭ್ರೂಗಢದಿಂದ ಗುಜರಾತ್​​ದ ಕಛ್​ವರಗೆ ನಡೆಯಲಿದ್ದು, ಇದರಲ್ಲಿ ಸಾರಿಗೆ ಮತ್ತು ಯುದ್ಧ ವಿಮಾನಗಳೂ ಇರುತ್ತವೆ ಎಂದಿದ್ದರು.

    ಇದನ್ನೂ ಓದಿ: ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ

    ಸೇನೆ ದೇಶದ ಪ್ರತಿಯೊಂದು ಜಿಲ್ಲೆಯ ಕೆಲವು ಕೋವಿಡ್- 19 ಆಸ್ಪತ್ರೆಗಳಲ್ಲಿ ಮೌಂಟೇನ್ ಬ್ಯಾಂಡ್ ಪ್ರದರ್ಶನ ನಡೆಸಲಿದೆ ಎಂದು ಅವರು ಹೇಳಿದ್ದರು. ದೆಹಲಿಯ ಪೊಲೀಸ್ ಸ್ಮಾರಕದಲ್ಲಿ ಮತ್ತು ಇತರ ನಗರಗಳಲ್ಲಿ ಮಾಲಾರ್ಪಣೆ ಮಾಡುವುದರೊಂದಿಗೆ ಕೃತಜ್ಱತೆ ಸಲ್ಲಿಸುವ ಕಾರ್ಯಕ್ರಮಗಳು ಆರಂಭವಾಗಲಿದ್ದು, ರಾಷ್ಟ್ರ ವ್ಯಾಪಿ ಲಾಕ್​ಡೌನ್ ಅವಧಿಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದರು. (ಏಜೆನ್ಸೀಸ್​)

    ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts