More

    ಇದೇ ಅರ್ಜುನ್ ಜನ್ಯ ಹುಟ್ಟುಹಬ್ಬದ ಸ್ಪೆಷಾಲಿಟಿ …

    ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಕಂಪೋಸರ್ ಎಂದೇ ಜನಪ್ರಿಯರಾಗಿರುವ ಅರ್ಜುನ್ ಜನ್ಯ, ಬುಧವಾರವಷ್ಟೇ (ಮೇ 13) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತೀ ವರ್ಷ ಹೆಚ್ಚು ಧಾಂ ಧೂಂ ಇಲ್ಲದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅರ್ಜುನ್ ಜನ್ಯ, ಈ ವರ್ಷ ಸಹ ಮನೆ ಮಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಆರ್‌ಆರ್‌ಆರ್’ ಪೋಸ್ಟ್‌ಪೋನ್ ಆಗಿದ್ದರಿಂದ ಎಂಟ್ರಿ ಕೊಡ್ತಿದ್ದಾರಾ ರಜನಿಕಾಂತ್?

    ಹೀಗಿರುವಾಗಲೇ ಬುಧವಾರ ರಾತ್ರಿ ನಿರ್ದೇಶಕ ಯೋಗರಾಜ್ ಭಟ್, ಗಾಯಕ ವಿಜಯ್‌ಪ್ರಕಾಶ್, ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮುಂತಾದವರು ಜನ್ಯ ಮನೆಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟಿದ್ದಷ್ಟೇ ಅಲ್ಲ, ಅವರಿಗೊಂದು ವಿಶೇಷವಾದ ಗ್‌ಟಿ ಸಹ ಕೊಟ್ಟಿದ್ದಾರೆ. ಆ ಗ್‌ಟಿ ಏನು ಎಂಬ ಪ್ರಶ್ನೆ ಬಂತಾ? ಅದೇ ಹಾರ್ಮೋನಿಯಂ ಆಕಾರದ ಕೇಕ್.

    ಹೌದು, ಅರ್ಜುನ್ ಜನ್ಯ ಸದಾ ವಾದ್ಯಗಳಿಂದ ಸುತ್ತವರಿದವರು. ಅಷ್ಟೇ ಅಲ್ಲ, ಹಲವು ವಾದ್ಯಗಳನ್ನು ಸುಲಭವಾಗಿ ನುಡಿಸಬಲ್ಲವರು. ಅರ್ಜುನ್ ಅವರ ವಾದ್ಯ ಪ್ರೀತಿಯ ಬಗ್ಗೆ ಗೊತ್ತಿದ್ದ ಅವರು ಸ್ನೇಹಿತರು, ಹಾರ್ಮೋನಿಯಂ ಆಕಾರದ ಕೇಕ್ ಮಾಡಿಸಿಕೊಂಡು ಹೋಗಿದ್ದಾರೆ. ಆ ಕೇಕ್ ಕತ್ತರಿಸಿ, ಅರ್ಜುನ್ ಜನ್ಯ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಬಾಹುಬಲಿ’ ಜತೆಗೆ ಭಾಗ್ಯಶ್ರೀ … ಮತ್ತೆ ಬಂದ ‘ಮೈನೇ ಪ್ಯಾರ್ ಕಿಯಾ’ ಚೆಲುವೆ

    ಅರ್ಜುನ್ ಜನ್ಯ ಸದ್ಯಕ್ಕೆ ಕನ್ನಡ ಚಿತ್ರರಂಗದ ಸಖತ್ ಬ್ಯುಸಿ ಸಂಗೀತ ನಿರ್ದೇಶಕ. ಅವರು ಸಂಗೀತ ನಿರ್ದೇಶನದ ‘ಕೋಟಿಗೊಬ್ಬ 3’, ‘ರಾಬರ್ಟ್’, ‘ಗಾಳಿಪಟ 2’, ‘ರೆಮೋ’, ‘ಏಕ್ ಲವ್ ಯಾ’ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಆ ಚಿತ್ರಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಬೇಕಿವೆ.

    ಇದು ಸ್ಟೈಲ್ ಅಲ್ಲ; ಪ್ಯಾಚಪ್ … ಅಮಿತಾಭ್ ಬಿಚ್ಚಿಟ್ಟ ಯಾರಿಗೂ ಗೊತ್ತಿಲ್ಲದ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts